ಯಾದಗಿರಿಯಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಾಟ 69,000 ರೂ. ಮೌಲ್ಯದ ಅಧಿಕ ಅಕ್ಕಿ ವಶ
WhatsApp Group
Join Now
ಯಾದಗಿರಿಯಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಾಟ 69,000 ರೂ. ಮೌಲ್ಯದ ಅಧಿಕ ಅಕ್ಕಿ ವಶ
ಬಡವರಿಗೆ ಅನುಕೂಲವಾಗಲಿ ಎಂದು ಸರ್ಕಾರ ಉಚಿತವಾಗಿ ಪಡಿತರ ಅಕ್ಕಿ ಕೊಟ್ಟರೆ ಅದನ್ನು ಹಣದ ಆಸೆಗೆ ಜನರು ಮಾರಿಕೊಳ್ಳುತ್ತಿದ್ದಾರೆ

ಯಾದಗಿರಿ ಜಿಲ್ಲೆಯ ಸುರಪುರದಿಂದ ರಾಯಚೂರು ಜಿಲ್ಲೆಯ ಲಿಂಗಸೂರಿಗೆ ಟಾಟಾ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಾಟ ಮಾಡಲಾಗುತ್ತಿತ್ತು.

ಸುರಪುರ ಠಾಣೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ 69,000 ರೂ. ಮೌಲ್ಯದ ಪಡಿತರ ಅಕ್ಕಿಯನ್ನ ವಶಪಡಿಸಿಕೊಂಡಿದ್ದಾರೆ.
50 ಕೆಜಿಯ 45 ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ್ದ ಪಡಿತರ ಅಕ್ಕಿ ಗೂಡ್ಸ್ ವಾಹನದಲ್ಲಿ ಪತ್ತೆಯಾಗಿದೆ. ಪೊಲೀಸರು ತಡೆಹಿಡಿಯುತ್ತಿದ್ದಂತೆ ವಾಹನ ಚಾಲಕ ಅಲ್ಲೇ ವಾಹನ ಬಿಟ್ಟು ಪರಾರಿಯಾಗಿದ್ದು ಈ ಪ್ರಕರಣ ಕುರಿತು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ
