ರಾಮದುರ್ಗದಲ್ಲಿ ಸುರಿದ ಗುಡುಗು ಸಹಿತ ಮಳೆ
ರಾಮದುರ್ಗ ಪಟ್ಟಣದಲ್ಲಿ ಮಂಗಳವಾರ 20 ನಿಮಿಷ ಸುರಿದ ಮಳೆ ಜನತೆಗೆ ತಂಪನ್ನೆರೆಯಿತು. ಗುಡುಗು ಹಾಗೂ ಬಿರುಗಾಳಿ ಸಹಿತ ಸುರಿದ ಮಳೆ ಜನರಿಗೆ ಸ್ವಲ್ಪ ಸಮಾಧಾನ ನೀಡಿತು. ಕಳೆದ ಒಂದು ತಿಂಗಳಿಂದ ತಾಲ್ಲೂಕಿನಲ್ಲಿ ಪ್ರತಿದಿನ 38 ರಿಂದ40 ಡಿಗ್ರಿ ಉಷ್ಣಾಂಶ ದಾಖಲಾಗಿತ್ತು. ನೆತ್ತಿ ಸುಡುವ ಬಿಸಿಲಿಗೆ ಜನರು ಮನೆಗಳಿಂದ ಹೊರಬರಲಾರದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಂಗಳವಾರ ಮಧ್ಯಾಹ್ನ ನಾಲ್ಕು ಗಂಟೆವರೆಗೂ ಸುಡುವ ಬಿಸಿಲು ಇತ್ತು ನಾಲ್ಕು ಗಂಟೆ ನಂತರ ಗುಡುಗು ಹಾಗೂ ಬಿರುಗಾಳಿ ಸಹಿತ ಸುರಿದ ಮಳೆ.
