12 August 2026
Advertisement
ರಾಜ್ಯ

ಹೂಲಿಗೊಪ್ಪದಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹುಲಿಗೊಪ್ಪ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಎಸ್ ಡಿ ಎಂ ಸಿ (SDMC) ಅಧ್ಯಕ್ಷರಾದ ಶ್ರೀ ಕೆ.ಎನ್ ಕರಿಗೌಡ್ರ ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿ ನಂತರ
ಶಾಲಾ ಮಕ್ಕಳಿಗೆ ಕೇಕ ಕತ್ತರಿಸಿ ಸಿಹಿ ವಿತರಿಸಲಾಯಿತು. ಹೊಸದಾಗಿ ದಾಖಲಾಗುವ ಮಕ್ಕಳಿಗೆ ಪೂಜೆ ಸಲ್ಲಿಸಿ ಬರಮಾಡಿಕೊಳ್ಳಲಾಯಿತು. ಉಡುಗೊರೆಯಾಗಿ ಅಂಕಲಿಪಿ ವಿತರಿಸಲಾಯಿತು. ಮಕ್ಕಳಿಗೆ ಸಿಹಿ ಊಟ ನೀಡಲಾಯಿತು.

ಈ ವೇಳೆ ಶಾಲಾ ಪ್ರಧಾನ ಗುರುಗಳಾದ ಶ್ರೀ ಕೆ.ಜೆ ರಾಮದುರ್ಗ. ಹಿರಿಯ ಶಿಕ್ಷಕರಾದ ಶ್ರೀ ವ್ಹಿ.ಕೆ ಏಣಿ. ಗುರು ಮಾತೆಯರಾದ ಶ್ರೀಮತಿ ಕೆ .ಜಿ ಘಟ್ನೂರ. ಶ್ರೀಮತಿ ಐ.ಜಿ ಗಣಾಚಾರಿ. ಶ್ರೀ ಎಚ್ .ಎನ್ ಪೂಜಾರ , ಎಸ್ ಡಿ ಎಂ ಸಿ ಉಪಾಧ್ಯಕ್ಷರು ಸುಭಾಸ್ ಬೈಲವಾಡ, ಗ್ರಾಮದ ಹಿರಿಯರು ಹಾಗೂ ಮಹಿಳೆಯರು ಭಾಗವಹಿಸಿದ್ದರು.

About The Author