ಸವದತ್ತಿ, ತಾಲೂಕಾ ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ಜೆಂಟ್ಸ್ ಗ್ರುಫ್, ಜೆಂಟ್ಸ್ ಗ್ರುಫ್ ಆಫ್ ರೇಣುಕಾ ಸಹೇಲಿ, ಶಿವಸಂಜೀವಿನಿ ನೇತ್ರಾಲಯ ಇವರಗಳ ಸಂಯುಕ್ತ ಆಶ್ರಯದಲ್ಲಿ “ಉಚಿತ ಆರೋಗ್ಯ ತಪಾಸನಾ ಶಿಬಿರ, (ಮಧುಮೇಹ ಮತ್ತು ಕಣ್ಣಿನ ತಪಾಸನೆ) ಶಿಬಿರವನ್ನು ನ್ಯಾಯವಾದಿಗಳ ಸಂಘದ ಹೊಸ ಸಬಾಭವನದಲ್ಲಿ ಹವ್ಮಿುಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕಾ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾದ ಶ್ರೀ. ಸಿದ್ದರಾಮ ರವರು ಸಸಿಗೆ ನೀರೆರೆಯುವುದರ ಮೂಲಕ ಉದ್ಪಾಟನೆ ನೆರವೇರಿಸಿದರು. ನಂತರ ಮಾತನಾಡಿದ ಅವರು ಆರೋಗ್ಯವೇ ಭಾಗ್ಯ ಎನ್ನುವ ಹಾಗೆ ಎಲ್ಲರಿಗೂ ಸಮತೋಲನದ ಜೀವನ ಬೇಕು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಳ್ಳುವ ಸಲುವಾಗಿ ಎಲ್ಲರೂ ಈ ಶಿಬಿರದ ಉಪಯೋಗವನ್ನು ಪಡೆದುಕೊಳ್ಳಿ ಎಂದು ಹೇಳಿದರು.
ಪ್ರಾಸ್ತಾವಿಕ ಭಾಷಣ ಮಾಡಿದ ನ್ಯಾಯವಾದಿಗಳಾದ ಶ್ರೀ. ಎಮ್.ಬಿ. ದ್ಯಾಮನಗೌಡರ ರವರು ಮಾತನಾಡಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಸಾಮಾನ್ಯವಾಗಿ ಕೆಲವು ಸ್ಥಳೀಯ ಸಂಸ್ಥೆಗಳು, ಆಸ್ಪತ್ರೆಗಳು ಅಥವಾ ಸರ್ಕಾರಿ ಇಲಾಖೆಗಳಿಂದ ಆಯೋಜಿಸಲ್ಪಡುತ್ತವೆ. ಇಂತಹ ಶಿಬಿರಗಳಲ್ಲಿ, ವೈದ್ಯರು ವಿವಿಧ ಆರೋಗ್ಯ ಸಮಸ್ಯೆಗಳಿಗಾಗಿ ಉಚಿತವಾಗಿ ತಪಾಸಣೆ ಮಾಡುತ್ತಾರೆ ಮತ್ತು ಅಗತ್ಯವಿದ್ದರೆ ಚಿಕಿತ್ಸೆ ಅಥವಾ ಸಲಹೆ ನೀಡುತ್ತಾರೆ. ಈ ಶಿಬಿರಗಳು ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಆರೋಗ್ಯ ಸಮಸ್ಯೆಗಳನ್ನು ಮೊದಲ ಹಂತದಲ್ಲೇ ಪತ್ತೆಹಚ್ಚಲು ಸಹಾಯ ಮಾಡುತ್ತವೆ ಎಂದು ಹೇಳಿದರು.
ಉಪನ್ಯಾಸ ಭಾಷಣ ಮಾಡಿದ ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ. ಶ್ರೀಪಾದ ಸಬನೀಸ, ರವರು ಮಾತನಾಡಿ ಮಧುಮೇಹವು ಹಲವಾರು ರೂಪಗಳಲ್ಲಿ ಪ್ರಕಟವಾಗುತ್ತದೆ, ಪ್ರತಿಯೊಂದೂ ಪ್ರತ್ಯೇಕ ಗುಣಲಕ್ಷಣಗಳನ್ನು ಹೊಂದಿದೆ ಡಯಾಬಿಟಿಸ್, ಸ್ವಯಂ ನಿರೋಧಕ ಸ್ಥಿತಿ, ಪ್ರತಿರಕ್ಷಣಾ ವ್ಯವಸ್ಥೆಯು ಮೇದೋಜ್ಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಉತ್ಪಾದಿಸುವ ಕೋಶಗಳನ್ನು ಆಕ್ರಮಿಸಿದಾಗ ಮತ್ತು ನಾಶಪಡಿಸಿದಾಗ ಸಂಭವಿಸುತ್ತದೆ.. ದೇಹವು ಇನ್ಸುಲಿನ್ ಅನ್ನು ಪರಿಣಾಮಕಾರಿಯಾಗಿ ನಿರೋಧಕವಾಗಿ ಬಳಸಲು ಸಾಧ್ಯವಾಗದಿದ್ದಾಗ ಅಥವಾ ಅದನ್ನು ಸಾಕಷ್ಟು ಉತ್ಪಾದಿಸಲು ಸಾಧ್ಯವಾಗದಿದ್ದಾಗ ಇದು ಬೆಳವಣಿಗೆಯಾಗುತ್ತದೆ. ಗರ್ಭಾವಸ್ಥೆಯ ಮಧುಮೇಹವು ಗರ್ಭಾವಸ್ಥೆಯಲ್ಲಿ ಬೆಳವಣಿಗೆಯಾಗುತ್ತದೆ ಮತ್ತು ಹೆರಿಗೆಯ ನಂತರ ಪರಿಹರಿಸಲ್ಪಡುತ್ತದೆ ಎಂದು ಸಂಪೂರ್ಣವಾಗಿ ವಿವರಿಸಿದರು.
ಅಧ್ಯಕ್ಷತೆ ಭಾಷಣ ಮಾಡಿದ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಶ್ರೀ. ಜೆ.ಬಿ. ಮುನವಳ್ಳಿ ರವರು ಮಾತನಾಡಿ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಈ ಉಚಿತ ಆರೋಗ್ಯ ತಪಾಸನಾ ಶಿಬಿರವನ್ನು ಆಯೋಜಿಸಲಾಗಿದೆ. ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಂಡು ಜೀವ ಶೈಲಿ ಸಾಧ್ಯವಾದಷ್ಟು ಬದಲಾವಣೆ ಮಾಡಿಕೊಳ್ಳುವುದು ಉತ್ತಮ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಅರ್ಪಿತಾ ಬಿ. ಬೆಲ್ಲದ, ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷರಾದ ಎಮ್.ಎಸ್.ಹುಬ್ಬಳ್ಳಿ, ಕಾರ್ಯದರ್ಶಿಯಾದ ಎಸ್.ಎಸ್.ಕಾಳಪ್ಪನವರ, ಮಹಿಳಾ ಪ್ರತಿನಿಧಿ ಎಸ್.ವಾಯ್.ಶಿಬಾರಗಟ್ಟಿ ಮತ್ತು ನೇತ್ರ ತಜ್ಞರಾದ ಡಾ. ಸವಿತಾ ಸಬನೀಸ, ಜೈಂಟ್ಸ ಗ್ರುಪಿನ ಅಧ್ಯಕ್ಷರಾದ ನಾರಾಯನ ದನಿಯಾಳ, ಜೈಂಟ್ಸ ಗ್ರುಪ ರೇಣುಕಾ ಸಹೇಲಿಯ ಅಧ್ಯಕ್ಷರಾದ ಪಾರ್ವತಿ ಕಾಂತಿಮಠ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿಗಳಾದ ಎಮ್.ಬಿ.ದ್ಯಾಮನಗೌಡರ ಸ್ವಾಗತಿಸಿದರು. ಎಸ್.ಎಸ್. ಮಾನೆ, ನಿರೂಪಿಸಿ- ವಂದಿಸಿದರು.



