2024ರ ಲೋಕಸಭೆ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಯವರಿಗೆ ಅಭ್ಯರ್ಥಿಯಾಗಿ ಘೋಷಿಸಬೇಕು ಎಂದು ಬೆಳಗಾವಿ ಜಿಲ್ಲಾ ಪರಿಶಿಷ್ಟ ಜಾತಿ ವಿಭಾಗ ವಕ್ತಾರರು, ಶ್ರೀಮತಿ ಲಕ್ಷ್ಮೀ ಕೆ. ನಾಗಣ್ಣವರ ಹೇಳಿದರು
50 ವರ್ಷಗಳಿಂದ ಲೋಕಸಭಾ ಕ್ಷೇತ್ರಗಳಿಗೆ ಪರಿಶಿಷ್ಟ ಜಾತಿ ಮೀಸಲಾತಿ ನೀಡಿರುವುದಿಲ್ಲ. ಕಳೆದವಿಧಾನ ಸಭಾ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ಜಿಲ್ಲೆ ಅಂತಾ ವಿಕೇಂದ್ರಿಕರಣ ಮಾಡಿಸೀಟಗಳನ್ನು ಹಂಚಿಕೆ ಮಾಡಿದ್ದರು. ಆ ಸಂದರ್ಭದಲ್ಲಿ ಚಿಕ್ಕೋಡಿ ಭಾಗದವರಿಗೆ ಪ್ರಾಶಸ್ತ್ರ ನೀಡಿದರು.ಬೆಳಗಾವಿಯವರಿಗೆ ನೀಡಲಿಲ್ಲ. ಕನಿಷ್ಠ 6 ಲಕ್ಷ ಮತಗಳು ಪರಿಶಿಷ್ಟ ಜಾತಿಯ ಬೆಳಗಾವಿ ಲೋಕಸಭೆಯಲ್ಲಿಇರುವುದರಿಂದ ವಿಧಾನ ಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ಹಾಗೂ ನಿಗಮಮಂಡಳಿಗಳಲ್ಲಿ ನಮಗೆಈಗಿನವರೆಗೂ ಅನ್ಯಾಯವಾಗುತ್ತಾ ಬರುತ್ತಿದೆ. 75 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಮೂಲ ಬುನಾದಿಆಗಿರುವ ಪ್ರಜೆಗಳು ಪರಿಶಿಷ್ಟ ಜಾತಿ, ಪರಿಶಿಷ್ಟ…
