ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕಲ್ಲಾಪುರ–ಶಿರಸಂಗಿ ಕ್ಷೇತ್ರದಲ್ಲಿ ಶ್ರೀ ಗುರು ಕಲ್ಮೇಶ್ವರ ಅಜ್ಜನವರ ನೂತನ ಮಹಾರಥೋತ್ಸವವು ಶ್ರಾವಣ ಮಾಸದ ಮೂರನೇ ಸೋಮವಾರದಂದು ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಮುಳ್ಳೂರು ಹಿರೇಮಠ, ತೋರಗಲ್ಲ ಗಚ್ಚಿನ ಹಿರೇಮಠ ಹಾಗೂ ಕಲ್ಲಾಪುರ ಹಿರೇಮಠದ ಪೂಜ್ಯ ಶಿವಾಚಾರ್ಯ ಮಹಾಸ್ವಾಮಿಗಳಾದ ಶ್ರೀ ಅಭಿನವ ನಾಗಲಿಂಗ ಮಹಾಸ್ವಾಮಿಗಳು ಹಾಗೂ ಚಿಕ್ಕುಂಬಿ ಕೈಲಾಸ ನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

ನೂತನ ಮಹಾರಥೋತ್ಸವದ ಸಂದರ್ಭದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಶ್ರೀ ಕಲ್ಮೇಶ್ವರ ಅಜ್ಜನವರ ದರ್ಶನ ಪಡೆದು ಭಕ್ತಿಭಾವ ಮೆರೆದರು.
ರಥೋತ್ಸವದ ವೇಳೆ ಭಕ್ತರು ರಥಕ್ಕೆ ಉತ್ತತ್ತಿ (ಖರ್ಜೂರ), ಬಾಳೆಹಣ್ಣು ಹಾಗೂ ಲಿಂಬೆಹಣ್ಣುಗಳನ್ನು ತೂರಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ವಿವಿಧ ವಾದ್ಯಮೇಳಗಳು, ಬಾಜಾ-ಭಜಂತ್ರಿಗಳೊಂದಿಗೆ ರಥೋತ್ಸವವು ಮತ್ತಷ್ಟು ಕಳೆಗಟ್ಟಿತು.
ನೂತನ ಮಹಾರಥೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಭಾಗವಹಿಸಿ, ಶ್ರೀ ಕಲ್ಮೇಶ್ವರ ಅಜ್ಜನವರ ಕೃಪೆಗೆ ಪಾತ್ರರಾದರು. ಬಳಿಕ ಭಕ್ತರಿಗೆ ಮಹಾಪ್ರಸಾದ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬೆಳಗಾವಿ ಸಂಸದ ಜಗದೀಶ ಶೆಟ್ಟರ್, ಸವದತ್ತಿ ಶಾಸಕ ವಿಶ್ವಾಸ್ ವೈದ್ಯ, ಶ್ರೀಮತಿ ರತ್ನಕ್ಕ ಆನಂದ್ ಮಾಮನಿ, ವಿರೂಪಾಕ್ಷಿ ಮಾಮನಿ, ಶ್ರೀಕಾಂತ್ ಮಲ್ಲಪ್ಪ ಗುರ್ಲಕಟ್ಟಿ, ಬಸವರಾಜ ಕಡಕೋಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಜಾತ್ರಾ ಕಮಿಟಿಯ ಅಧ್ಯಕ್ಷ ಪಕೀರಪ್ಪ ಓಗಳಾಪೂರ, ಉಪಾಧ್ಯಕ್ಷ ಗದಿಗೆಪ್ಪ ಕುಂಬಾರ, ವಕೀಲರಾದ ಚನ್ನಬಸು ಬಿ. ಅಳಗೋಡಿ, ಬಸವರಾಜ ಕ. ಕಡಕೋಳ, ಎಂ.ಎಸ್. ಕುರಿ, ಎಫ್.ವೈ. ಗಾಜಿ, ರಾಜಶೇಖರ ನಿಡವಣಿ, ಶ್ರೀಕಾಂತ ಗೌಡಪ್ಪನವರ, ಹಾಗೂ ವಿವಿಧ ಗಣ್ಯರು, ಮುಖಂಡರು, ಭಕ್ತರು ಮತ್ತು ಗ್ರಾಮಸ್ಥರು ರಥೋತ್ಸವದಲ್ಲಿ ಭಾಗವಹಿಸಿದ್ದರು.
ಇದಲ್ಲದೆ ವಿ.ಎ. ಅದೃಶಪ್ಪನವರ, ಬಸವರಾಜ ಸೋಮಗೊಂಡ ಮುಳ್ಳೂರ, ಮಲ್ಲಣ್ಣ ಯಾದವಾಡ, ಯಲ್ಲಪ್ಪ ಬಾರಿಗಿಡದ, ಜಗದೀಶ ಕೌಜಗೇರಿ, ಅಲ್ಲಮಪ್ರಭು ಪ್ರಭುನವರ, ಬಿ.ಎಂ. ಯಲಿಗಾರ, ರಾಜಶೇಖರ ಕಾರದಗಿ, ಈರಪ್ಪ ಎ. ಮುನವಳ್ಳಿ, ಮುತ್ತಣ್ಣ ಮೂಕಿ, ಕುಬೇಂದ್ರ ಕಲಾಲ, ಕಲ್ಮಶ ಚಿಕ್ಕುಂಬಿ, ಬಸವರಾಜ ಚಿಕ್ಕುಂಬಿ, ಬಸವರಾಜ ಜಂಗಣ್ಣವರ, ಶಿವಪ್ಪ ಬಿ. ಹಾಲೊಳ್ಳಿ, ಪ್ರಕಾಶ ತುರಮರಿ, ಬಸಪ್ಪ ಬೆಣ್ಣೆ, ಕೆ.ಬಿ. ಪಾಟೀಲ, ಇಂದ್ರಾಚಾರ್ಯ ಗಂಗನವರ, ಮಹೇಶ ಪಟ್ಟೇದ, ಎಚ್.ಆರ್. ಕುಂಬಾರ, ಬಸಪ್ಪ ಇಡ್ಲಿ, ಹನಮಂತ ಹೂಲಿ, ಡೋಂಗ್ರಸಾಬ ಹಸನಬಾರ, ಮಹಾಂತೇಶ ಪಂಚೇನಿ, ನಾಗರಾಜ ಲ. ತಳವಾರ, ಉಮೇಶ ಯಮ್ಮೋಜಿ, ಶ್ರೀಕಾಂತ ಗೌಡಪ್ಪನವರ, ಎಚ್.ಕೆ. ಗುರ್ಲಕಟ್ಟಿ, ವಿ.ಬಿ. ತಳವಾರ, ಎಂ.ಎಸ್. ಜಾವೂರ, ಚಂದ್ರಶೇಖರ ಅಳಗೋಡಿ, ಬಸವರಾಜ ಮ. ಶಿರಸಂಗಿ ಸೇರಿದಂತೆ ಅನೇಕ ಗಣ್ಯರು ಹಾಗೂ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಒಟ್ಟಾರೆ, ಕಲ್ಲಾಪುರ–ಶಿರಸಂಗಿ ಕ್ಷೇತ್ರದಲ್ಲಿ ನಡೆದ ಶ್ರೀ ಗುರು ಕಲ್ಮೇಶ್ವರ ಅಜ್ಜನವರ ನೂತನ ಮಹಾರಥೋತ್ಸವವು ಭಕ್ತಿ, ಸಂಭ್ರಮ ಹಾಗೂ ಧಾರ್ಮಿಕ ವೈಭವದೊಂದಿಗೆ ಅದ್ಧೂರಿಯಾಗಿ ನೆರವೇರಿತು.



