ದಿಕ್ಕು ದೆಸೆ ಇಲ್ಲದ ರಾಮದುರ್ಗ ಪುರಸಭೆ ಸಾಂಸ್ಕೃತಿಕ ಭವನ

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ ಸಾಯಿ ನಗರದಲ್ಲಿ ಇದ್ದಂತ ಪುರಸಭೆ ಸಾಂಸ್ಕೃತಿಕ ಭವನ ಈ ಸಾಂಸ್ಕೃತಿಕ ಭವನಕ್ಕೆ ದಿಕ್ಕು ದೆಸೆ ಇಲ್ಲದಂತಾಗಿದೆ ಇದು ಪುರಸಭೆ ಸಾಂಸ್ಕೃತಿಕ ಭವನವೋ ಅಥವಾ ಪಾಲು ಬಿದ್ದ ಗುಡಾನವೇ ಎಂದು ಗೊತ್ತಾಗ್ತಾಯಿಲ್ಲ.

ಈ ಪುರಸಭೆ ಸಾಂಸ್ಕೃತಿಕ ಭವನ 2011- 12ನೇ ಸಾಲಿನ ರಾಜ್ಯ ಹಣಕಾಸು ಆಯೋಗದ ಅನುದಾನದಡಿ ಪುರಸಭೆ ಸಾಂಸ್ಕೃತಿಕ ಭವನ ನಿರ್ಮಿಸಲಾಗಿತ್ತು

ಸಾಂಸ್ಕೃತಿಕ ಭವನದಲ್ಲಿ ಮದುವೆ ಹಾಗೂ ಸಭೆ ಸಮಾರಂಭಗಳು ನಡೆಯುತ್ತಿದ್ದವು.

ಮದುವೆ ಸಮಾರಂಭಕ್ಕೆ ಒಂದು ದಿನಕ್ಕೆ 12 ಸಾವಿರ ರೂಪಾಯಿಗಳ ಬಾಡಿಗೆಗಳನ್ನು ಪುರಸಭೆಯವರು ಪಡೆಯುತ್ತಿದ್ದರು ಸುಮಾರು ಒಂದು ವರ್ಷಕ್ಕೆ 6 ಲಕ್ಷದಿಂದ 9 ಲಕ್ಷದವರೆಗೆ ಈ ಪುರಸಭೆ ಸಾಂಸ್ಕೃತಿಕ ಭವನದಿಂದ ಪುರಸಭೆಗೆ ಆದಾಯ ಬರುತ್ತಿತ್ತು.

ಪುರಸಭೆ ಸಾಂಸ್ಕೃತಿಕ ಭವನವು ನಿರ್ಮಾಣವಾದಾಗಿನಿಂದ ಇಲ್ಲಿಯವರೆಗೆ ಯಾವುದೇ ದುರಸ್ತಿ ಕೂಡ ಕಂಡಿಲ್ಲ.

ಪುರಸಭೆ ಸಾಂಸ್ಕೃತಿಕ ಭವನವನ್ನು ನೋಡಿದರೆ ಅಲ್ಲಿ ಸರಿಯಾಗಿ ಕಿಟ್ಟಕ್ಕಿಗಳ ಬಾಗಿಲಗಳು ಇರುವುದಿಲ್ಲ , ವಿದ್ಯುತ್ ಶಾರ್ಟ್ ಸರ್ಕಿಟ್ ಸಮಸ್ಯೆ, ಜಳಕದ ನೀರು ಸೋರುವಿಕೆ, ಮಳೆ ಆದರೆ ಮಳೆಯ ನೀರು ರೂಮಿನ ಒಳಗಡೆ ಬರುವುದು, ಸುಣ್ಣಬಣ್ಣ ಕಾಣದೆ ಇರುವುದು, ಸಾಂಸ್ಕೃತಿಕ ಭವನದ ಮೇನ್ ಡೋರ್ ಬಾಗಿಲ ಮುರಿದು ಬಿದ್ದಿರುವುದು, ಮೇಲ್ಗಡೆ ಇರತಕ್ಕಂತಹ ರೂಮಿನಲ್ಲಿ ನೀರಿನ ಪೈಪುಗಳನ್ನು ಕಟ್ಟು ಮಾಡಿರುವ ದೃಶ್ಯಗಳು,
ರಾತ್ರಿ ಹೊತ್ತು ಈ ಸಾಂಸ್ಕೃತಿಕ ಭವನದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಸಾರ್ವಜನಿಕರ ಹೇಳಿಕೆಗಳು ಇದನ್ನೆಲ್ಲ ಗಮನಿಸಿದರೆ ಈ ಸಾಂಸ್ಕೃತಿಕ ಭವನವು ಪುರಸಭೆಗೆ ಸಂಬಂಧ ಇಲ್ಲದಂತೆ ಇರುವುದು ಯಾಕೆ ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಮದುವೆ ಸಭೆ ಸಮಾರಂಭಗಳಿಗೆ ಅನುಕೂಲವಾಗಲೆಂದು ಪುರಸಭೆ ವತಿಯಿಂದ ಸಾಂಸ್ಕೃತಿಕ ಭವನ ನಿರ್ಮಾಣ ಮಾಡಿದ್ದು ಆದರೆ ಈ ಸಾಂಸ್ಕೃತಿಕ ಭವನಕ್ಕೆ ದಿಕ್ಕು ದೆಸೆ ಇಲ್ಲದಂತಾಗಿದೆ ಹಾಗೂ ಸಾರ್ವಜನಿಕರು ಪುರಸಭೆಗೆ ಹೋಗಿ ಮದುವೆ ಕಾರ್ಯಕ್ರಮಕ್ಕೆ ಈ ಸಾಂಸ್ಕೃತಿಕ ಭವನವನ್ನು ಬಾಡಿಗೆ ಕೇಳಿದರೆ ಇದು ದುರಸ್ತಿಯಲ್ಲಿ ಇದೆ ಎಂದು ಹೇಳುತ್ತಾರೆ ಹಾಗಾದರೆ ದುರಸ್ತಿ ಮಾಡುವುದು ಯಾವಾಗ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ ?.

ಆದಷ್ಟು ಬೇಗ ಇದಕ್ಕೆ ಸಂಬಂಧಪಟ್ಟಂತ ಅಧಿಕಾರಿಗಳು ಸಾಂಸ್ಕೃತಿಕ ಭವನವನ್ನು ದುರಸ್ತಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುತ್ತಾರೆ ಎಂದು ಕಾದು ನೋಡಬೇಕಾಗಿದೆ

About The Author