ಹಿರಿಯ ದಿವಾಣಿ ನ್ಯಾಯಾಧೀಶರು ಶ್ರೀಮತಿ. ಬಿ ಟಿ ಅನ್ನಪೂರ್ಣೇಶ್ವರಿ ಇವರು ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲಕಾರ್ಮಿಕ ನಿಷೇಧ ಕಾಯ್ದೆ, ಕುರಿತು ಜಾಗೃತಿ ಮೂಡಿಸಿದರು

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಬಾಲಿಕೆಯರ ನೂತನ ಪ್ರೌಢ ಶಾಲೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಬೆಳಗಾವಿ ಮತ್ತು ತಾಲೂಕು ಕಾನೂನು ಸೇವಾ ಸಮಿತಿ, ರಾಮದುರ್ಗ ಹಾಗೂ ನ್ಯಾಯವಾದಿಗಳ ಸಂಘ, ರಾಮದುರ್ಗ ತಾಲೂಕು ಆಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳಗಾವಿ, ಶಿಶು ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ತಾಲೂಕು ಪಂಚಾಯತ್, ಆರಕ್ಷಕ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಸಂರಕ್ಷಣಾ ಕಾನೂನುಗಳಾದ ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ನಿಷೇದ ಕಾಯ್ದೆ. ಬಾಲಕಾರ್ಮಿಕ ನಿಷೇದ ಕಾಯ್ದೆ’ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗು ಜೆ ಎಮ್. ಎಫ್. ಸಿ ರಾಮದುರ್ಗ ಮತ್ತು ಅಧ್ಯಕ್ಷರು ತಾಲೂಕು ಕಾನೂನು ಸೇವಾ ಸಮಿತಿಯ ಶ್ರೀಮತಿ. ಬಿ ಟಿ ಅನ್ನಪೂರ್ಣೇಶ್ವರಿ ಅವರು ಸಸಿಗೆ ನೀರು ಉನಿಸುವುದರ ಮೂಲಕ ಚಾಲನೆ ನೀಡಿ ಶಾಲಾ ಮಕ್ಕಳಿಗೆ ಜಾಗೃತಿ ಮೂಡಿಸಿದರು.

ಈ ವೇಳೆ ಮಾನ್ಯ ಜಿಲ್ಲಾ ಮುಖ್ಯ ನ್ಯಾಯಾಧೀಶರು ವಿಡಿಯೋ ಸಂದೇಶ ಪ್ರದರ್ಶನ, ನಡಾವಳಿಯಲ್ಲಿ ತಿಳಿಸಿದಂತೆ ಪ್ರತಿಯೊಂದು ವಿಷಯ ಚರ್ಚೆ ಮಾಡಲಾಯಿತು ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶ ಮಕ್ಕಳ ಸಹಾಯವಾಣಿ ಪೋಕ್ಸೋ ಕಾಯ್ದೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಾಲಕಾರ್ಮಿಕತೆ. ಮಕ್ಕಳೊಂದಿಗೆ ಸಂವಾದ ನಾಲ್ಕು ವಿಡಿಯೋ ವೀಕ್ಷಣೆ ಮಾಡಲಾಯಿತು.

ರಾಮದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸುರೇಂದ್ರ ಕಾಂಬಳೆ ಮಾತನಾಡಿ ಸಾಮಾನ್ಯ ನಾಗರಿಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಕಾನೂನು ಜ್ಞಾನ ಮೂಡಿಸಲು ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಶಾಲೆಗಳಲ್ಲಿ ಪೋಕ್ಸೋ ಮತ್ತು ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ. ಬಾಲ್ಯ ವಿವಾಹ ಅಥವಾ ಮಕ್ಕಳ ಮೇಲಿನ ಶೋಷಣೆ ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣ 1098 (ಮಕ್ಕಳ ಸಹಾಯವಾಣಿ) ಅಥವಾ 112 ಗೆ ಕರೆ ಮಾಡಬಹುದು ಎಂದು ಶಾಲಾ ಮಕ್ಕಳಿಗೆ ತಿಳಿಸಿದರು.

ಮುಖ್ಯೋಪಾಧ್ಯಾಯರು ವಿ ಎಸ್ ಹಿರೇಮಠ ಮಾತನಾಡಿ ಮಕ್ಕಳ ಸುರಕ್ಷತೆಯಲ್ಲಿ ಗುಡ್ ಟಚ್ (ಸುರಕ್ಷಿತ ಸ್ಪರ್ಶ) ಮತ್ತು ಬ್ಯಾಡ್ ಟಚ್ (ಅಸುರಕ್ಷಿತ ಸ್ಪರ್ಶ) ನಡುವಿನ ವ್ಯತ್ಯಾಸವನ್ನು ತಿಳಿಸುವುದು ಅತ್ಯಂತ ಮುಖ್ಯವಾಗಿದೆ.

ಗುಡ್ ಟಚ್ ಪೋಷಕರು ನೀಡುವ ಅಪ್ಪುಗೆ ಮಗುವಿಗೆ ಸುರಕ್ಷಿತ, ಪ್ರೀತಿ ಮತ್ತು ಕಾಳಜಿಯ ಭಾವನೆಯನ್ನು ನೀಡುತ್ತದೆ ,
ವೈದ್ಯಕೀಯ ತಪಾಸಣೆ: ಪೋಷಕರ ಸಮ್ಮುಖದಲ್ಲಿ ವೈದ್ಯರು ಮಾಡುವ ತಪಾಸಣೆ ಕೂಡ ಸುರಕ್ಷಿತ ಸ್ಪರ್ಶಕ್ಕೆ ಸೇರುತ್ತದೆ.

ಬ್ಯಾಡ್ ಟಚ್ ಅಥವಾ ಅಸುರಕ್ಷಿತ ಸ್ಪರ್ಶ : ಯಾವುದೇ ಸ್ಪರ್ಶವು ಮಗುವಿಗೆ ಅಸಹನೀಯ, ಭಯ ಅಥವಾ ಮುಜುಗರ ಉಂಟುಮಾಡಿದರೆ ಅದನ್ನು ಬ್ಯಾಡ್ ಟಚ್ ಎನ್ನಲಾಗುತ್ತದೆ
ಖಾಸಗಿ ಅಂಗಗಳು: ಮುಚ್ಚಲ್ಪಟ್ಟಿರುವ ದೇಹದ ಭಾಗಗಳನ್ನು ಯಾರಾದರೂ ಮುಟ್ಟಲು ಪ್ರಯತ್ನಿಸಿದರೆ ಅದು ಅಸುರಕ್ಷಿತ ಸ್ಪರ್ಶ. “ಯಾರಿಗೂ ಹೇಳಬೇಡ” ಎಂದು ಹೇಳಿ ಮುಟ್ಟುವುದು ಅಥವಾ ಬಲವಂತವಾಗಿ ಮುಟ್ಟುವುದು ಅಪಾಯದ ಮುನ್ಸೂಚನೆ ಅಂತಹ ಸಂದರ್ಭದಲ್ಲಿ ತಕ್ಷಣ 1098 (ಮಕ್ಕಳ ಸಹಾಯವಾಣಿ) ಗೆ ಕರೆ ಮಾಡಬಹುದು.

ಪೋಕ್ಸೋ ಕಾಯ್ದೆ (POCSO Act, 2012)
ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸಲು ಈ ಕಾಯ್ದೆಯನ್ನು 2012ರಲ್ಲಿ ಜಾರಿಗೆ ತರಲಾಯಿತು.
18 ವರ್ಷದೊಳಗಿನ ಎಲ್ಲಾ ವ್ಯಕ್ತಿಗಳನ್ನು ‘ಮಕ್ಕಳು’ ಎಂದು ಪರಿಗಣಿಸಲಾಗುತ್ತದೆ.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಕಿರುಕುಳ ಮತ್ತು ಅಶ್ಲೀಲ ಪ್ರದರ್ಶನಗಳನ್ನು ತಡೆಯುವುದು. ಈ ಕಾಯ್ದೆಯಡಿ ಅಪರಾಧಗಳಿಗೆ ಕಠಿಣ ಶಿಕ್ಷೆಯಿದ್ದು, ವಿಶೇಷ ನ್ಯಾಯಾಲಯಗಳ ಮೂಲಕ ಶೀಘ್ರ ವಿಚಾರಣೆ ನಡೆಸಲಾಗುತ್ತದೆ. ಬಾಲ್ಯ ವಿವಾಹ ಅಥವಾ ಮಕ್ಕಳ ಮೇಲಿನ ಶೋಷಣೆ ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣ 1098 (ಮಕ್ಕಳ ಸಹಾಯವಾಣಿ) ಗೆ ಕರೆ ಮಾಡಬಹುದು. ಬಾಲ್ಯ ವಿವಾಹ ನಿಷೇಧ ಕಾಯ್ದೆ (Prohibition of Child Marriage Act, 2006) ಮಕ್ಕಳ ಬಾಲ್ಯದ ಹಕ್ಕುಗಳನ್ನು ರಕ್ಷಿಸಲು ಬಾಲ್ಯ ವಿವಾಹವನ್ನು ಈ ಕಾಯ್ದೆ ಸಂಪೂರ್ಣವಾಗಿ ನಿಷೇಧಿಸಿದೆ.
ಹುಡುಗಿಗೆ 18 ವರ್ಷ ಮತ್ತು ಹುಡುಗನಿಗೆ 21 ವರ್ಷ ತುಂಬುವ ಮೊದಲೇ ವಿವಾಹ ಮಾಡುವುದು ಅಪರಾಧ.
ಬಾಲ್ಯ ವಿವಾಹ ಮಾಡಿದವರಿಗೆ ಅಥವಾ ಪ್ರೋತ್ಸಾಹಿಸಿದವರಿಗೆ 2 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ಮತ್ತು ₹1 ಲಕ್ಷದವರೆಗೆ ದಂಡ ವಿಧಿಸಬಹುದು ಎಂದು ಹೇಳಿದರು.

ಗಣಿತ ಶಿಕ್ಷಕರು ಆರ್ ಎಸ್ ಗೋಟೆ ಮಾತನಾಡಿ ಬಾಲಕಾರ್ಮಿಕ ನಿಷೇಧ ಕಾಯ್ದೆ (Child Labour Act, 1986)
ಮಕ್ಕಳನ್ನು ಅಪಾಯಕಾರಿ ಕೆಲಸಗಳಿಗೆ ಬಳಸಿಕೊಳ್ಳುವುದನ್ನು ತಡೆಯುವುದು ಈ ಕಾಯ್ದೆಯ ಮೂಲ ಉದ್ದೇಶ

14 ವರ್ಷದೊಳಗಿನ ಮಕ್ಕಳನ್ನು ಯಾವುದೇ ಉದ್ಯೋಗದಲ್ಲಿ ತೊಡಗಿಸುವುದನ್ನು ಈ ಕಾಯ್ದೆ ನಿಷೇಧಿಸುತ್ತದೆ.

ಹದಿಹರೆಯದವರು 14 ರಿಂದ 18 ವರ್ಷದೊಳಗಿನವರನ್ನು ಅಪಾಯಕಾರಿ ಕೆಲಸಗಳಲ್ಲಿ ತೊಡಗಿಸುವುದು ಕೂಡ ನಿಷೇಧಿತ.

ಶಿಕ್ಷೆ ಮತ್ತು ದಂಡ: ಬಾಲಕಾರ್ಮಿಕ ಕಾನೂನನ್ನು ಉಲ್ಲಂಘಿಸುವ ಮಾಲೀಕರಿಗೆ 6 ತಿಂಗಳಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 20,000 ರಿಂದ 50,000 ರೂಪಾಯಿಗಳವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದು. ಜಿಲ್ಲಾ ಮಟ್ಟದಲ್ಲಿ ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸರ್ಕಾರವು ವಿವಿಧ ಯೋಜನೆಗಳನ್ನು ರೂಪಿಸಿದೆ ಎಂದು ಹೇಳಿದರು.

ಎಸ್ ಎಮ್ ಹಿರೇಮಠ್ ಅವರು ನಿರೂಪಣೆ ಮಾಡಿದರು.

ಈ ಒಂದು ಕಾರ್ಯಕ್ರಮದಲ್ಲಿ ಮಂಜುಳಾ.ಆರ್.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ರಾಮದುರ್ಗ, ಕೊಡ್ಲಿವಾಡ ಶಿಕ್ಷಕಿಯರು, ಎ ಕೆ ಗುರವ, ಎಸ್ ಪಿ ಪಾಟೀಲ, ಹಾಗೂ ಶಿಕ್ಷಕರು, ಶಿಕ್ಷಕಿಯರು, ವಿದ್ಯಾರ್ಥಿನಿಯರು ಇದ್ದರು.

About The Author