ಸಚಿವ ಈಶ್ವರ್ ಖಂಡ್ರೆರವರಿಂದ ವೀರಶೈವ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಣೆ

WhatsApp Group Join Now

ಬಳ್ಳಾರಿ ನಗರದ ಮಾಜಿ ವಿಧಾನ ಪರಿಷತ್ ಸದಸ್ಯರು ವೀರಶೈವ ಮಹಾಸಭಾದ ಹಿರಿಯ ನಾಯಕರಾದ ಎನ್. ತಿಪ್ಪಣ್ಣ ಅವರ ನಿವಾಸದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅರಣ್ಯ ಪರಿಸರ ಇಲಾಖೆಯ ಸಚಿವರಾದ ಈಶ್ವ‌ರ್ ಖಂಡ್ರೆ ಅವರು ಆಗಮಿಸಿ ಬಳ್ಳಾರಿಯ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಬಳ್ಳಾರಿ ಘಟಕದ ಪದಾಧಿಕಾರಿಗಳು ನೇಮಕವಾಗಿದ್ದರಿಂದ, ಇವರಿಗೆ ಅಖಿಲ ಭಾರತ ವೀರಶೈವ ಮಹಾಸಭಾದ ನಿಕಟಪೂರ್ವ ಉಪಾಧ್ಯಕ್ಷರು ಹಾಗೂ ರಾಜ್ಯ ಘಟಕದ ಅಧ್ಯಕ್ಷರಾದ ಎನ್.ತಿಪ್ಪಣ್ಣ ಅವರು ಹಾಗೂ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿಗಳು ಅರಣ್ಯ ಇಲಾಖೆ ಸಚಿವರಾದ ಈಶ್ವರ ಖಂಡ್ರೆ ಅವರಿಂದ ಬಳ್ಳಾರಿಯ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರವನ್ನು ನೀಡಿದ್ದಾರೆ.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅರಣ್ಯ ಪರಿಸರ ಇಲಾಖೆಯ ಸಚಿವರಾದ ಈಶ್ವರ್ ಖಂಡ್ರೆ ಅವರು ಮಾತನಾಡಿ ಇವರಿಗೆ ನಮ್ಮ ಕಡೆಯಿಂದ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾದ ವತಿಯಿಂದ ಮಾಜಿ ಅಧ್ಯಕ್ಷರಾದ ಚಾನಾಳ ಶೇಖರ್ ನೇತೃತ್ವದ ಹಾನಗಲ್ ಕುಮಾರೇಶ್ವರ ವೃಂದದ ಹತ್ತು ಜನ ಪದಾಧಿಕಾರಿಗಳಿಗೆ ಶುಭಾಶಯಗಳನ್ನ ಕೋರಿ ಆದೇಶ ಪತ್ರವನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಸಮಾಜದ ಮುಖಂಡರಾದ ಅಲ್ಲಂ ಪ್ರಶಾಂತ್, ಎನ್. ತಿಪ್ಪಣ್ಣನವರ ಪುತ್ರಡಾ.ಮಂಜುನಾಥ್, ಹಿರಿಯ ವಕೀಲರು ಹಾಗೂ ವೀರಶೈವ ವಿದ್ಯಾವರ್ಧಕ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಬಿವಿ.ಬಸವರಾಜ್, ಮಾಜಿ ಅಧ್ಯಕ್ಷರಾದ ಚಾನಾಳ ಶೇಖರ್, ರಾಷ್ಟ್ರೀಯ ಕಾರ್ಯನಿರ್ವಾಹಕ ಸಮಿತಿ ಸದಸ್ಯರಾದ ಕೋರಿ ವಿರುಪಾಕ್ಷಪ್ಪ, ರಾಜ್ಯ ಕಾರ್ಯ ನಿರ್ವಾಹಕ ಸಮಿತಿ ಸದಸ್ಯರಾದ ಅಂಗಡಿ ಶಂಕ್ರಪ್ಪ, ಕರೇಗೌಡ, ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.

About The Author