WhatsApp Group
Join Now
ಶೌಚಾಲಯ ಇದೆ ಆದ್ರೆ, ಜನತೆಯ ಉಪಯೋಗಕ್ಕಿಲ್ಲ…
ಪುರಸಭೆಯಿಂದ ನಿರ್ಮಾಣ ಮಾಡಿದ ಸಾರ್ವಜನಿಕ ಶೌಚಾಲಯಗಳ ಸಾರ್ವಜನಿಕ ಉಪಯೋಗಕ್ಕೆ ಮಾಡಿಕೊಡುವಂತೆ 15ನೇ ವಾರ್ಡಿನ ಸದಸ್ಯರಾದ ಹುಸೇನ್.ಎಸ್.ಐನಾಪುರ್ ಪುರಸಭೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರು ಅವರ ಮನವಿಯನ್ನು ಪುರಸ್ಕರಿಸದೆ ಇದ್ದದ್ದಕ್ಕೆ ಅವರೇ ಖುದ್ದಾಗಿ ಸ್ವಚ್ಛತಾ ಕಾರ್ಯಕ್ರಮವನ್ನು ಕೈಗೆತ್ತಿಕೊಂಡರು .

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ 15ನೇ ವಾರ್ಡಿನಲ್ಲಿ 15ಲಕ್ಷ ರೂ ವೆಚ್ಚದಲ್ಲಿ ಸ್ತ್ರೀಯರಿಗೆ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಿದ್ದು ಎರಡು ತಿಂಗಳಾದರೂ ಇದುವರೆಗೂ ಸ್ತ್ರೀಯರಿಗೆ ಸಾರ್ವಜನಿಕ ಶೌಚಾಲಯ ಉಪಯೋಗವಾಗಿಲ್ಲವೆಂದು 15ನೇ ವಾರ್ಡಿನ ಸದಸ್ಯರಾದ ಹುಸೇನ್.ಎಸ್.ಐನಾಪುರ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮುಚ್ಚಿದ ಶೌಚಾಲಯದ ಬಾಗಿಲದ ಕೀಲಿಗಳನ್ನು ತೆಗೆದು ಕುದ್ದು ತಾವೇ ಸ್ವಚ್ಛತೆಗೊಳಿಸಿ ಸಾರ್ವಜನಿಕರಿಗೆ ಶೌಚಾಲಯ ಉಪಯೋಗಕ್ಕೆ ಅನುಕೂಲ ಮಾಡಿಕೊಟ್ಟರು.



