ಸತತ 24 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಶಿರಸಂಗಿ ಗ್ರಾಮಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಯೋಧನಿಗೆ ಶ್ರೀ ಲಿಂಗರಾಜ ಮಾಜಿ ಮತ್ತು ಹಾಲಿ ಸೈನಿಕರ ಸಂಘದ ವತಿಯಿಂದ ಬೈಕ್ ಜಾಥಾ ಮೂಲಕ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದ ಭಾರತೀಯ ಸೇನೆಯಿಂದ ನಿವೃತ್ತಿ ಹೊಂದಿದ ಯೋಧ ನಾಗಪ್ಪ ಫ ಜಡಿ ಹಾಗೂ ಸಿದ್ದಪ್ಪ ಮಾ. ಪಣದಿ ಅವರಿಗೆ ಶಿರಸಂಗಿ ಗ್ರಾಮದ ಶ್ರೀ ಲಿಂಗರಾಜ ದೇಸಾಯಿ ಅವರ ಅರಮನೆಯಲ್ಲಿ ಆರತಿ ಎತ್ತಿ ಹೂಮಳೆ ಸುರಿಸಿ, ಶಾಲು ಹೋದಿಸಿ ಸನ್ಮಾನಿಸಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

ಗ್ರಾಮಕ್ಕೆ ಮರಳಿದ ವೀರ ಯೋಧರಿಗೆ ಗ್ರಾಮಸ್ಥರು ಡೊಳ್ಳು ಕುಣಿತ ಮತ್ತು ಗೊಂಬೆ ಮೇಳದ ಭವ್ಯ ಮೆರವಣಿಗೆಯೊಂದಿಗೆ ಅದ್ಧೂರಿ ಸ್ವಾಗತ ಕೋರಿದರು.
ಹಿರಿಯರು, ಮಹಿಳೆಯರು ಮತ್ತು ಮಕ್ಕಳು ರಸ್ತೆಯಲ್ಲಿ ನಿಂತು ಯೋಧರ ಮೇಲೆ ಪುಷ್ಪವೃಷ್ಟಿ ಮಾಡಿ, ಆರತಿ ಬೆಳಗಿ ಪ್ರೀತಿಯಿಂದ
ಸ್ವಾಗತಿಸಿದರು.

ಗ್ರಾಮದ ಪ್ರಮುಖ ವೃತ್ತಗಳಲ್ಲಿ ಯೋಧರನ್ನು ಸನ್ಮಾನಿಸಿ, ವಾಹನದಲ್ಲಿ ಅದ್ದೂರಿ ಮೇರವಣಿಗೆ ನಡೆಸಲಾಯಿತು.



