ಕೋದಂಡರಾಮ ಕರುನಾಡು

ಕನ್ನಡ ಸಾಹಿತ್ಯ ಪರಿಷತ್ತಿನ ಪುನಶ್ಚೇತನಕ್ಕೆ ಜಾಣಗೆರೆ ವೆಂಕಟರಾಮಯ್ಯ ಅವರ ಸಂಕಲ್ಪ

ಕನ್ನಡ-ಕನ್ನಡ ನಿಘಂಟು ಯೋಜನೆಗೆ ಮರುಚಾಲನೆ, ‘ಕನ್ನಡ ನುಡಿ’ ಪತ್ರಿಕೆಗೆ ಮರುಜೀವ, ಯುವಜನರನ್ನು ಸಾಹಿತ್ಯದತ್ತ ಸೆಳೆಯಲು ಹಲವು ಮಹತ್ವದ ಯೋಜನೆಗಳ ಭರವಸೆ ಬೆಂಗಳೂರು: “ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯ್ ಹೋಲುದ್ರೂ ಮೂಗ್ನಲ್ಲಾದ್ರು ಕನ್ನಡ್ ಪದವನ್ನೇ ಆಡ್ತೀನಿ” ಎಂಬ ಜಿ.ಪಿ. ರಾಜರತ್ನಂ ಅವರ ಕನ್ನಡಾಭಿಮಾನದ ಸಾಲುಗಳು ಕನ್ನಡಿಗರ ಭಾಷಾಪ್ರೇಮದ ಪ್ರತೀಕವಾಗಿವೆ. ಕನ್ನಡದ ಅಸ್ಮಿತೆ, ಭಾಷೆಯ ಘನತೆ, ಸಾಹಿತ್ಯದ ಶ್ರೀಮಂತಿಕೆ ಮತ್ತು ಕನ್ನಡಪರ ಹೋರಾಟದ ಆಶಯಗಳನ್ನು ಮುಂದಿಟ್ಟುಕೊಂಡು ಕನ್ನಡ ಸಾಹಿತ್ಯ ಪರಿಷತ್ತಿಗೆ ಹೊಸ ಚೈತನ್ಯ ತುಂಬುವ ಸಂಕಲ್ಪವನ್ನು ಕನ್ನಡಪರ ಹೋರಾಟಗಾರ, ಸಾಹಿತಿ…

Read More

ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಜಾಣಗೆರೆ ವೆಂಕಟರಾಮಯ್ಯ ಅಭ್ಯರ್ಥಿತನ

ಕನ್ನಡ ಭಾಷೆ,ನಾಡಿನ ಸಾಂಸ್ಕೃತಿಕ ಸ್ವಾಭಿಮಾನ ಹಾಗೂ ಕನ್ನಡ ಸಾಹಿತ್ಯದ ಸರ್ವಾಂಗೀಣ ಬೆಳವಣಿಗೆಯ ಮಹದಾಸೆಯಿಂದ  ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಶ್ರಯ ಮತ್ತು ಪ್ರೇರಣೆಯಲ್ಲಿ ೧೯೧೫ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು. ಕನ್ನಡ ನಾಡಿನ ವಿವಿಧ ಭಾಗಗಳಲ್ಲಿ ಚದುರಿಹೋಗಿದ್ದ ಕನ್ನಡದ ಮನಸ್ಸುಗಳನ್ನು ಒಂದೇ ವೇದಿಕೆಯಡಿ ಒಗ್ಗೂಡಿಸಿ, ಕನ್ನಡ ಭಾಷೆ–ಸಾಹಿತ್ಯ–ಸಂಸ್ಕೃತಿಯ ಬೆಳವಣಿಗೆಗೆ ಶ್ರಮಿಸುವುದು ಪರಿಷತ್ತಿನ ಮೂಲ ಆಶಯವಾಗಿತ್ತು. ಒಂದು ಶತಮಾನಕ್ಕೂ ಹೆಚ್ಚು ಕಾಲ ಕನ್ನಡಿಗರ ಭಾವನೆಗಳಿಗೆ, ಆಶಯಗಳಿಗೆ ಹಾಗೂ ಭಾಷಾ–ಸಾಂಸ್ಕೃತಿಕ ಹಕ್ಕುಗಳಿಗೆ ಪ್ರಾತಿನಿಧಿಕ ಧ್ವನಿಯಾಗಿ ಪರಿಷತ್ತು ನಡೆದುಕೊಂಡು ಬಂದಿದೆ. ಕನ್ನಡ…

Read More

ಜಾಣಗೆರೆ ೭೫: ಸಂಭ್ರಮದ ವೇದಿಕೆಯಲ್ಲಿ ಮತ್ತೆ ಮೊಳಗಿದ ಹೋರಾಟದ ಘೋಷಣೆ!

ಹೋರಾಟಗಾರನಿಗೆ ಸನ್ಮಾನವಲ್ಲ, ಹೋರಾಟದ ಪರಂಪರೆಗೆ ಪುನರ್‌ಜಾಗೃತಿ — ಜಾಣಗೆರೆಯವರ ೭೫ಕ್ಕೆ ಸಾಕ್ಷಿಯಾದ ಬೆಂಗಳೂರು ಬೆಂಗಳೂರು ೨೯: ಅದು ಕೇವಲ ೭೫ರ ಸಂಭ್ರಮವಾಗಿರಲಿಲ್ಲ.ತಲೆಮಾರಿನ ಹೋರಾಟದ ನೆನಪುಗಳನ್ನು ಮತ್ತೆ ಕೆದಕಿದ ದಿನ. ಕನ್ನಡದ ನೆಲ, ಜಲ, ಭಾಷೆ, ಸಂಸ್ಕೃತಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಬೀದಿಗಿಳಿದ ಹೋರಾಟಗಾರನ ಬದುಕಿಗೆ ಗೌರವ ಸಲ್ಲಿಸುವ ನೆಪದಲ್ಲಿ, ಮತ್ತೆ ಹೋರಾಟಕ್ಕೆ ಇಳಿಯಬೇಕಾದ ಕಾಲ ಬಂದಿದೆ ಎಂಬ ಎಚ್ಚರಿಕೆಯೂ ಮೊಳಗಿದ ದಿನ. ಅದು ಜಾಣಗೆರೆ ವೆಂಕಟರಾಮಯ್ಯ  ಅವರ ೭೫ರ ಸಂಭ್ರಮಕ್ಕೆ ಬೆಂಗಳೂರಿನ ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗದಿಂದಲೇ…

Read More

ಭಿನ್ನ ವ್ಯಕ್ತಿತ್ವಕ್ಕೆ ಸಾಕ್ಷಿಯಾದ ಸಭಾಪತಿ!

ಸಾಮಾನ್ಯವಾಗಿ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸಚಿವರು, ಶಾಸಕರು ಹಾಗೂ ಗಣ್ಯರು ಆಗಮಿಸಿದಾಗ, ತಮ್ಮ ಭಾಷಣ ಮುಗಿಸಿ ಮತ್ತೊಂದು ಕಾರ್ಯಕ್ರಮ ಅಥವಾ ತುರ್ತು ಕೆಲಸದ ನೆಪದಲ್ಲಿ ಕಾರ್ಯಕ್ರಮ ಪೂರ್ಣಗೊಳ್ಳುವ ಮುನ್ನವೇ ನಿರ್ಗಮಿಸುವುದು ಕಂಡುಬರುತ್ತದೆ. ಆದರೆ ‘ಜಾಣಗೆರೆ–75’ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ಅವರು ಇದಕ್ಕೆ ತದ್ವಿರುದ್ಧವಾದ ನಡೆ ತೋರುವ ಮೂಲಕ ಗಮನ ಸೆಳೆದರು.ಜಾಣಗೆರೆ ವೆಂಕಟರಾಮಯ್ಯ ಹಾಗೂ ಅವರ ಧರ್ಮಪತ್ನಿಯನ್ನು ಸನ್ಮಾನಿಸಿದ ಬಳಿಕ ಸಲೀಂ ಅಹ್ಮದ್ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಕಾರ್ಯಕ್ರಮದಿಂದ ನಿರ್ಗಮಿಸಲಿದ್ದಾರೆ ಎಂದೇ ಅಲ್ಲಿದ್ದವರು ಭಾವಿಸಿದ್ದರು….

Read More

ಕಸಾಪ ರಾಜ್ಯಾಧ್ಯಕ್ಷರಾದರೆ ೭೫ರ ಸಮಾರಂಭ ಅರ್ಥಪೂರ್ಣ

ಬೆಂಗಳೂರು: ಜಾಣಗೆರೆಯವರ ೭೫ರ ಸಂಭ್ರಮಕ್ಕೆ ಅರ್ಥ ತುಂಬಬೇಕಾದರೆ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಅಗತ್ಯ ಕನ್ನಡದ ಅಸ್ಮಿತೆ, ಕನ್ನಡಿಗರ ಸ್ವಾಭಿಮಾನ ಮತ್ತು ಕನ್ನಡಪರ ಹೋರಾಟದ ಧ್ವನಿಯಾಗಿ ಹಲವು ದಶಕಗಳಿಂದ ತಮ್ಮದೇ ಆದ ಛಾಪು ಮೂಡಿಸಿರುವ ಜಾಣಗೆರೆ ವೆಂಕಟರಾಮಯ್ಯ ಅವರ ೭೫ನೇ ವರ್ಷದ ಅಭಿನಂದನಾ ಸಮಾರಂಭವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಪಾರ ಅಭಿಮಾನಿಗಳು, ಕನ್ನಡಪರ ಹೋರಾಟಗಾರರು, ಸಾಹಿತಿಗಳು ಹಾಗೂ ವಿವಿದ ಕ್ಷೇತ್ರಗಳ ಗಣ್ಯರ ಸಮ್ಮುಖದಲ್ಲಿ ಆಗಸ್ಟ್ ೨೯ ರಂದು ನಡೆದಿದೆ. ರವೀಂದ್ರ ಕಲಾಕ್ಷೇತ್ರದಲ್ಲಿ ಜಾಣಗೆರೆಯವರ ಅಭಿನಂದನಾ ಕಾರ್ಯಕ್ರಮ ನಡೆದಿರುವುದು…

Read More