BREAKING NEWS

ಕೆಎಲ್ಇ ಸಂಸ್ಥೆಯ ಎಸ್ ಕೆ ಹೈಸ್ಕೂಲ್ ಆವರಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹನವನ್ನು ಶಾಸಕ ವಿಶ್ವಾಸ್ ವಸಂತ ವೈದ್ಯ ನೆರವೇರಿಸಿದರು.

ಬೆಳಗಾವಿ ಜಿಲ್ಲೆ ಸವದತ್ತಿ ಪಟ್ಟಣದ ಕೆಎಲ್ಇ ಸಂಸ್ಥೆಯ ಎಸ್ ಕೆ ಹೈಸ್ಕೂಲ್ ಆವರಣದಲ್ಲಿ ತಾಲೂಕಾಡಳಿತ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹನವನ್ನು ಶಾಸಕ ವಿಶ್ವಾಸ್ ವಸಂತ ವೈದ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಮಲ್ಲಿಕಾರ್ಜುನ್ ಹೆಗ್ಗನ್ನವರ್, ತಾಲೂಕಾ ಮಟ್ಟದ ಅಧಿಕಾರಿಗಳು, ಪುರಸಭೆ ಅಧ್ಯಕ್ಷರು, ಸದಸ್ಯರು, ಎಪಿಎಂಸಿ ಅಧ್ಯಕ್ಷರು, ಸದಸ್ಯರು, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು, ಶಾಲಾ-ಕಾಲೇಜು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

Read More

ಕರ್ನಾಟಕ ಉಚ್ಛ ನ್ಯಾಯಾಲಯ, ಧಾರವಾಡ ಪೀಠದಲ್ಲಿ 79ನೇ ಸ್ವಾತಂತ್ಯ್ರೋತ್ಸವನ್ನು ಆಚರಿಸಲಾಯಿತು.

ಕರ್ನಾಟಕ ಉಚ್ಛ ನ್ಯಾಯಾಲಯ, ಧಾರವಾಡ ಪೀಠದಲ್ಲಿ 79ನೇ ಸ್ವಾತಂತ್ಯ್ರೋತ್ಸವನ್ನು ಆಚರಿಸಲಾಯಿತು. ಹಿರಿಯ ನ್ಯಾಯಮೂರ್ತಿ ಎಸ್. ಸುನೀಲ್‍ದತ್ ಯಾದವ್ ರವರು ಧ್ವಜಾರೋಹಣ ನೆರವೇರಿಸಿ ಎಲ್ಲರಿಗೂ ಶುಭಾಶಯಗಳನ್ನು ಕೋರಿದರು.ಇದೆ ಸಂದರ್ಭದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಜಿ. ಬಸವರಾಜ್, ವಿಜಯಕುಮಾರ ಪಾಟೀಲ, ಕೆ.ಎಸ್.ಹೇಮಲೇಖಾ, ಕೇಂದ್ರ ಸರ್ಕಾರದ ಸಾಲಿಸಿಟರ ಜನರಲ್, ರಾಜ್ಯ ಸರ್ಕಾರ ವಕೀಲರು, ರಾಜ್ಯ ಪಬ್ಲಿಕ ಪ್ರಾಸಿಕ್ಯುಟರ, ಮತ್ತು ವಕೀಲರ ಸಂಘದ ಪದಾಧಿಕಾರಿಗಳು, ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಕ ಮಹಾ ವಿಲೇಖಾನಾಧಿಕಾರಿ ಶಾಂತವೀರ ಶಿವಪ್ಪ, ಹಾಗೂ ಅಧಿಕ ಮಹಾ ವಿಲೇಖಾನಾಧಿಕಾರಿ…

Read More

ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಜನ್ಮದಿನಾಚರಣೆಯನ್ನು ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಚರಿಸಲಾಯಿತು.

ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಸಂಭಾಂಗಣದಲ್ಲಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಸಂಗೋಳ್ಳಿ ರಾಯಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ, ನಮಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ರಾಯಣ್ಣನ ಅಭಿಮಾನಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

Read More

79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ತಾಲೂಕಾ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾದ ಸಿದ್ದರಾಮ ಅವರು ಧ್ಯಜಾರೋಹಣ ನೆರವೇರಿಸಿದರು.

ಬೆಳಗಾವಿ ಜಿಲ್ಲೆ ಸವದತ್ತಿ ಪಟ್ಟಣದ ತಾಲೂಕಾ ನ್ಯಾಯಾಲಯಗಳ ಆವರಣದಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪ್ರದಾ,ನ ಹಿರಿಯ ಸಿವಿಲ್‍ ನ್ಯಾಯಾಧೀಶರು ಹಾಗೂ ತಾಲೂಕಾ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾದ ಸಿದ್ದರಾಮ ಅವರು ಧ್ಯಜಾರೋಹಣ ನೆರವೇರಿಸಿದರು. ಪ್ರಧಾನ ಸಿವಿಲ್‍ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಧೀಶರು ಹಾಗೂ ತಾಲೂಕಾ ಕಾನೂನು ಸೇವೆಗಳ ಸಮಿತಿಯ ಕಾರ್ಯದರ್ಶಿಯಾದ ಸಿದ್ರಾಮ ರೆಡ್ಡಿ, ಸಹಾಯಕ ಸರ್ಕಾರಿ ಅಭಿಯೋಜಕರಾದ ಎ.ಎ.ನೇಸರಿಕರ, ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಜೆ.ಬಿ.ಮುನವಳ್ಳಿ, ಉಪಾಧ್ಯಕ್ಷರಾದ ಎಮ್.ಎಸ್.ಹುಬ್ಬಳ್ಳಿ, ಕಾರ್ಯದರ್ಶಿಯಾದ ಎಸ್.ಎಸ್.ಕಾಳಪ್ಪನವರ, ಮಹಿಳಾ ಪ್ರತಿನಿಧಿ…

Read More

ಬೆಟಗೇರಿ:ಗ್ರಾಮದ ಚೈತನ್ಯ ಗ್ರುಪ್ಸ್ನ ಉಭಯ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ 79ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮಾಚರಣೆ ನಡೆಯಿತು.

ಬೆಟಗೇರಿ:ದೇಶಕ್ಕಾಗಿ ತಮ್ಮ ಬದುಕನ್ನೆ ತ್ಯಾಗ ಮಾಡಿದ ಮಹಾನ್ ವ್ಯಕ್ತಿಗಳನ್ನು ಇಂದು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದು ಬೆಟಗೇರಿ ತಾಪಂ ಮಾಜಿ ಸದಸ್ಯ ಈರಪ್ಪ ದೇಯಣ್ಣವರ ಹೇಳಿದರು. ಉಭಯ ಮಾಧ್ಯಮ ಪ್ರಾಥಮಿಕ ಶಾಲೆಯ ಮಕ್ಕಳು ದೇಶಕ್ಕಾಗಿ ತಮ್ಮ ಬದುಕನ್ನೆ ತ್ಯಾಗಗೈದ ಮಹಾನ್ ವೀರ ಪುರುಷ ಮತ್ತು ಮಹಿಳೆಯರ ರೂಪಕದ ವೇಷಭೂಷಣ ತೊಟ್ಟು ಎಲ್ಲರ ಗಮನ ಸೆಳೆದರು. ಮಹಾತ್ಮಗಾಂಧೀಜಿ ಮತ್ತು ಡಾ.ಬಿ.ಆರ್.ಅಂಬೇಡ್ಕರ ಭಾವ ಚಿತ್ರಕ್ಕೆ ಪೂಜೆ, ಪುಷ್ಪ ಸಮರ್ಪನೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಿಹಿ ವಿತರಣೆ ಸಡಗರದಿಂದ ನಡೆಯಿತು.ಸ್ಥಳೀಯ ಶಿಕ್ಷಣಪ್ರೇಮಿಗಳಾದ ಬಸಪ್ಪ ಮೇಳೆಣ್ಣವರ,…

Read More

ನ್ಯಾಯಾಲಯದ ಸಂಕೀರ್ಣ ಸವದತ್ತಿಯಲ್ಲಿ ಪತ್ರಿಕಾಗೋಷ್ಠಿಯನ್ನು ಹವ್ಮಿುಕೊಳ್ಳಲಾಗಿತ್ತು

ಪ್ರಧಾನ ಹಿರಿಯ ಸಿವಿಲ್‍ ನ್ಯಾಯಾಧೀಶರಾದ ಸಿದ್ದರಾಮ ರವರು ಬೆಳಗಾವಿಯ ಖಾಯಂ ಜನತಾ ನ್ಯಾಯಾಲಯದ ಕಾರ್ಯ ವಿಧಾನದ ಹಾಗೂ ವೈಶಿಷ್ಟ್ಯ ಬಗ್ಗೆ ಮಾತನಾಡಿ ಪ್ರಕರಣವೊ‍ಂದರ ಎರಡು ಪಕ್ಷಗಳವರು ರಾಜೀ ಸಂಧಾನ ಮಾಡಿಕೊಳ್ಳುವಲ್ಲಿ ಅಧ್ಯಕ್ಷರು ಹಾಗೂ ಇತರ ಇಬ್ಬರು ಸದಸ್ಯರು ಅವರುಗಳಿಗೆ ಮಾರ್ಗದರ್ಶನ ನೀಡುತ್ತಾರೆ. ಅವರು ಪರಸ್ಪರ ರಾಜೀ ಮಾಡುಕೊಳ್ಳುವಲ್ಲಿ ಯಶಸ್ವಿಯಾದಲ್ಲಿ ರಾಜೀ ಸಂಧಾನದ ಷರತ್ತುಗಳನ್ವಯವಾಗಿ ಪ್ರಕರಣವನ್ನು ಇತ್ಯರ್ಥಗೊಳಿಸಿ ತೀರ್ಪನ್ನು ನೀಡುತ್ತಾರೆ. ರಾಜೀ ಸಂಧಾನ ವಿಫಲವಾದಲ್ಲಿ ಹಾಗೂ ಆ ಪ್ರಕರಣ ಯಾವುದೇ ಅಪರಾಧಕ್ಕೆ ಸಂಬಂಧಿಸಿರದಿದ್ದಲ್ಲಿ ಅದರ ಎರಡೂ ಪಕ್ಷಗಳವರು ಸಾದರಪಡಿಸಿದ…

Read More

ಧಾರವಾಡದ ಎನ್‍ಸಿಸಿ ಬಟಾಲಿಯನ್‍ನಿಂದ ಏಕತಾ ಓಟ, ಸ್ವಚ್ಛತಾ ಅಭಿಯಾನ ಕಾರ್ಯಕ್ರಮ

ಧಾರವಾಡ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ 24 ಕರ್ನಾಟಕ ಬಟಾಲಿಯನ್ ಕಮಾಂಡಿಂಗ್ ಆಫೀಸರ್ ಕರ್ನಲ್ ಅನೂಪ್ ರಾಷಲ್ ಗಾಂವಕರ, 5 ಗಲ್ರ್ಸ್ ಬಟಾಲಿಯನ್ ಲೆಫ್ಟನೆಂಟ್ ಕರ್ನಲ್ ಸುಜನ ರಾಯ್, ಎಓ ಲೆಫ್ಟನೆಂಟ್ ಕರ್ನಲ್ ವೈ.ಎಸ್.ರನಾವತ್ ಇವರುಗಳ ನೇತೃತ್ವದಲ್ಲಿ ಏಕತಾ ಓಟ, ಸ್ವಚ್ಛತಾ ಅಭಿಯಾನ ಮತ್ತು ಪುನೀತ್ ಸಾಗರ್ ಅಭಿಯಾನ ಜರುಗಿತು. ಕೆಲಗೇರಿ ಕೆರೆ ಮತ್ತು ಕೆಸಿಡಿ ವೃತ್ತದ ಸುತ್ತಮುತ್ತಲಿನ ಪ್ರದೇಶವನ್ನು ಎನ್‍ಸಿಸಿ ಕೆಡೆಟ್‍ಗಳ ಸ್ವಯಂಸೇವಕರು ಸ್ವಚ್ಛಗೊಳಿಸಿದರು. ಒಗ್ಗಟ್ಟು ಪ್ರದರ್ಶಿಸುವದು, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಗಳಿಗೆ ಜಾಗೃತಿ ಮೂಡಿಸುವದು. ಸ್ವಚ್ಛತೆ ಮಹತ್ವದ…

Read More

ಯಲ್ಲಮ್ಮನ ದೇವಸ್ಥಾನದ ಹುಂಡಿಗಳಲ್ಲಿ ಮಳೆ ನೀರು ಜಲಾವೃತವಾಗಿದ್ದ ಕಾಣಿಕೆ ಹುಂಡಿಗಳನ್ನ ಓಪನ್ ಮಾಡಿ ನೋಟುಗಳನ್ನ ಹೊರಗೆ ತೆಗೆದು ಒಣ ಹಾಕಿದ್ದಾರೆ.

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಿಂದಾಗಿ ಸವದತ್ತಿ ಯಲ್ಲಮ್ಮ ದೇವಾಲಯದ ಗರ್ಭಗುಡಿಗೆ ನೀರು ಹೋಗಿತ್ತು . ಅಲ್ಲಿ ಇದ್ದಂತ ಕಾಣಿಕೆ ಹುಂಡಿಗಳು ನೀರಿನಿಂದ ತುಂಬಿದ್ದವು. ಇದರಿಂದ ನೋಟುಗಳೆಲ್ಲ ತೊಯ್ದು ತೊಪ್ಪೆಯಾಗಿದ್ದವು. ಇದೀಗ ನೀರು ಕಡಿಮೆಯಾಗಿದ್ದರಿಂದ ದೇವಾಲಯದ ಆಡಳಿತ ಮಂಡಳಿ ಹುಂಡಿಗಳನ್ನು ಓಪನ್ ಮಾಡಿ ನೋಟುಗಳನ್ನು ದೇವಾಲಯದ ಆವರಣದಲ್ಲಿ ಒಣ ಹಾಕಿದ್ದಾರೆ. ದೇವಾಲಯದ ಆವರಣದಲ್ಲಿನ ಎಲ್ಲ ನೀರನ್ನ ಹೊರ ಹಾಕಿ ಸ್ವಚ್ಚಗೊಳಿಸಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಭಕ್ತರು ಬಂದು ದೇವಿಯ…

Read More

15ನೇ ವರ್ಷದ ಶ್ರಾವಣ ಮಾಸದ ನಿಮಿತ್ಯ ಕೋಟಿಜಪಯಜ್ಞ ಹಾಗೂ 7ನೇ ಮಹಾ ರಥೋತ್ಸವ ಅಗಸ್ಟ್ 18ರಂದು ಜರಗಲಿದೆ.

ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕಿನ ಉಗಲವಾಟ ಗ್ರಾಮದ ಸುಕ್ಷೇತ್ರ ತೀರ್ಥಬಸವೇಶ್ವರ ದೇವಸ್ಥಾನ ರಾಮತೀರ್ಥದ 15ನೇ ವರ್ಷದ ಶ್ರಾವಣ ಮಾಸದ ನಿಮಿತ್ಯ ಕೋಟಿಜಪಯಜ್ಞ ಹಾಗೂ 7ನೇ ಮಹಾ ರಥೋತ್ಸವ ಅಗಸ್ಟ್ 18ರಂದು ಜರಗಲಿದೆ. ಈ ವರ್ಷ ಶ್ರಾವಣ ಮಾಸದ ನಿಮಿತ್ಯ ಸದ್ಭಕ್ತರು ದೇಶದ ಹಿತಾಶಕ್ತಿಗಾಗಿ ಮತ್ತು ಭಗವಂತನ ಕೃಪೆಗಾಗಿ ಪ್ರತಿದಿನ ಮುಂಜಾನೆ ಬ್ರಾಹ್ಮೀಮುಹೂರ್ತದಲ್ಲಿ ಶ್ರೀ ರುದ್ರಾಭಿಷೇಕ ಸಹಸ್ರಬಿಲ್ವಾರ್ಚನೆ ಮತ್ತು ಸೂತ್ರದೊಂಗಿ ಕೋಟಿ ಜಪಯಜ್ಞ ಪ್ರಾರಂಭವಾಗುತ್ತದೆ ಈ ಸತ್ಕಾಕಾರ್ಯದಲ್ಲಿ ತಾವೆಲ್ಲರು ತನು, ಮನ, ಧನದೊಂದಿಗೆ ಹೃದಯಪೂರ್ವಕವಾಗಿ ಭಗವಂತನಿಗೆ ಅರ್ಪಿಸಿ ಪರಮಾತ್ಮನಕೃಪೆಗೆ…

Read More

ವಿಜಯ ಸೇನಾ ಸಮಿತಿಯಿಂದ ಹಮ್ಮಿಕೊಂಡ ಉಚಿತ ಹೆಲ್ಮೆಟ್ ವಿತರಣಾ ಕಾರ್ಯಕ್ರಮಕ್ಕೆ ಸಿಪಿಐ ವಿನಾಯಕ ಬಡಿಗೇರ ಚಾಲನೆ ನೀಡಿದರು.

ಜನರ ಸಮಸ್ಯೆಗಳಿಗೆ ಸದಾ ಮಿಡಿಯುತ್ತಿರುವ ಹಾಗೂ ಅವುಗಳನ್ನು ಪರಿಹರಿಸುವಲ್ಲಿ ಸಾಮಾಜಿಕ ಸೇವೆ ಮಾಡುವಲ್ಲಿ ಪ್ರಾಮಾಣಿಕತೆಯಿಂದ ಶ್ರಮಿಸುತ್ತಿರುವ ರಾಮದುರ್ಗದ ವಿಜಯ ಸೇನಾ ಸಮಿತಿ, ಉಚಿತವಾಗಿ ಹೆಲ್ಮೆಟ್ ವಿತರಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿತು. ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ವಿಜಯ ಸೇನಾ ಸಮಿತಿಯಿಂದ ಹಮ್ಮಿಕೊಂಡ ಉಚಿತ ಹೆಲ್ಮೆಟ್ ವಿತರಣಾ ಕಾರ್ಯಕ್ರಮಕ್ಕೆ ಸಿಪಿಐ ವಿನಾಯಕ ಬಡಿಗೇರ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ಬೈಕ್ ಸಂಚಾರ ಮಾಡುವ ಸವಾರರು ತಮ್ಮ ಜೀವದ ರಕ್ಷಣೆಗೆ ಆದ್ಯತೆ…

Read More