ಬೆಳಗಾವಿ: ಪಾಲಕರ ಹಾಗೂ ಶಿಕ್ಷಕರ ಮಾರ್ಗದರ್ಶನದಲ್ಲಿ
ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣ ಪಡೆದು ತಮ್ಮ ಹಾಗೂ ಪಾಲಕರ ಕನಸು ನನಸು ಮಾಡಲು ಶ್ರಮವಹಿಸಿ ಅಧ್ಯಯನ ಕೈಗೊಂಡು ಯಶ್ವಸಿಯಾಗ ಬೇಕೆಂದು ಉಪನ್ಯಾಸಕಿ ಶ್ರೀಮತಿ ಮೈತ್ರಾಯಿಣಿ ಗದಿಗೆಪ್ಪಗೌಡರ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ರವಿವಾರ ಸಂಜೆ
ಕನಕ ಶ್ರೀ ಮಹಿಳಾ ಬಳಗ ಹಾಗೂ ಬೆಳಗಾವಿ ಸಮಸ್ತ
ಕುರುಬರ ಸಂಘಗಳ ವತಿಯಿಂದ
ರಾಷ್ಟ್ರಮಾತೆ ಅಹಲ್ಯಾಬಾಯಿ ಹೋಳ್ಕರ್ ಇವರ 301ನೇ ಜಯಂತಿ ಹಾಗೂ 10 ನೇ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ
ಪ್ರತಿಭಾ ಪುರಸ್ಕಾರ ಜರುಗಿತು.
ಅಹಲ್ಯಾಬಾಯಿ ಹೊಳ್ಳರ್ ಅವರು ಮಧ್ಯ ಭಾರತದ ಮಾಳ್ವಾ (ಇಂದೋರ್) ಸಂಸ್ಥಾನದ ಪ್ರಸಿದ್ಧ ರಾಣಿ, ದಕ್ಷ ಆಡಳಿತಗಾರ್ತಿ ಮತ್ತು ಸಮಾಜ ಸುಧಾರಕಿಯಾಗಿದ್ದರು.
1725ರ ಮೇ 31ರಂದು ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ಚೌಂಡಿ ಗ್ರಾಮದಲ್ಲಿ ಜನಿಸಿದ ಅವರು ತಮ್ಮ ನ್ಯಾಯಪರ ಆಡಳಿತ, ಜನಕಲ್ಯಾಣ ಕಾರ್ಯಗಳ ಮೂಲಕ ಭಾರತೀಯ ಇತಿಹಾಸದಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿದ್ದಾರೆ. ಮಲ್ದಾರರಾವ್ ಹೊಳ್ಳರ್ ಅವರ ಸೊಸೆಯಾದ ಅಹಲ್ಯಾಬಾಯಿ, ಪತಿ ಖಂಡೇರಾವ್ ಹೊಳ್ಳರ್ ಹಾಗೂ ಪುತ್ರನ ನಿಧನದ ನಂತರ ಮಾಳ್ವಾ ಸಂಸ್ಥಾನದ ಆಡಳಿತದ ಹೊಣೆ ಹೊತ್ತು ಸಮರ್ಥವಾಗಿ ರಾಜ್ಯವನ್ನು ಮುನ್ನಡೆಸಿದರು. ಅವರ ಆಡಳಿತಾವಧಿಯಲ್ಲಿ ರಾಜ್ಯವು ಶಾಂತಿ, ಸಮೃದ್ಧಿ ಮತ್ತು ಸುಶಾಸನದ ಕೇಂದ್ರವಾಗಿ ರೂಪುಗೊಂಡಿತು.ಶಿಕ್ಷಣ, ಕೃಷಿ, ವ್ಯಾಪಾರ, ನೀರಾವರಿ ಮತ್ತು ಸಾರ್ವಜನಿಕ ಕಲ್ಯಾಣ ಕ್ಷೇತ್ರಗಳಿಗೆ ವಿಶೇಷ ಆದ್ಯತೆ ನೀಡಿದರು ಗಯಾ, ಉಜ್ಜಯಿನಿ, ನಾಸಿಕ್, ದ್ವಾರಕಾ ಸೇರಿದಂತೆ ಭಾರತದ ಅನೇಕ ಪವಿತ್ರ ಕ್ಷೇತ್ರಗಳಲ್ಲಿ ದೇವಾಲಯಗಳು, ಘಾಟ್‌ಗಳು, ಧರ್ಮಶಾಲೆಗಳು, ಬಾವಿಗಳು ಮತ್ತು ಯಾತ್ರಿಕರ ವಿಶ್ರಾಂತಿ ಕೇಂದ್ರಗಳನ್ನು నిమిFసి ಪುನರುಜ್ಜಿವನಗೊಳಿಸಿದರು. ನ್ಯಾಯಯುತ ಆಡಳಿತ ಮತ್ತು ಮಾನವೀಯ ಮೌಲ್ಯಗಳ ಪ್ರತೀಕವಾಗಿದ್ದ ಅಹಲ್ಯಾಬಾಯಿ ಹೊಳ್ಳರ್ ಅವರ ಜೀವನವು ಇಂದಿಗೂ ಪ್ರೇರಣೆಯ ಮೂಲವಾಗಿದೆ. ಜನ್ಮದಿನದಂದು ಅವರ ಆದರ್ಶಗಳನ್ನು ಸ್ಮರಿಸುವುದು ಮತ್ತು ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸುವ ಸಂಕಲ್ಪ ಮಾಡುವುದು ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಶ್ರೀಮತಿ ರೇಖಾ ದಳವಾಯಿ, ಕನಕ ಶ್ರೀ ಮಹಿಳಾ ಬಳಗ
ಇಂತಹ ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ವಿದ್ಯಾರ್ಥಿಗಳನ್ನು, ಸಾಧಕರನ್ನು
ಸತ್ಕರಿಸುವುದರ ಸಂಘದ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಸವರಾಜ ಜಿಲ್ಲೆ ಪ್ರಶಸ್ತಿ ವಿತರಿಸಿದರು. ಸಹಕಾರ ಸಂಘಗಳ ಜಂಟಿ ನಿಬಂಧಕ ಕಲ್ಲಪ್ಪ ಓಬನಗೋಳ ಮಾತನಾಡಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕಿ ವಾಸಂತಿ ಪೂಜಾರಿ, ಮಾಜಿ ಮೇಯರ ಯಲ್ಲಪ್ಪ ಕುರುಬರ, ಎಚ್.ಡಿ.ಕೋಳೆಕರ,ಶರಣಪ್ಪ ಕೊಂಗವಾಡ, ಅಜೀತ ಕುಮಾರ ಬಿರಾದಾರ, ಶ್ರೀಮಂತ ಧನಗರ, ಲಕ್ಕಪ್ಪ ಸಾಂಬ್ರೇಕರ, ಶಾಂತಾ ಕಂಬಳಿ, ಸುರೇಶ ಸಕ್ರೆನ್ನವರ ಇತರರು ಪಾಲ್ಗೊಂಡಿದ್ದರು.



