ಮತದಾರರ ಚೀಟಿ ವಿತರಿಸಿದ ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ
ಬೆಳಗಾವಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೇ 7 ರಂದು ಮತದಾನ ನಡೆಯುವ ಹಿನ್ನೆಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗೊಂಧಳಿ ಗಲ್ಲಿಯ ಮನೆ ಮನೆಗೆ ತೆರಳಿ ಮತದಾರರ ಚೀಟಿ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಮತದಾರರು ತಮ್ಮ ಹೆಸರಿರುವ ಮತಗಟ್ಟೆಗಳನ್ನು ಗುರುತಿಸಲು ಮತದಾರರ ಚೀಟಿಯಿಂದ ಅನುಕೂಲವಾಗಲಿದೆ.ಮತಗಟ್ಟೆಗಳ ಬಗ್ಗೆ ಖಚಿತ ಮಾಹಿತಿ ಲಭಿಸುವುದರಿಂದ ಮತದಾನದ ದಿನದಂದು ಮತಗಟ್ಟೆ ಹುಡುಕುವ ಗೊಂದಲ ಇರುವುದಿಲ್ಲ…
