ಬೆಳಗಾವಿಯಲ್ಲಿ ಸಂಗೀತ ಸಂಜೆ

WhatsApp Group Join Now

ಐ.ಎಂ. ಇ.ಆರ್ ಆಡಿಟೋರಿಯಂ ಬೆಳಗಾವಿಯಲ್ಲಿ ಸಂಗೀತ ಸಂಜೆ ಕಾರ್ಯಕ್ರಮವು ಉಚಿತ ಪ್ರವೇಶದೊಂದಿಗೆ ತುಂಬಾ ವಿದ್ಯುಕ್ತವಾಗಿ ಸಂಪನ್ನಗೊಂಡಿತು. ಆರಂಭದಲ್ಲಿ ಶ್ರೀಮತಿ ಎಸ್.ಜಾನಕಿ ಅಮ್ಮನವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಕಾರ್ಯಕ್ರಮ ಪ್ರಾರಂಭ ಮಾಡಲಾಗಿತ್ತು ಆರೋಹಿ ಮ್ಯೂಸಿಕ್ ಕ್ಲಾಸ್ ನಡೆಸುತ್ತಿರುವ ಶ್ರೀಮತಿ ಭಾರ್ಗವಿ ಕುಲಕರ್ಣಿಯವರು ಈ ಸಂಗೀತ ಸಂಜೆ ಕಾರ್ಯಕ್ರಮದ ಆಯೋಜಕತ್ವದ ಮುಖ್ಯಸ್ಥರು ಆಗಿದ್ದರು.ಕಲೆ ಎಂಬುದು ಯಾರೊಬ್ಬರ ಸ್ವತ್ತು ಅಲ್ಲ ಎಲೆಮರೆಯ ಕಾಯಿಯಂತೆ ಕಲೆಯನ್ನು ಪೋಷಿಸುವವರು ಸಾಕಷ್ಟು ಜನರಿದ್ದಾರೆ ಅವರಲ್ಲಿ ನಗರವಾಸಿಯಾದ ಶ್ರೀಮತಿ ಭಾರ್ಗವಿ ಕುಲಕರ್ಣಿಯವರು ಒಬ್ಬರಾಗಿದ್ದಾರೆ. ತಾವು ಕಲಿತ ವಿದ್ಯೆಯನ್ನು ಇನ್ನೊಬ್ಬರಿಗೆ ಹೇಳಿಕೊಟ್ಟರೆ ಮಾತ್ರ ಆ ವಿದ್ಯೆಗೆ ಬೆಲೆಯೂ ಅಧಿಕ ಶಿಷ್ಯಂದಿರು ಬೆಳೆಯುವುದು ಜಾಸ್ತಿ. ಆ ಕೆಲಸವನ್ನು ಪ್ರಾಮಾಣಿಕವಾಗಿ ಶ್ರೀಮತಿ ಭಾರ್ಗವಿ ಕುಲಕರ್ಣಿಯವರು ಮಾಡುತ್ತಿದ್ದಾರೆ ಎನ್ನಲು ಅತಿಶಯೋಕ್ತಿ ಅನಿಸುತ್ತಿದೆ.

 ಚಿದಂಬರ ನಗರದ  ರಹವಾಸಿ ಶ್ರೀಮತಿ ಭಾರ್ಗವಿ ಕುಲಕರ್ಣಿಯವರು ಕಳೆದ ಹಲವಾರು ವರ್ಷಗಳಿಂದ ಚಿದಂಬರ ನಗರದಲ್ಲಿಯೇ ಆರೋಹಿ ಮ್ಯೂಸಿಕ್ ಕ್ಲಾಸ್ ನಡೆಸುತ್ತಿದ್ದಾರೆ. ಒಬ್ಬರೇ ಒಬ್ಬರು ಮಕ್ಕಳಿಗೆ ಸಂಗೀತ ಕ್ಲಾಸ್ ಶುರು ಮಾಡಿದವರು ಈಗ ಇಪ್ಪತ್ತೊಂದು ಮಕ್ಕಳಿಗೆ ಸಂಗೀತ ಕಲಿಸುತ್ತಿದ್ದಾರೆ ಕಲಿಕೆಗೆ ವಯಸ್ಸಿನ ಮಿತಿಯಂತೂ ಇಲ್ಲ ಹಿರಿಯರು ಕಿರಿಯರು ಎಲ್ಲರೂ ಇವರ ಮುಂದೆ ಕಲಿಕಾರ್ತಿಗಳೇ ಆಗಿದ್ದಾರೆ.

ದಿನಾಂಕ 18.07.2026, ರಂದು ಈ ಸಂಗೀತ ಸಂಜೆ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು, ಅವರ ಗುರುಗಳಾದ ದೇಸಾಯಿಯವರು ಜಮಖಂಡಿಯಿಂದ ಆಗಮಿಸಿ ಅಧ್ಯಕ್ಷತೆ ವಹಿಸಿದ್ದರು . ಶಿಮತಿ ಅರುಣಾ ನಾಯ್ಕ ನಿವೃತ್ತ ಉಪನ್ಯಾಸಕರು, ಜೆ.ಎಸ್.ಎಸ್.ಕಾಲೇಜು ಬೆಳಗಾವಿ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಉದ್ಘಾಟಿಸಿ ದೀಪ ಪ್ರಜ್ವಲನೆ ಮಾಡಿದರು . ಸಂಗೀತ ದೇವರ ಹತ್ತಿರ ಕರೆದುಕೊಂಡು ಹೋಗುವ ಭಾಷೆ ತಾಳದ ಬಳಕೆ ಸಂಗೀತದಲ್ಲಿ ಹೆಚ್ಚು ಇರುತ್ತದೆ. ಗುರುವಿನಿಂದ ಮಾತ್ರ ಸಂಗೀತ ಕಲಿಕೆ ಸಾದ್ಯ ಎಂದು ಹೇಳಿದರು. ಇನ್ನೊಬ್ಬ ಅಥಿತಿ ಶ್ರೀಮತಿ ರಾಜೇಶ್ವರಿ ಎಸ್ ಹೆಗಡೆ ನಿವೃತ್ತ ಅಧೀಕ್ಷಕರು ಶಿಕ್ಷಣ ಇಲಾಖೆ ಬೆಳಗಾವಿ ಹಾಗೂ ಸಾಹಿತಿಗಳು ಇವರು ಮಾತನಾಡಿ ಸಂಗೀತ ಎಂಬುದೊಂದು ವಿಶ್ವಭಾಷೆ , ಸಾಹಿತ್ಯಕ್ಕೆ ಜೀವ ತುಂಬುವುದೇ ಸಂಗೀತ,ಸಂಗೀತ ಕೇಳುವುದರಿಂದ ಹಲವಾರು ರೋಗಗಳು ವಾಸಿಯಾಗುತ್ತದೆ ಎಂದು ವೈದ್ಯಕೀಯ ತಜ್ಞರಿಂದ ದೃಢ ಪಟ್ಟಿದೆ ಎಂದು ಹೇಳಿದರು . ಆಡಿಟೋರಿಯಂ ಪೂರ್ತಿ ತುಂಬಿತ್ತು.ಪುಟ್ಟ ಪುಟ್ಟ ಮಕ್ಕಳ ಹಾಡು ಕೇಳುವುದೇ ಸಂತೋಷವಾಗಿತ್ತು.

About The Author