ಸಮಾಜ ಸೇವಕಿ ಭಾರತೀಯ ಎಚ್ ಆರ್ ಅವರಿಗೆ ನಾರಿ ಶಕ್ತಿ ಪ್ರಶಸ್ತಿ

WhatsApp Group Join Now

ಕನ್ನಡಾಂಬೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ
ಏರ್ಪಡಿಸಿದ್ದ ನಾರಿ ಶಕ್ತಿ ಮತ್ತು ನಾಡ ಕೀರ್ತಿ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ನಾಡಿನ ಅಭ್ಯುದಯದಲ್ಲಿ ಸಾಧಕರ ಪಾತ್ರ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ
ಮಾತನಾಡಿದ ಅವರು, ಭಾರತದಲ್ಲಿ ಅನಾದಿಕಾಲದಿಂದಲೂ ನಾರಿ ಶಕ್ತಿಗೆ ವಿಶೇಷವಾದ ಸ್ಥಾನಮಾನ ಇದೆ ಅದು ಮುಂದುವರೆದು ಇಂದು ಜಗತ್ತಿನ ಎಲ್ಲಾ ರಂಗಗಳಲ್ಲಿಯೂ ನಾರಿ ತನ್ನ ಶಕ್ತಿ ಸಾಮರ್ಥ್ಯ ಮತ್ತು ಬುದ್ಧಿವಂತಿಕೆಯಿಂದ ಜಗತ್ತಿನ ಅಭ್ಯುದಯಕ್ಕೆ ತನ್ನ ಕೊಡುಗೆಯನ್ನು ನೀಡುತ್ತಿದ್ದಾಳೆ.
ಇಂತಹ ಸಮಾರಂಭಗಳಲ್ಲಿ ಮಹಿಳೆಯರನ್ನು ಗೌರವಿಸುತ್ತಿರುವುದು ಅತೀವ ಸಂತಸ ತಂದಿದೆ
. ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ಡಾ. ಗುಣವಂತ ಮಂಜು ಮಾತನಾಡಿ ಇದೊಂದು ಸಾಂಸ್ಕೃತಿಕ ಯಘ್ನ ಇದರಲ್ಲಿ ಭಾಗಿ ಆಗುತ್ತಿರುವ ಸಾಧಕರು ನಾಡಿನ ವಿವಿಧ ರಂಗಗಳನ್ನು ತಮ್ಮ ಸೇವೆಯಿಂದ ಬೆಳಗಿ ಕೀರ್ತಿ ತಂದವರಿಗೆ ನಾವು ನೀಡುತ್ತಿರುವುದು ಒಂದು ಸಣ್ಣ ಕಾಣಿಕೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆಧ್ಯಾತ್ಮ ಚಿಂತಕರಾದ ವೇದಮೂರ್ತಿ ಶಿವರುದ್ರ ಸ್ವಾಮಿ ರವರು ವಹಿಸಿದ್ದರು‌ ಅಧ್ಯಕ್ಷತೆಯನ್ನು ಆಕಾಶವಾಣಿಯ ನಿಕಟ ಪೂರ್ವ ನಿರ್ದೇಶಕರಾದ ಡಾ. ನಿರ್ಮಲ ಸಿ ಎಲಿಗಾರ್ ವಹಿಸಿದ್ದರು. ನಾರಿ ಶಕ್ತಿ ಪ್ರಶಸ್ತಿಗೆ
ಡಾ ಜಿ ವೈ ಪದ್ಮ ನಾಗರಾಜ್, ಚಿತ್ರನಟಿ ಭೂಮಿಕ, ಚಿತ್ರನಟಿ ಪವಿತ್ರ ಹಿರೇಮಠ, ಸಮಾಜ ಸೇವಕಿ ಎಚ್ಎಮ್ ಭಾರತಿ ಮುಂತಾದವರು ಬಾಜಿನರಾದರು. ಮುಖ್ಯ ಅತಿಥಿಗಳಾಗಿ ಬಾ. ಕರುಣ ರತ್ನ ವೀರ ಕೆಂಪಯ್ಯ, ಡಾ. ಸಂಕಲ್ಪ ನರಸಿಂಹಮೂರ್ತಿ, ಶ್ರೀ ಗೋವಿಂದಹಳ್ಳಿ ಕೃಷ್ಣೇಗೌಡ, ಡಾ. ಪದ್ಮನಾಭ ಶ್ರೇಷ್ಟಿ, ಸಾಹಿತಿ ಎಂ ವಿಶ್ವನಾಥ್, ಶ್ರೀ ಎ ಎಂ ನಾಗರಾಜ್, ಡಾ. ವೆಂಕಟ ರಾಮಾಂಜನೇಯ ಸ್ವಾಮಿ, ಬಿ ಆರ್ .ಪ್ರದೀಪ್ ಕುಮಾರ್, ಡಾ. ಟಿ .ಗೋವಿಂದರಾಜು ಮುಂತಾದವರು ಭಾಗವಹಿಸಿದ್ದರು.
ಸಂಸ್ಥೆಯ ಅಧ್ಯಕ್ಷರಾದ ವರಲಕ್ಷ್ಮಿ ಗುಣವಂತ ಮಂಜು
ಕಾರ್ಯಕ್ರಮವನ್ನು ನಿರ್ವಹಿಸಿದರು ಶಿಲ್ಪಕೃಷ್ಣಮೂರ್ತಿ ಕಾರ್ಯಕ್ರಮವನ್ನು ನಿರೂಪಿಸಿದರು. ನಾಡಿನ ವಿವಿಧ ಕ್ಷೇತ್ರದ ಮಹಿಳಾ ಸಾಧಕರಿಗೆ “ನಾರಿ ಶಕ್ತಿ” ಮತ್ತು ಪುರುಷ ಸಾಧಕರಿಗೆ “ನಾಡ ಕೀರ್ತಿ” ರಾಜ್ಯ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಪುರಸ್ಕರಿಸಲಾಯಿತು.

About The Author