ಚಡಚಣದಲ್ಲಿ ಟಾಸ್ಕ್‌ಫೋರ್ಸ ಸಭೆ:ನೀರು, ರೈತರಿಗೆ ಬೀಜ ಕೊರತೆಯಾಗದಂತೆ ಎಚ್ಚಿರವಹಿಸಿ: ಶಾಸಕ ಕಟಕಧೋಂಡ
ತಾಲೂಕಿನಾದ್ಯಾಂತ ಜನರಿಗೆ ಕುಡಿಯುವ ನೀರು ಹಾಗೂ ರೈತರಿಗೆ ಬೀಜದ ಕೊರತೆಯಾಗದಂತೆ ಎಚ್ಚರವಹಿಸಬೇಕು ಎಂದು ಶಾಸಕ ವಿಠ್ಠಲ ಕಟಕಧೋಂಡ ಅಧಿಕಾರಿಗಳಿಗೆ ಹೇಳಿದರು. ಚಡಚಣ ಪಟ್ಟಣದ ತಾಲೂಕು ಪಂಚಾಯ್ತಿ ಕಚೇರಿಯಲ್ಲಿ ಆಯೋಜಿಸಲಾದ ಟಾಸ್ಕಪೋರ್ಸ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕುಡಿಯುವ ನೀರಿನ ಕೊರತೆಯನ್ನು ಕಂಡು ಬಂದಲ್ಲಿ ಅಧಿಕಾರಿಗಳ ಮೇಲೆ ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ತಿಳಿಸದ ಅವರು, ಬೀಜದ ಕೊರತೆಯಾದರೆ ತಕ್ಷಣ ಕ್ರಮ ಕೈಗೊಂಡು ಎರಡು ಮೂರು ಕೌಂಟರ್ ತೆಗೆದು ರೈತರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.ಉಪವಿಭಾಗಾಧಿಕಾರಿ ಹಬೀದ ಗದ್ಯಾಳ…
