ವಿಶ್ವ ವೈದ್ಯ ದಿನದ ಪ್ರಯುಕ್ತ ವೈದ್ಯರಾದ ಡಾ. ವೆಂಕಟೇಶ ಹೆಬ್ಬಳ್ಳಿ ರವರಿಗೆ ಸನ್ಮಾನ.
ರಾಮದುರ್ಗ ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಭಕ್ತ ಮಂಡಳಿ ರಾಮದುರ್ಗ ವತಿಯಿಂದ ಪ್ರತಿ ಮಂಗಳವಾರ ಸಾಯಂಕಾಲ 8 ಗಂಟೆಗೆ ನಗರದ ತೇರಬಜಾರದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಹನುಮಾನ್ ಚಾಲೀಸಾ ಪಠಣ ಮಾಡುತ್ತಿದ್ದು, ನೆನ್ನೆ ಮಂಗಳವಾರ ದಿನಾಂಕ 01/07/2025 ರಂದು ವಿಶ್ವ ವೈದ್ಯ ದಿನದ ಪ್ರಯುಕ್ತ ನಗರದ ಖ್ಯಾತ ವೈದ್ಯರಾದ ಶ್ರೀಯುತ ಡಾ. ವೆಂಕಟೇಶ ಹೆಬ್ಬಳ್ಳಿ ಇವರನ್ನು ಸತ್ಕರಿಸುವ ಮೂಲಕ ಸಮಾಜಕ್ಕೆ ವೈದ್ಯರು ಮಾಡುತ್ತಿರುವ ಸೇವೆಯನ್ನು ಸ್ಮರಿಸಿಕೊಳ್ಳಲಾಯಿತು. ಪುರಾಣಗಳಲ್ಲಿಯೇ ಹೇಳುವಂತೆ ವೈದ್ಯೋ ನಾರಾಯಣೋ ಹರಿಃ ಎಂಬಂತೆ ವೈದ್ಯನನ್ನು…
