ಶಾಸಕ ಅಶೋಕ ಪಟ್ಟಣ ಅವರು ಉಚಿತವಾಗಿ ಕೊಡುಗೆ ನೀಡಿದ ಸ್ಕೂಲ್ ಬ್ಯಾಗ್ ಹಾಗೂ ನೋಟ್ ಬುಕ್ಸ್ಗಳನ್ನು ವಿದ್ಯಾರ್ಥಿಗಳಿಗೆ ವಿಶ್ವಭಾರತಿ ಪ.ಪೂ ಕಾಲೇಜಿನಲ್ಲಿ ನ್ಯಾಯವಾದಿ ಜಮುನಾ ಪಟ್ಟಣ ಅವರು ವಿತರಿಸಿದರು.

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ವಿಶ್ವಭಾರತಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ಹಾಗೂ ನೋಟ್‌ಬುಕ್ಸ್ಗಳನ್ನು ನ್ಯಾಯವಾದಿ ಜಮುನಾ ಪ್ರದೀಪ ಪಟ್ಟಣ ವಿತರಿಸಿ ಮಾತನಾಡಿದರು ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗಲೆಂದು ಶಾಸಕರಾದ ಅಶೋಕ ಪಟ್ಟಣ ಅವರು ಒಂದನೇ ತರಗತಿಯಿಂದ ಪದವಿ ಹಂತದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಕೂಲ್ ಬ್ಯಾಗ್ ಹಾಗೂ ನೋಟ್ ಬುಕ್ಸ್ ನೀಡುತ್ತಿದ್ದಾರೆ. ಶಿಕ್ಷಣದಿಂದಲೆ ದೇಶದ ಪ್ರಗತಿ ಸಾಧ್ಯವಿದೆ. ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸರಕಾರ ಅನೇಕ ಯೋಜನೆಗಳನ್ನು ರೂಪಿಸಿದ್ದು. ಅವುಗಳ ಸದುಪಯೋಗ ಪಡಿಸಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಹೇಳಿದರು.
ಶಾಸಕ ಅಶೋಕ ಪಟ್ಟಣ ಅವರಲ್ಲಿ ಮನವಿ ಮಾಡಿ ಬೆಳಗಾವಿ ಮುಖ್ಯ ರಸ್ತೆಯಿಂದ ಕಾಲೇಜಿಗೆ ಹೋಗಲು ಸಿಸಿ ರಸ್ತೆ, ಹೈಟೆಕ್ ಶೌಚಾಲಯ ಹಾಗೂ ಆಟದ ಮೈದಾನ ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಭರವಸೆ ನೀಡಿದರು.
ಯುವ ಮುಖಂಡ ಅನಿಕೇತ ಪಟ್ಟಣ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಜಾತಿಯ ವಿಷಬೀಜ ಬಿತ್ತಿ ಶಾಲಾ ಕಾಲೇಜುಗಳ ವ್ಯವಸ್ಥೆಯನ್ನೆ ಹಾಳು ಮಾಡುತ್ತಿರುವ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ವಿದ್ಯಾರ್ಜನೆ ಮಾಡುವ ಅವಧಿಯಲ್ಲಿ ಅತ್ಯಂತ ಜಾಗೃತರಾಗಿ ಇರಬೇಕು. ಓದುವಿನ ಕಡೆಗೆ ಹೆಚ್ಚು ಗಮನ ಹರಿಸಬೇಕೆಂದು ಮನವಿ ಮಾಡಿದರು.
ಈ ವೇಳೆ ಪ್ರಾಚಾರ್ಯ ಅಶೋಕ ಹೊಸಮನಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕರಾದ ವಿ.ಎಸ್.ಕಿಲಬನೂರ, ರವೀಂದ್ರ ಕರ್ಲೆಪ್ಪನವರ, ವಿ.ಬಿ.ಸೋಮಣ್ಣವರ, ಕವಿತಾ ಕುಲಕರ್ಣಿ, ನೀಲಪ್ಪ ಮಾದರ, ಆರ್.ಬಿ.ಸವಟಗಿ, ಮಂಜುನಾಥ ಮೊಹಿತೆ ಉಪಸ್ಥಿತರಿದ್ದರು.

About The Author