ಧಾರವಾಡ ಜಿಲ್ಲಾ ಚುನಾವಣೆ ಅಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮತದಾರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2025ರ ಅಂತಿಮ ಮತದಾರ ಪಟ್ಟಿಯನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಮಾತನಾಡಿ, ಜನವರಿ 2025ಕ್ಕೆ ಅನ್ವಯವಾಗುವಂತೆ ಜಿಲ್ಲೆಯಲ್ಲಿ 8,05,768 ಪುರುಷ, 8,10,647 ಮಹಿಳಾ ಹಾಗೂ 95 ಜನ ತೃತೀಯಲಿಂಗಿಗಳು ಸೇರಿ ಒಟ್ಟು 16,16,415 ಜನ ಅರ್ಹ ಮತದಾರರು ಇದ್ದಾರೆ ಎಂದು ಅವರು ತಿಳಿಸಿದರು .
ಅಕ್ಟೋಬರ್ 29, 2024 ರಂದು ಪ್ರಕಟಿಸಿದ್ದ ಕರಡು ಮತದಾರ ಪಟ್ಟಿಯಲ್ಲಿ 8,04,508 ಜನ ಪರುಷ, 8,07,935 ಜನ ಮಹಿಳಾ ಹಾಗೂ 93 ಜನ ತೃತೀಯಲಿಂಗಿಗಳು ಸೇರಿ ಒಟ್ಟು 16,12,536 ಜನ ಮತದಾರರಾಗಿದ್ದರು. ಪರಿಷ್ಕರಣೆಯ ನಂತರ ಜಿಲ್ಲೆಯಲ್ಲಿ 16,16,415 ಒಟ್ಟು ಮತದಾರರಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ವಿಕಲಚೇತನ ಮತದಾರರು
ಜನೆವರಿ 1, 2025 ರವರೆಗೆ 12,008 ಪುರುಷ, 8,797 ಮಹಿಳಾ ಮತ್ತು ಇಬ್ಬರು ತೃತೀಯಲಿಂಗಿಗಳು ಸೇರಿ ಒಟ್ಟು 20,805 ಜನ ವಿಕಲಚೇತನ ಮತದಾರರಿದ್ದಾರೆ.
ವಿಧಾನಸಭೆ ಮತಕ್ಷೇತ್ರವಾರು ಮತದಾರರು ನವಲಗುಂದ-69 ವಿಧಾನಸಭಾ ಮತಕ್ಷೇತ್ರದಲ್ಲಿ 1,08,102 ಜನ ಪುರುಷ, 1,07,107 ಜನ ಮಹಿಳಾ ಹಾಗೂ 9 ಜನ ತೃತೀಯಲಿಂಗಿ ಸೇರಿ ಒಟ್ಟು 2,15,209 ಜನ ಅರ್ಹ ಮತದಾರರಿದ್ದಾರೆ.
ಕುಂದಗೋಳ-70 ವಿಧಾನಸಭಾ ಮತಕ್ಷೇತ್ರದಲ್ಲಿ 98,594 ಜನ ಪುರುಷ, 94,947, ಜನ ಮಹಿಳಾ ಹಾಗೂ 8 ಜನ ತೃತೀಯಲಿಂಗಿ ಸೇರಿ ಒಟ್ಟು 1,93,541 ಜನ ಅರ್ಹ ಮತದಾರರಿದ್ದಾರೆ.
ಧಾರವಾಡ -71 ವಿಧಾನಸಭೆ ಮತಕ್ಷೇತ್ರದಲ್ಲಿ 1,12,934 ಜನ ಪುರುಷ, 1,13,401 ಜನ ಮಹಿಳಾ ಹಾಗೂ 9 ಜನ ತೃತೀಯಲಿಗಗಳು ಸೇರಿ ಒಟ್ಟು 2,26,335 ಜನ ಅರ್ಹ ಮತದಾರರಿದ್ದಾರೆ.
ಹುಬ್ಬಳ್ಳಿ- ಧಾರವಾಡ ಪೂರ್ವ 72 ವಿಧಾನಸಭೆ ಮತಕ್ಷೇತ್ರದಲ್ಲಿ 1,11,139 ಜನ ಪುರುಷ, 1,13,983 ಜನ ಮಹಿಳಾ ಹಾಗೂ 19 ಜನ ತೃತೀಯಲಿಂಗಿಗಳು ಸೇರಿ ಒಟ್ಟು 2,25,122 ಜನ ಅರ್ಹ ಮತದಾರರಿದ್ದಾರೆ.
ಹುಬ್ಬಳ್ಳಿ- ಧಾರವಾಡ ಕೆಂದ್ರ -73 ವಿಧಾನಸಭಾ ಕ್ಷೇತ್ರದಲ್ಲಿ 1,33,360 ಜನ ಪುರುಷ, 1,37,572 ಜನ ಮಹಿಳಾ ಹಾಗೂ 38 ಜನ ತೃತೀಯ ಲಿಂಗಿಗಳು ಸೇರಿ ಒಟ್ಟು 2,70,932 ಜನ ಅರ್ಹ ಮತದಾರರಿದ್ದಾರೆ.
ಹುಬ್ಬಳ್ಳಿ- ಧಾರವಾಡ ಪಶ್ಚಿಮ -74 ವಿಧಾನಸಭಾ ಕ್ಷೇತ್ರದಲ್ಲಿ 1,38,220 ಜನ ಪುರುಷ, 1,44,824 ಜನ ಮಹಿಳಾ ಹಾಗೂ 6 ಜನ ತೃತೀಯ ಲಿಂಗಿಗಳು ಸೇರಿ ಒಟ್ಟು 2,83,044 ಜನ ಅರ್ಹ ಮತದಾರರಿದ್ದಾರೆ.
ಕಲಘಟಗಿ -75 ವಿಧಾನಸಭಾ ಕ್ಷೇತ್ರದಲ್ಲಿ 1,03,419 ಜನ ಪುರುಷ, 98,813 ಜನ ಮಹಿಳಾ ಹಾಗೂ 6 ಜನ ತೃತೀಯ ಲಿಂಗಿಗಳು ಸೇರಿ ಒಟ್ಟು 2,02,232 ಜನ ಅರ್ಹ ಮತದಾರರಿದ್ದಾರೆ.
ಯುವ ಮತದಾರರು ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ 406 ಜನ ಪುರುಷ, 425 ಜನ ಮಹಿಳಾ ಸೇರಿ ಒಟ್ಟು 831 ಜನ ಹೊಸದಾಗಿ ಸೇರ್ಪಡೆಯಾದ ಯುವ ಮತದಾರರಿದ್ದಾರೆ .
ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ 241 ಪುರುಷ, 181 ಮಹಿಳಾ ಸೇರಿ ಒಟ್ಟು 422 ಯುವ ಮತದಾರರು ಸೇರ್ಪಡೆಆಯಾಗಿದ್ದಾರೆ .
ಧಾರವಾಡ ವಿಧಾನಸಭಾ ಮತಕ್ಷೇತ್ರದಲ್ಲಿ 206 ಜನ ಪುರುಷರು 161 ಜನ ಮಹಿಳಾ ಸೇರಿ ಒಟ್ಟು 367 ಜನ ಯುವ ಮತದಾರರು ಸೇರ್ಪಡೆ ಆಗಿದ್ದಾರೆ.
ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಮತಕ್ಷೇತ್ರದಲ್ಲಿ 130 ಜನ ಪುರುಷ 108 ಜನ ಮಹಿಳಾ ಸೇರಿ ಒಟ್ಟು 238 ಜನ ಮತದಾರರು ಸೇರ್ಪಡೆಯಾ ಆಗಿದ್ದಾರೆ .
ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನಸಭಾ ಮತಕ್ಷೇತ್ರದಲ್ಲಿ 93 ಜನ ಪುರುಷ 92 ಮಹಿಳಾ ಸೇರಿ ಒಟ್ಟು 185 ಜನ ಯುವ ಮತದಾರರು ಸೇರ್ಪಡೆ ಆಗಿದ್ದಾರೆ .
ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ 154 ಜನ ಪುರುಷ, 144 ಜನ ಮಹಿಳಾ ಸೇರಿ ಒಟ್ಟು 298 ಜನಯುವ ಮತದಾರರು ಸೇರ್ಪಡೆಯಾಗಿದ್ದಾರೆ .
ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ 276 ಪುರುಷ 250 ಮಹಿಳಾ ಸೇರಿ ಒಟ್ಟು 526 ಜನ ಯುವ ಮತದಾರರು ಸೇರ್ಪಡೆ ಆಗಿದ್ದಾರೆ
ಒಟ್ಟಾರೆಯಾಗಿ ಜಿಲ್ಲೆಯಲ್ಲಿ 2,867 ಜನ ಯುವ ಮತದಾರರು ನೋಂದಣಿ ಆಗಿದ್ದು ಜನವರಿ 1, 2025ಕ್ಕೆ ಅರ್ಹ ಮತದಾರರಾಗಿದ್ದಾರೆ.
ಧಾರವಾಡ ಜಿಲ್ಲೆಯ 16,336 ಜನ ಮತದಾರರಿಗೆ ಮತದಾರರ ಗುರುತಿನ ಚೀಟಿಯನ್ನು ಅಂಚೆ ಮೂಲಕ ರವಾಣಿಸುವ ಪ್ರಕ್ರಿಯೆ ಜಾರಿಯಲ್ಲಿದೆ.
ಅರ್ಜಿ ನಮೂನೆ 6 ಮತ್ತು 8
ಮತದಾರರ ಹೆಸರು ಸೇರ್ಪಡೆಯ ಅರ್ಜಿ ನಮೂನೆ 6 ನ್ನು ಉಪಯೋಗಿಸಿಕೊಂಡು ಜಿಲ್ಲೆಯಲ್ಲಿ 3,440 ಪುರುಷ 4,747 ಮಹಿಳಾ ಹಾಗೂ 1 ತೃತೀಯ ಲಿಂಗಿ ಸೇರಿ ಒಟ್ಟು 8,188 ಜನ ಮತದಾರರು ಮತದಾರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆ ಮಾಡಿಕೊಂಡಿದ್ದಾರೆ.
ಮತ್ತು ಮತದಾರರ ಹೆಸರು ಸ್ಥಳಾಂತರ ಹಾಗೂ ತಿದ್ದುಪಡಿಗೆ ಅನ್ವಯಿಸುವ ಅರ್ಜಿ ನಮೂನೆ -8 ನ್ನು ಬಳಸಿಕೊಂಡು 537 ಜನಪುರುಷ ಹಾಗೂ 638 ಜನ ಮಹಿಳೆಯರು ಸೇರಿ ಒಟ್ಟು 1,175 ಜನ ಮತದಾರರು ಬೇರೆ ಸ್ಥಳಗಳಿಂದ ಜಿಲ್ಲೆಯ ಮತದಾರರ ಪಟ್ಟಿಗೆ ತಮ್ಮ ಹೆಸರು ವರ್ಗಾಯಿಸಿಕೊಂಡಿದ್ದಾರೆ.
ಒಟ್ಟಾರೆ ಹೊಸದಾಗಿ ಸೇರ್ಪಡೆ ಮತ್ತು ಸ್ಥಳಾಂತರ ಕಾರಣದಿಂದಾಗಿ 9,363 ಜನ ಮತದಾರರು ಜಿಲ್ಲೆಯ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಅರ್ಜಿ ನಮೂನೆ-7
ಮತದಾರರ ಡುಬ್ಲಿಕೇಟ್ ನೋಂದಣಿ, ಗೈರುಹಾಜರು, ಮರಣ ಮುಂತಾದ ಕಾರಣಗಳಿಗಾಗಿ ಸಲ್ಲಿಕೆಯಾಗುವ ಅರ್ಜಿ ನಮೂನೆ-7ರನ್ವಯ ನವಲಗುಂದ ವಿಧಾನಸಭಾ ಮತಕ್ಷೇತ್ರದಲ್ಲಿ 594 ಪುರುಷ 611 ಮಹಿಳಾ ಸೇರಿ ಒಟ್ಟು 1205 ಮತದಾರರು ಮತ್ತು ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ 146 ಪುರುಷ 175 ಮಹಿಳಾ ಸೇರಿ ಒಟ್ಟು 321 ಮತದಾರರು ಧಾರವಾಡ ವಿಧಾನಸಭಾ ಕ್ಷೇತ್ರದಲ್ಲಿ 561 ಪುರುಷ, 536 ಮಹಿಳಾಸೇರಿ 1097 ಜನ ಮತದಾರರನ್ನು ಹು-ಧಾ ಪೂರ್ವ ವಿಧಾನಸಭಾ ಮತಕ್ಷೇತ್ರದಲ್ಲಿ 385 ಜನಪುರುಷ 428 ಜನ ಮಹಿಳಾ ಸೇರಿ ಒಟ್ಟು 813 ಜನುಮ ಮತದಾರರನ್ನು ಹು-ಧಾ ಕೇಂದ್ರ ವಿಧಾನಸಭಾ ಮತಕ್ಷೇತ್ರದಲ್ಲಿ 213 ಜನ ಪುರುಷ 265 ಜನ ಮಹಿಳಾ ಸೇರಿ ಒಟ್ಟು 478 ಮತದಾರರನ್ನು, ಹು-ಧಾ ಪಶ್ಚಿಮ ವಿಧಾನಸಭಾ ಮತಕ್ಷೇತ್ರದಲ್ಲಿ 504 ಜನ ಪುರುಷ , 461 ಜನ ಮಹಿಳಾ ಸೇರಿ ಒಟ್ಟು 965 ಜನ ಮತದಾರರನ್ನು ಕಲಘಟಗಿ ವಿಧಾನಸಭಾ ಮತಕ್ಷೇತ್ರದಲ್ಲಿ 296 ಜನ ಪುರುಷ, 309 ಜನ ಮಹಿಳಾ ಸೀರೆ ಒಟ್ಟು 605 ಜನ ಮತದಾರರ ಹೆಸರನ್ನು ತೆಗೆದುಹಾಕಲಾಗಿದೆ.
ಜಿಲ್ಲೆಯ ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ 234, ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ 214, ಧಾರವಾಡ ವಿಧಾನಸಭಾ ಕ್ಷೇತ್ರದಲ್ಲಿ 234, ಹು-ಧಾ ಪೂರ್ವ ಕ್ಷೇತ್ರದಲ್ಲಿ 218, ಹು-ಧಾ ಕೇಂದ್ರ ಕ್ಷೇತ್ರದಲ್ಲಿ 266 ಹು – ಧಾ ಪಶ್ಚಿಮ ಕ್ಷೇತ್ರದಲ್ಲಿ 271 ಮತ್ತು ಕಲಘಟಗಿ ಮತಕ್ಷೇತ್ರದಲ್ಲಿ 228 ಸೇರಿದಂತೆ ಒಟ್ಟು 1,665 ಮತಗಟ್ಟೆಗಳಿವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು .
ಜನವರಿ 1, 2025 ಕ್ಕೆ ಅರ್ಹರಾಗಿರುವ ಅಂತಿಮ ಮತದಾರ ಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗಿದ್ದು, ಅಂತಿಮ ಮತದಾರ ಪಟ್ಟಿಯನ್ನು ಆಯಾ ಮತಗಟ್ಟೆಗಳಲ್ಲಿ, ಮತದಾರ ನೋಂದಣಿ ಅಧಿಕಾರಿಗಳ ಕಚೇರಿ, ಸಹಾಯಕ ಮತದಾರ ನೋಂದಣಿ ಅಧಿಕಾರಿಗಳ ಕಚೇರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ವೆಬೆ ಸೈಟ್‍ದಲ್ಲಿ ಪ್ರಕಟಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಕಾಶ್ ಹಳಿಯಾಳ, ಶಿವಾನಂದ ನಿಗದಿ, ಭಾರತೀಯ ಜನತಾ ಪಕ್ಷದ ಸಿದ್ದು ಕಲ್ಯಾಣಶೆಟ್ಟರ್, ಜಾತ್ಯಾತೀತ ಜನತಾದಳದ ದೇವರಾಜ್ ಕಂಬಳಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.



