ಸಚಿವರ ಬಗ್ಗೆ ಅವಹೇಳಕಾರಿಮಾತು ಆಡಿದ್ದವನ ಸೆರೆ
ಬೆಂಗಳೂರು: ಸಾರಿಗೆ ಸಚಿವರಾಮಲಿಂಗಾರೆಡ್ಡಿ ಬಗ್ಗೆಅವಹೇಳನಕಾರಿಯಾಗಿ ಮಾತನಾಡಿದ್ದ ವ್ಯಕ್ತಿಯೊಬ್ಬನನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮುನೇಗೌಡ (50) ಬಂಧಿತ.ದೊಡ್ಡಬಳ್ಳಾಪುರದ ಮುನೇಗೌಡ,ತನ್ನ ಚಾಲನಾ ಪರವಾನಗಿ (ಡಿ.ಎಲ್)ನವೀಕರಣಕ್ಕಾಗಿ ಆರ್ಟಿಒಗೆಅರ್ಜಿಸಲ್ಲಿಸಿದ್ದ. ಹಲವು ದಿನವಾದರೂಡಿ.ಎಲ್ ಕೈಗೆ ಸಿಕ್ಕಿರಲಿಲ್ಲ. ಡಿ.ಎಲ್ನೀಡುವಂತೆ ಹಲವು ಬಾರಿ ಆರ್ಟಿಒಕಚೇರಿ ಅಧಿಕಾರಿಗಳನ್ನು ಸಂಪರ್ಕಿಸಿದ್ದರೂಸ್ಪಂದನೆ ಸಿಕ್ಕಿರಲಿಲ್ಲ. ಇದರಿಂದ ನೊಂದಮುನೇಗೌಡ, ಫೆ. 8ರಂದು ವಿಧಾನಸೌಧಎದುರು ಆಯೋಜಿಸಿದ್ದ ಜನಸ್ಪಂದನಾಕಾರ್ಯಕ್ರಮದಲ್ಲಿಅಹವಾಲು ಸಲ್ಲಿಸಲು ಬಂದಿದ್ದ. ಅಧಿಕಾರಿಗಳು ಸೂಕ್ತ ರೀತಿ ಅಹವಾಲು ಆಲಿಸಿರಲಿಲ್ಲ.ಮತ್ತಷ್ಟು ಸಿಟ್ಟಾದ ಮುನೇಗೌಡ,ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಗ್ಗೆ ಅವಹೇಳನಕಾರಿಯಾಗಿಮಾತನಾಡಿದ್ದ ಎಂದು ಸಾರಿಗೆ ಇಲಾಖೆ ಅಧಿಕಾರಿಗಳುಪೊಲೀಸರಿಗೆ ದೂರು ನೀಡಿದ್ದರು.
