ರಾಮದುರ್ಗ ಪಟ್ಟಣದ ಪುರಸಭೆ ಮುಂದೆ ಇರುವ ವಾಣಿಜ್ಯ ಮಲ್ಲಿಗೆಗಳ ನಂ.5 ರಲ್ಲಿ ಇದ್ದಂತಹ ರಾಮದುರ್ಗ ಟೌನ್ (ಪೋಸ್ಟ ಆಫೀಸ್ ) ಅಂಚೆ ಕಚೇರಿಯನ್ನು ವಿಲೀನಗೊಳಿಸದಂತೆ ಸಾರ್ವಜನಿಕರು ಮನವಿಯನ್ನು ಸಲ್ಲಿಸಿದರು ಕೂಡ ಅಧಿಕಾರಿಗಳು ಮನವಿಗೆ ಸ್ಪಂದನೆ ನೀಡದೆ ತಮ್ಮ ಕೆಲಸವನ್ನು ಮುಂದುವರಿಸಿ ರಾಮದುರ್ಗ ಟೌನ್ ಪೋಸ್ಟ್ ಆಫೀಸ್ ಅನ್ನು ರಾಮದುರ್ಗ ಪ್ರಧಾನ ಅಂಚೆ ಕಚೇರಿಗೆ ಸೇರ್ಪಡೆ ಮಾಡಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು ಇದನ್ನು ಗಮನಿಸಿ ವಿಜಯ ಸೇನಾ ಸಮಿತಿಯ ಸಂಸ್ಥಾಪಕರಾದ ವಿಜಯ ನಾಯಕ ಹಾಗೂ ಸಾಮಾಜಿಕ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದರು.
ರಾಮದುರ್ಗ ಪಟ್ಟಣದಲ್ಲಿ ಕಳೆದ 20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅಂಚೆ ಕಚೇರಿಯನ್ನು ಇವಾಗ ರಾಮದುರ್ಗದ ಹೆಡ್ ಪೋಸ್ಟ ಆಫೀಸಗೆ (ಅಂಚೆ ಕಚೇರಿಯೊಂದಿಗೆ) ವಿಲೀನಗೊಳಿಸುವ ಅಥವಾ ಮುಚ್ಚುವ ಪ್ರಸ್ತಾವನೆ ಇರುವುದು ನಮ್ಮ ಗಮನಕ್ಕೆ ಬಂದಿದೆ.

ಈ ಅಂಚೆ ಕಚೇರಿಯು ನಮ್ಮ ರಾಮದುರ್ಗ ಪಟ್ಟಣದ ನೂರಾರು ಕುಟುಂಬಗಳಿಗೆ, ವಿಶೇಷವಾಗಿ ಹಿರಿಯ ನಾಗರಿಕರಿಗೆ, ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ಅತ್ಯಗತ್ಯವಾಗಿದೆ. ವೃದ್ದಾಪ್ಯ ವೇತನ, ಉಳಿತಾಯ ಯೋಜನೆಗಳು ಮತ್ತು ದಿನನಿತ್ಯದ ಅಂಚೆ ಸೇವೆಗಳಿಗಾಗಿ ನಾವು ಈ ಕಚೇರಿಯನ್ನೇ ಅವಲಂಬಿಸಿದ್ದೇವೆ. ಇದನ್ನು ಬೇರೆಡೆಗೆ ವರ್ಗಾಯಿಸುವುದರಿಂದ ಹಿರಿಯ ನಾಗರಿಕರು ಕಿಲೋಮೀಟರ್ಗಟ್ಟಲೆ ನಡೆದು ಹೋಗುವುದು ಕಷ್ಟಕರವಾಗಿದೆ.
ವಿಲೀನದಿಂದಾಗಿ ಕೆಲಸದ ಒತ್ತಡ ಹೆಚ್ಚಾಗಿ ಸಾಮಾನ್ಯ ಜನರಿಗೆ ಸೇವೆ ಸಿಗುವುದು ವಿಳಂಬವಾಗಬಹುದು.
ಸರ್ಕಾರದ ಸೌಲಭ್ಯಗಳು ತಲುಪಲು ಈ ಸ್ಥಳೀಯ ಕಚೇರಿ ಮುಖ್ಯ ಕೊಂಡಿಯಾಗಿದೆ. ಆದುದರಿಂದ, ಸಾರ್ವಜನಿಕ ಹಿತದೃಷ್ಟಿಯಿಂದ ನಮ್ಮ ರಾಮದುರ್ಗ ಟೌನ್ (ಪೋಸ್ಟ ಆಫೀಸ್ ) ಅಂಚೆ ಕಚೇರಿಯನ್ನು ಈಗಿರುವಂತೆಯೇ ಮುಂದುವರಿಸಬೇಕೆಂದು ವಿಜಯ ಸೇನಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ವಿಜಯ ನಾಯಕ ಆಗ್ರಹಿಸಿ ಇನ್ನು ಕುರಿತಂತೆ ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದರಾದ ಜಗದೀಶ ಶೆಟ್ಟರ್ ಅವರಿಗೂ ದೂರವಾಣಿ ಸಂಪರ್ಕ ಮೂಲಕ ಮಾತನಾಡಿದ ಅವರು ಶೀಘ್ರವಾಗಿ ಈ ಸಮಸ್ಯೆ ಬಗೆಹರಿಸುವುದಾಗಿ ಫೋನಿನ ಮೂಲಕ ತಿಳಿಸಿದರು.

ಇಂದು ರಾಮದುರ್ಗಕ್ಕೆ ಹಿರಿಯ ಅಧೀಕ್ಷಕ ಅಂಚೆ ಪಾಲಕರು ಆಗಮಿಸಿದರು ಅವರಿಗೂ ಕೂಡ ಈ ವಿಷಯದ ಕುರಿತಂತೆ ಮನವರಿಕೆ ಮಾಡಲಾಗಿದೆ. ಒಂದು ವೇಳೆ ಈ ಅಂಚೆ ಕಛೇರಿ ಸ್ಥಳಾಂತರಗೊಂಡರೆ ಉಗ್ರ ಹೋರಾಟ ಮಾಡುವುದಾಗಿ ವಿಜಯ ನಾಯಕ ತಿಳಿಸಿದ್ದಾರೆ.
ಈ ವೇಳೆ ಸಾಮಾಜಿಕ ಹೋರಾಟಗಾರರಾದ ಪವನ್ ದೇಶಪಾಂಡೆ, ಅಂಬರೇಶ್ ಬಟಕುರ್ಕಿ, ಎಂ ಕೆ ಯಾದವಾಡ, ಪ್ರಶಾಂತ್ ಅಂಗಡಿ, ವಿಜಯ ಸೇನಾ ಸಮಿತಿಯ ರಾಮದುರ್ಗ ತಾಲೂಕು ಅಧ್ಯಕ್ಷ ಮಾರುತಿ ಮಾದರ, ಇನ್ನು ಅನೇಕ ಸಾರ್ವಜನಿಕರು ಇದ್ದರು.



