ಸರ್ಕಾರ ಇಡು ಗಂಟು ಸಾವಿರ ಕೋಟಿ ಸಾಹಿತ್ಯ ಪರಿಷತ್ತಿಗೆ ಕೊಡಲು ಮನವಿ
ಕನ್ನಡ ಸಾಹಿತ್ಯ ಪರಿಷತ್ತಿಗೆ ಕರ್ನಾಟಕ ರಾಜ್ಯ ಸರ್ಕಾರ ಇಡು ಗಂಟು ಎಂದು ಒಂದು ಸಾವಿರ ಕೋಟಿ ರೂಪಾಯಿ ನೀಡಿ ಆರ್ಥಿಕವಾಗಿ ಭದ್ರ ಸ್ವಾವಲಂಭಿ ಪರಿಷತ್ತು ಸ್ವಾಭಿಮಾನಿಯಾಗುವಂತೆ ಮಾಡಬೇಕೆಂದು ಸಾಹಿತಿ ಜೆ ಎಮ್ ರಾಜಶೇಖರ ಮನವಿಸಿಕೊಂಡು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ನಂತರ ಸರ್ಕಾರದ ಆರ್ಥಿಕ ಸೌಲಭ್ಯವನ್ನು ಪ್ರತಿ ವರ್ಷ ಕೊಡುವುದನ್ನು ಸ್ಥಗಿತ ಮಾಡಬಹುದು. ಇಡು ಗಂಟು ಒಂದು ಸಾವಿರ ಕೋಟಿ ರೂಪಾಯಿ ರಾಷ್ಟ್ರೀಯ ಬ್ಯಾಂಕಿನಲ್ಲಿರಿಸಿ ಬರುವ ಬಡ್ಡಿಯಿಂದ ಪರಿಷತ್ತಿನ ಆಡಳಿತ ಮತ್ತು ಸಾಹಿತ್ಯಕ ಕಾರ್ಯಕ್ರಮಗಳನ್ನು ಮಾಡಲು ಮುಕ್ತ…
