ದಾಖಲೆ ಇಲ್ಲದೆ ಸಾಗಿಸುತ್ತಿದ್ದ 14 ಲಕ್ಷ ನಗದು, 128 ಗ್ರಾಂ ಚಿನ್ನಾಭರಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಬೆಂಗಳೂರಿನಿಂದ ತುಮಕೂರು ಕಡೆಗೆ ಬರುತ್ತಿದ್ದಕೆಎಸ್‌ಆರ್‌ಟಿಸಿ ಬಸ್ ಪರಿಶೀಲನೆ ನಡೆಸಿದಾಗ ಹಣ ಮತ್ತುಚಿನ್ನ ಪತ್ತೆಯಾಗಿದೆ.ತುಮಕೂರು ನಗರದ ಬಟವಾಡಿ ಬಳಿ ಶುಕ್ರವಾರ ಬೆಳಗಿನಜಾವ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 14 ಲಕ್ಷ ನಗದು, 128 ಗ್ರಾಂ ಚಿನ್ನಾಭರಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.ನಗರದ ಚಿಕ್ಕಪೇಟೆಯ ಗಾರ್ಡನ್ರಸ್ತೆಯಲ್ಲಿರುವ ಚಿನ್ನದ ಅಂಗಡಿಯೊಂದರಲ್ಲಿ ಕೆಲಸಮಾಡುತ್ತಿರುವ ನಾಗಭೂಷಣ್ ಎಂಬುವರು ಹಣ, ಚಿನ್ನತಗೆದುಕೊಂಡು ಬರುತ್ತಿದ್ದರು. ಈ ವೇಳೆ ಪೊಲೀಸರುಪರಿಶೀಲನೆ ನಡೆಸಿ, ದುಡ್ಡು ಬಂಗಾರ ಜಪ್ತಿ ಮಾಡಿದ್ದಾರೆ.ವಿನೋದ್ ಎಂಬುವರಿಗೆ ಸೇರಿದ ಚಿನ್ನ, ಬೆಳ್ಳಿ ಅಂಗಡಿಯಲ್ಲಿಕೆಲಸ ಮಾಡುತ್ತಿದ್ದರು. ಎನ್‌ಇಪಿಎಸ್ ಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
