ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ತುರನೂರ ಗ್ರಾಮ ಪಂಚಾಯತಿಯ ಆವರಣದಲ್ಲಿ ಧ್ವಜಾರೋಹಣವನ್ನು ನೆರವೇರಿಸಲಾಯಿತು.
ಸ್ವಾತಂತ್ರ್ಯ ದಿನದಂದು ವಿಶೇಷ ಗ್ರಾಮಸಭೆಯನ್ನು ಹಮ್ಮಿಕೊಂಡು ಗ್ರಾಮ ಪಂಚಾಯತಿಯ ಸ್ವಂತ ಅನುದಾನದಲ್ಲಿಗ್ರಾಮ ಲಕ್ಷ್ಮಿ ಸುಕನ್ಯಾ ಸಮೃದ್ಧಿ ಯೋಜನೆ (ಹೆಣ್ಣು ಮಗು ಜನಿಸಿದ ಸಂದರ್ಭದಲ್ಲಿ ಮಗುವಿನ ಹೆಸರಿನಲ್ಲಿ ಅಂಚೆ ಕಚೇರಿಯಲ್ಲಿ ರೂ.5,000/- ಠೇವಣಿ ಇಡುವ ಯೋಜನೆ ಗ್ರಾಮರತ್ನ ಪ್ರತಿಭಾ ಪುರಸ್ಕಾರ ಯೋಜನೆ (ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶೇಕಡ 90 ಕ್ಕಿಂತ ಹೆಚ್ಚು ಅಂಕಗಳಿಸಿದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿ, ವಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಪ್ರೋತ್ಸಾಹ ಧನ ನೀಡುವುದು) ಗ್ರಾಮ ಪಂಚಾಯಿತಿ ಸಪ್ತಪದಿ ಯೋಜನೆ (ಹೆಣ್ಣುಮಗಳ…
