WhatsApp Group
Join Now
ರಾಮದುರ್ಗ ತಾಲ್ಲೂಕಿನ ಮುದೇನೂರ ಗ್ರಾಮದ ಜನರು ಕುಡಿಯುವ ನೀರಿಗಾಗಿ ಸುಮಾರು ದಿನಗಳಿಂದ ತೀವ್ರ ಪರದಾಡುವಂತಾಗಿದೆ.

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮುದೇನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸದಾಶಿವನಗರದಲ್ಲಿ
ಸುಮಾರು ವರ್ಷಗಳಿಂದ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪರದಾಡುತ್ತಿದ್ದು ಇದರ ಸಲುವಾಗಿ ಸೋಮವಾರ ತಾಲೂಕು ಪಂಚಾಯತಿ ಮುಂದೆ ಕೊಡಗಳನ್ನು ಇಟ್ಟುಕೊಂಡು ಪ್ರತಿಭಟನೆ ಮಾಡಿದರು
ನಮಗೆ ಕುಡಿಯಲು ನೀರು ಕೊಡಿ ಇಲ್ಲವಾದರೆ ವಿಷ ಕೊಡಿ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಎರಡು ದಿನಗಳಲ್ಲಿ ಕುಡಿಯುವ ನೀರು ಪೂರೈಸದೆ ಇದ್ದರೆ ನಾವು ಮುದೇನೂರ ಮೇನ್ ರೋಡ್ ರಸ್ತೆಯನ್ನು ಬಂದು ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.



