ಬೀದರ್ 3,99,534 ರೂ. ಮೌಲ್ಯದ ಅಧಿಕ ಅಕ್ರಮ ಪಡಿತರ ಅಕ್ಕಿ ಜಪ್ತಿ

WhatsApp Group Join Now

ಬೀದರ್‌ ಪಟ್ಟಣದ ಹಳೆ ನಾವದಗೇರಿಯ ಶೆರ್ಟ ಅಂಗಡಿಯೊಂದರಲ್ಲಿ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿರುವ 3,99,534 ರೂ. ಮೌಲ್ಯದ ಸುಮಾರು 117 ಕ್ವಿಂಟಲ್ ಪಡಿತರ ಅಕ್ಕಿಯನ್ನು ಜಪ್ತಿ ಮಾಡಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೋಮವಾರ ಅನೌಪಚಾರಿಕ ಪಡಿತರ ಪ್ರದೇಶದ ಆಹಾರ ನಿರೀಕ್ಷಕ ಉಪನಿರ್ದೇಶಕರು ಹಾಗೂ ಜಿಲ್ಲಾ ಆಹಾರ ನಿರೀಕ್ಷಕರಿಗೆ ಈ ಬಗ್ಗೆ ಮಾಹಿತಿ ನೀಡಿ, ನಗರದ ಹಳೆ ನಾವದಗೇರಿ ಹತ್ತಿರ ಒಂದು ಶೆಟರ್‌ ಅಂಗಡಿಯಲ್ಲಿ ಸಾರ್ವಜನಿಕರಿಗೆ ಸರಬರಾಜು ಮಾಡುವ ಪಡಿತರ ಆಹಾರ ಧಾನ್ಯ ಆಕ್ರಮವಾಗಿ ಸಂಗ್ರಹಿಸಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ, ಎಸ್ಪಿ ಪ್ರದೀಪ್ ಗುಂಟಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಚಂದ್ರಕಾಂತ್ ಪೂಜಾರಿ ಅವರ ನಿರ್ದೇಶನದಂತೆ ಹಾಗೂ ಪ್ರಭಾರಿ ಪೊಲೀಸ್ ಉಪಾಧೀಕ್ಷಕ ಎಮ್.ಡಿ ಸನಾದಿ ಅವರ ಮಾರ್ಗದರ್ಶನದಂತೆ ಮಾರ್ಕೆಟ್ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಸಿದ್ದಣ್ಣ ಗಿರಿಗೌಡರ್ ಮತ್ತು ತಂಡ ದಾಳಿ ನಡೆಸಿತ್ತು.

About The Author