ಉಭಯ ಮಾಧ್ಯಮ ಶಾಲೆಯ ೭ನೇ ತರಗತಿ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬಿಳ್ಕೋಡುವ ಸಮಾರಂಭ
ಬೆಟಗೇರಿ: ಕಲಿಕೆ ನಿಂತ ನೀರಾಗದೇ ಹರಿಯುವ ನೀರಿನಂತಿರಬೇಕು. ಶಾಲಾ ಶಿಕ್ಷಕರು ಮಕ್ಕಳಿಗೆ ನಿತ್ಯ ಹೊಸತನದ ಅನುಭವ ನೀಡಬೇಕು ಎಂದು ಬೆಟಗೇರಿ ತಾಪಂ ಮಾಜಿ ಸದಸ್ಯ ಈರಪ್ಪ ದೇಯಣ್ಣವರ ಹೇಳಿದರು.ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಚೈತನ್ಯ ಗ್ರುಪ್ಸ್ನ ಬೆಟಗೇರಿ ಕೃಷ್ಣಶರ್ಮ ಚೈತನ್ಯ ಕನ್ನಡ ಮಾಧ್ಯಮ ಮತ್ತು ಶ್ರೀಮತಿ ಸತ್ತೆವ್ವ ದೇಯಣ್ಣವರ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ನಡೆದ ಉಭಯ ಮಾಧ್ಯಮ ಶಾಲೆಯ ೭ನೇ ತರಗತಿ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬಿಳ್ಕೋಡುವ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ…
