2024-25 ನೇ ಸಾಲಿನ ನಂದವಾಡಗಿ ಶಾಲಾ ಪ್ರಾರಂಭೋತ್ಸವ.

WhatsApp Group Join Now

ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ನಂದವಾಡಗಿಯಲ್ಲಿ 2024-25 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡಲಾಯಿತು. ಕುಂಭದ ಮೂಲಕ ಸುಂದರವಾಗಿ ಶಾಲಾ ಪ್ರಾರಂಭೋತ್ಸವ ಜರುಗಿತು. ಮಕ್ಕಳು ಉತ್ಸಾಹ, ಸಂತಸದಿಂದ ಶಾಲೆಗೆ ಆಗಮಿಸಿದರು. ಶಾಲಾ ಮುಖ್ಯ ಗುರುಮಾತೆ, ಶಿಕ್ಷಕ ವೃಂದ ಹೂ ಗುಚ್ಛ ಹಾಗೂ ಸಿಹಿ ಹಂಚಿ ಸ್ವಾಗತಿಸಿದರು. ಊರಿನಲ್ಲಿ ಪ್ರಭಾತ ಪೇರಿ, ಕರಪತ್ರ ಹಂಚುವ ಮೂಲಕ ದಾಖಲಾತಿ ಆಂದೋಲನ ಯಶಸ್ವಿಯಾಗಿ ನೇರವೇರಿತು. ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಒಂದನೇ ವರ್ಗಕ್ಕೆ ದಾಖಲು ಮಾಡಿಸಿದರು.ಈ ಒಂದು ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ತಾಲೂಕಿನ ಬಿ ಆಯ್ ಆರ್ ಟಿ ಶ್ರೀ ಸುರೇಶ ವಾಯ್ ಸೂಳೆಭಾವಿ ಸರ್ ಹಾಗೂ ನಂದವಾಡಗಿ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀ ಡಿ ಜಿ ಸಜ್ಜನ ಸರ್ ಚಾಲನೆ ನೀಡಿದರು.
ಶೈಕ್ಷಣಿಕ ಬಲವರ್ಧನೆ ವರ್ಷಕ್ಕೆ ವಿದ್ಯಾರ್ಥಿನಿಯರು ಸಂತಸದಿಂದ ಪಾಲ್ಗೊಂಡರು. ದಾಖಲಾತಿ ಆಂದೋಲನದಲ್ಲಿ ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಗೆ 21 ವಿದ್ಯಾರ್ಥಿನಿಯರು ಪ್ರವೇಶಾತಿ ಪಡೆದಿದ್ದಾರೆ.
ಈ ವೇಳೆ ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ನಂದವಾಡಗಿ ಮುಖ್ಯ ಗುರುಮಾತೆ ಶ್ರೀಮತಿ ವಿ ಬಿ ಕುಂಬಾರ, ಶ್ರೀಮತಿ ಜ್ಯೋತಿ, ಶ್ರೀಮತಿ ಜಿ ಆರ್ ನದಾಫ್, ಬಸವರಾಜ ಬಲಕುಂದಿ, ಡಾ.ವಿಶ್ವನಾಥ ತೋಟಿ, ಚಂದ್ರಶೇಖರ ಹುತಗಣ್ಣ, ಕು.ಅಶ್ವಿನಿ ಕಪ್ಪರದ ಹಾಗೂ ಸರ್ಕಾರಿ ಉರ್ದು ಶಾಲೆಯ ಪ್ರಭಾರಿ ಮುಖ್ಯ ಗುರುಮಾತೆ ಶ್ರೀಮತಿ ಗಂಗಾ ಹಾಗೂ ಶಿಕ್ಷಕ ವೃಂದ, ವಿದ್ಯಾರ್ಥಿನಿಯರು, ಶಿಕ್ಷಣ ಪ್ರೇಮಿ ಗೋಪಿ ಶಿಂಧೆ ಹಾಗೂ ನಂದವಾಡಗಿ ಗ್ರಾಮದ ಪಾಲಕರು ಉಪಸ್ಥಿತರಿದ್ದರು

About The Author