13 August 2026
Advertisement
ರಾಜ್ಯ

ಹಳೇ ಹುಬ್ಬಳ್ಳಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 500 ಕ್ಷಿಂಟಾಲ್​ ಪಡಿತರ ಅಕ್ಕಿ ಜಪ್ತಿ, ಹಾಗೂ ಇಬ್ಬರ ರೇಷನ್ ಕಾರ್ಡ್​ ರದ್ದು.

WhatsApp Group Join Now

ಹುಬ್ಬಳ್ಳಿಯ ಹಳೇ ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಬುಧವಾರ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ವೇಳೆ ಆಹಾರ ಇಲಾಖೆ ದಾಳಿ ನಡೆಸಿದೆ. ಸುಮಾರು 500 ಕ್ವಿಂಟಾಲ್ ಅಕ್ಕಿಯನ್ನು ಜಪ್ತಿ ಮಾಡಿದರು .

ಅಕ್ರಮವಾಗಿ ಅಕ್ಕಿ ಮಾರಾಟ ಮಾಡುತ್ತಿದ್ದ ವೇಳೆ ಇಬ್ಬರು ಮಹಿಳೆಯರನ್ನು
ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಪಡಿತರ ಚೀಟಿಗಳನ್ನು ರದ್ದುಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ರಮವಾಗಿ ಪಡಿತರ ಅಕ್ಕಿಯನ್ನು ಖರೀದಿಸಿ, ಟಾಟಾ ಏಸಿ ವಾಹನದಲ್ಲಿ ಲೋಡ್​ ಮಾಡುತ್ತಿದ್ದ ವೇಳೆ ಆಹಾರ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದಾರೆ. ಆಹಾರ ಅಧಿಕಾರಗಳು ಬರುತ್ತಲೇ ದಂಧೆಕೋರರು ವಾಹನ ಬಿಟ್ಟು ಪರಾರಿಯಾಗಿದ್ದಾರೆ.

ಇದೇ ಹಳೇ ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಇಬ್ಬರು ಮಹಿಳೆಯರು ಮತ್ತೊಂದು ಕಡೆ ಅಕ್ರಮವಾಗಿ 50 ಕೆಜಿಯ ಎರಡು ಪಡಿತರ ಅಕ್ಕಿ ಮೂಟೆಗಳನ್ನು ಮಾರಾಟ ಮಾಡುತ್ತಿದ್ದರು. ಈ ವಿಚಾರ ತಿಳಿದ ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು, ಮಹಿಳೆಯರು ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿದ್ದಾರೆ.

ಈ ಬಗ್ಗೆ ಆಹಾರ ಇಲಾಖೆ ಅಧಿಕಾರಿ ವಸುಂಧರಾ ಮಾತನಾಡಿ, ಸರ್ಕಾರ 15 ಕೆಜಿ ಪಡಿತರ ಅಕ್ಕಿ ಕೊಟ್ಟಿದೆ. ಆದರೆ, ಕೆಲವರು ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ಮಾಹಿತಿ ಇದೆ. ಇವತ್ತು ರೆಡ್ ಹ್ಯಾಂಡ್ ಆಗಿ ಮಾರಾಟ ಮಾಡುವವರು ಸಿಕ್ಕಿಬಿದ್ದಿದ್ದಾರೆ. ಮಾರಾಟ ಮಾಡಲು ಬಂದವರ ಪಡಿತರ ಚೀಟಿಗಳನ್ನು ರದ್ದು ಮಾಡುವುದಾಗಿ ಹೇಳಿದರು.

About The Author