ಸದ್ಗುರು ಶ್ರೀ ಸಿದ್ಧಾರೂಢರು ಶಿವನ ಅವತಾರಿ: ಈಶ್ವರ ಬಳಿಗಾರ
ಬೆಟಗೇರಿ:ಸದ್ಗುರು ಸಿದ್ಧಾರೂಢರು ಮಾನವನ ಅಜ್ಞಾನ ಕಳೆದು ಸುಜ್ಞಾನದ ಸನ್ನಮಾರ್ಗ ತೋರಿಸಿದ ಮಹಾನ್ ದೇವತಾ ಪುರುಷ, ಹುಬ್ಬಳ್ಳಿ ಸದ್ಗುರು ಶ್ರೀ ಸಿದ್ಧಾರೂಢರು ಶಿವನ ಅವತಾರಿಯಾಗಿದ್ದಾರೆ ಎಂದು ಬೆಟಗೇರಿ ಗ್ರಾಮದ ಸದ್ಗುರು ಶ್ರೀ ಸಿದ್ಧಾರೂಢರ ಪಾದಯಾತ್ರೆ ವ್ಯವಸ್ಥಾಪಕ ಸಮಿತಿ ಪ್ರಧಾನ ಸಂಚಾಲಕ ಈಶ್ವರ ಬಳಿಗಾರ ಹೇಳಿದರು.ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸದ್ಗುರು ಶ್ರೀ ಸಿದ್ಧಾರೂಢರ ಸದ್ಭಭಕ್ತರು ಫೆ.೧೨ರಂದು ಹುಬ್ಬಳ್ಳಿ ಸಿದ್ಧಾರೂಢ ಮಠಕ್ಕೆ ಹಮ್ಮಿಕೊಂಡ ೧೧ನೇ ವರ್ಷದ ಪಾದಯಾತ್ರೆಗೆ ಸ್ಥಳೀಯ ಡಾ.ಬೆಟಗೇರಿ ಕೃಷ್ಣಶರ್ಮ ವೃತ್ತದಲ್ಲಿ ಪಾದಯಾತ್ರೆ ನೇತೃತ್ವ ವಹಿಸಿ ಮಾತನಾಡಿದ ಅವರು,…
ಸೌಂಡ್ ಸಿಸ್ಟಮ್ಗಳಿಗೆ ಕಡಿವಾಣ ಹಾಕದ ಅಧಿಕಾರಿಗಳ ವಿರುದ್ಧ : ಶ್ರೀನಿವಾಸಗೌಡ ಪಾಟೀಲ 3ನೇ ದಿನದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಬೆಳಗಾವಿ ಟ್ರಾೃಕ್ಟರ್ ಮತ್ತು ಇತರೆ ವಾಹನಗಳಲ್ಲಿ ಕಾನೂನು ಬಾಹಿರವಾಗಿ ಅಳವಡಿಸಿರುವ ಸೌಂಡ್ ಸಿಸ್ಟಮ್ಗಳಿಗೆ ಕಡಿವಾಣ ಹಾಕದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರಾಮದುರ್ಗ ತಾಲೂಕಿನ ಓಬಳಾಪುರದ ಹೋರಾಟಗಾರ ಶ್ರೀನಿವಾಸಗೌಡ ಪಾಟೀಲ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಸೋಮವಾರದಿಂದ ಶ್ರೀನಿವಾಸಗೌಡ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಧರಣಿ ಆರಂಭಿಸಿದ್ದು, ಮೊದಲ ದಿನ ಕರುನಾಡ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಬೆಂಬಲ ವ್ಯಕ್ತಪಡಿಸಿ ಹೋರಾಟದಲ್ಲಿ ಭಾಗಿಯಾಗಿದ್ದರು. ಎರಡನೆಯ ದಿನ ರೈತ…
ಮಾಹಿತಿ ಹಕ್ಕು ಅರ್ಜಿದಾರರಿಗೆ ಕಪ್ಪು ಪಟ್ಟಿಗೆ ಸೇರಿಸುವ ಮತ್ತು ದಂಡ ವಿಧಿಸುವ ಯಾವುದೇ ಅಧಿಕಾರ ಇಲ್ಲವೆಂದು ಸ್ಪಷ್ಟ ಪಡಿಸಿದ ಕರ್ನಾಟಕ ಮಾಹಿತಿ ಆಯೋಗ..!!
ಮಾಹಿತಿ ಹಕ್ಕು ಅಧಿನಿಯಮ, 2005 ರಡಿ ಮಾಹಿತಿ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಬಗ್ಗೆ.ಕರ್ನಾಟಕ ಮಾಹಿತಿ ಆಯೋಗಕ್ಕೆ ಆರ್ಜಿದಾರರು/ಸಾರ್ವಜನಿಕರು ಮಾಹಿತಿ ಹಕ್ಕು ಅಧಿನಿಯಮ 2005ರ ಅಡಿಯಲ್ಲಿ ಕಲಂ 19(3)ರಲ್ಲಿ ದ್ವಿತೀಯ ಮೇಲ್ಮನವಿ ಸಲ್ಲಿಸಿದ ನಂತರ ಅರ್ಜಿದಾರರನ್ನು ಕಪ್ಪು ಪಟ್ಟಿಗೆ ಸೇರಿಸುವುದು ಹಾಗೂ ಒಂದು ಅರ್ಜಿಗೆ ಒಂದು ಸಾವಿರ ದಂಡ ವಿಧಿಸುವ ಯಾವುದೇ ಅಧಿಕಾರ ಇಲ್ಲವೆಂದು ಸ್ಪಷ್ಟ ಪಡಿಸಿದ ಕರ್ನಾಟಕ ಮಾಹಿತಿ ಆಯೋಗ ಮಾಹಿತಿ ಹಕ್ಕು ಕಾಯಿದೆಯಡಿ ಮಾಹಿತಿ ಕೇಳುವ ನಾಗರಿಕರನ್ನು ‘ಕಪ್ಪು ಪಟ್ಟಿ’ಗೆ ಸೇರಿಸುತ್ತಿರುವ ಕರ್ನಾಟಕ ಮಾಹಿತಿ ಆಯೋಗದ…
ಧಾರವಾಡ ನೂತನ ಜಿಲ್ಲಾಧಿಕಾರಿಯಾಗಿ ಸ್ನೇಹಲ್ ಆರ್. ಅವರು ಇಂದು ಅಧಿಕಾರ ಸ್ವೀಕರಿಸಿದರು
ಧಾರವಾಡ ಕರ್ನಾಟಕ ಸರಕಾರದ ರಾಷ್ಟ್ರೀಯ ಜೀವನೊಪಾಯ ಅಭಿಯಾನದ ನಿರ್ದೆಶಕರಾಗಿದ್ದ ಮತ್ತು 2017-18 ರಲ್ಲಿ ಧಾರವಾಡ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ಸೇವೆ ಸಲ್ಲಿಸಿರುವ ಹಿರಿಯ ಐಎಎಸ್ ಅಧಿಕಾರಿ ಸ್ನೇಹಲ್.ಆರ್ ಅವರು ಇಂದು ಬೆಳಿಗ್ಗೆ ಧಾರವಾಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡರು. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ದಿವ್ಯ ಪ್ರಭು ಜಿ. ಆರ್. ಜೆ. ಅವರನ್ನು ನಿನ್ನೆ ದಿನ ರಾಜ್ಯ ಸರಕಾರ ವರ್ಗಾವಣೆ ಮಾಡಿ, ಆದೇಶಿಸಿರುವ ಹಿನ್ನೆಲೆಯಲ್ಲಿ ಸ್ನೇಹಲ್.ಆರ್. ಅವರು ಇಂದು ಧಾರವಾಡ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು….
ವಿಂಡ್ ಕಂಪನಿಗಳ ವಿರುದ್ಧ ಜಕ್ಕಲಿ ಗ್ರಾಮಸ್ಥರ ಆಕ್ರೋಶ
ಗದಗ ಜಿಲ್ಲೆ ರೋಣ ತಾಲೂಕಿನ ಜಕ್ಕಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ವಿಂಡ್ ಕಂಪನಿಗಳ ದಬ್ಬಾಳಿಕೆ ಮಿತಿಮೀರಿದೆ. ಕಂಪನಿಗಳ ಭಾರಿ ಯಂತ್ರೋಪಕರಣಗಳನ್ನು ಹೊತ್ತ ವಾಹನಗಳ ಸತತ ಸಂಚಾರದಿಂದಾಗಿ ಗ್ರಾಮದ ರಸ್ತೆಗಳು ಸಂಪೂರ್ಣ ಹದಗೆಟ್ಟು ಗುಂಡಿಮಯವಾಗಿವೆ. ಸಾರ್ವಜನಿಕರ ಸಂಚಾರಕ್ಕೆ ಸಂಚಕಾರ ತಂದಿರುವ ಈ ಕಂಪನಿಗಳ ವಿರುದ್ಧ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಅಲ್ಲದೆ, RTI ಮೂಲಕ ಕಂಪನಿಗಳು ಪಾವತಿಸಿರುವ ತೆರಿಗೆ ಮತ್ತು ಪಡೆದಿರುವ ಅನುಮತಿಗಳ ಬಗ್ಗೆಯೂ ಮಾಹಿತಿ ಕೇಳಲಾಗಿದೆ. ತಕ್ಷಣವೇ ಹಾಳಾದ ರಸ್ತೆಗಳನ್ನು…
ಬೆಟಗೇರಿ ಗ್ರಾಮದ ಯಲ್ಲಮ್ಮದೇವಿ ಭಕ್ತರು ಸವದತ್ತಿ ಯಲ್ಲಮ್ಮದೇವಿ ದರ್ಶನಕ್ಕಾಗಿ ಎತ್ತಿನಗಾಡಿ, ಕಾಲ್ನಡಿಗೆ ಮೂಲಕ ಪ್ರಯಾಣ ಬೆಳಸಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸವದತ್ತಿ ಯಲ್ಲಮ್ಮ ದೇವಿ ನೂರಾರು ಜನ ಭಕ್ತರು ಎತ್ತಿನ ಗಾಡಿ(ಚಕ್ಕಡಿ) ಹೊಡಿಕೊಂಡು ಪಾದಯಾತ್ರೆ ಮೂಲಕ ಸವದತ್ತಿಯ ದೇವಸ್ಥಾನದ ಯಲ್ಲಮ್ಮ ದೇವಿ ದರ್ಶನಕ್ಕಾಗಿ ತೆರಳುವ ಕಾರ್ಯಕ್ರಮ ಫೆ.೪ರಂದು ಸಡಗರದಿಂದ ನಡೆಯಿತು.ಪ್ರತಿ ವರ್ಷದ ಸಂಪ್ರದಾಯದಂತೆ ಈ ವರ್ಷವೂ ಕೂಡಾ ಊರಿನ ಹಲವು ಕುಟುಂಬಗಳು ಚಕ್ಕಡಿ, ಎತ್ತುಗಳನ್ನು ಶೃಂಗರಿಸಿ, ಯಲ್ಲಮ್ಮ ದೇವಿ ಕೃರ್ತ ಗದ್ಗುಗೆಯನ್ನು ಇಲ್ಲಿಯ ಯಲ್ಲಮ್ಮ ದೇವಿಯ ಅರ್ಚಕರ, ಆರಾಧಕ ಮಹಿಳೆಯರು ತಲೆಯ ಮೇಲೆ ಶ್ರೀದೇವಿಯ ಜಗಹೊತ್ತು ಊಧೋ..ಊಧೋ..ಊಧೋ.. ಯಲ್ಲಮ್ಮ…ನಿನ್ನ ಹಾಲು…ಕೂಧೋ… ಎನ್ನುತ್ತಾ ಸಕಲ…
ಗೋಕಾಕ ತಾಲೂಕಿನ ಬೆಟಗೇರಿ-ಬಗರನಾಳ ಗ್ರಾಮದ ಗಡಿಭಾಗದಲ್ಲಿರುವ ಜಗನ್ಮಾತೆ ಬಾಕುಬಾಯಿ ಮಹಾಲಕ್ಷ್ಮಿ ಜಾತ್ರಾ ಮಹೋತ್ಸವ ಪ್ರಯುಕ್ತ ಸತ್ಯವಾನ ಸಾವಿತ್ರಿ ಸಣ್ಣಾಟದ ಪ್ರದರ್ಶನಗೊಂಡಿತು.
ಬೆಟಗೇರಿ:ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಮಾತ್ರ ರಂಗಭೂಮಿ ಮತ್ತು ಬೈಲಾಟದ ಕಲೆಗಳನ್ನು ಕಾಣಬಹುದಾಗಿದೆ. ಜಾನಪದ ನಮ್ಮ ಸಂಸ್ಕೃತಿಯ ಅಸ್ಮೀತೆ, ಜಾನಪದ ಕಲೆ ನಿತ್ಯ ನೂತವಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಯುವ ಸಾಹಿತಿ, ರಂಗಭೂಮಿ ಕಲಾವಿದ ಶಿವಪುತ್ರ ಪರಮಾನಟ್ಟಿ ಹೇಳಿದರು.ಗೋಕಾಕ ತಾಲೂಕಿನ ಬೆಟಗೇರಿ-ಬಗರನಾಳ ಗ್ರಾಮದ ಗಡಿಭಾಗದಲ್ಲಿರುವ ಜಗನ್ಮಾತೆ ಬಾಕುಬಾಯಿ ಜಾತ್ರಾ ಮಹೋತ್ಸವ ಪ್ರಯುಕ್ತ ಫೆ.೧ ರಂದು ನಡೆದ ಸತ್ಯವಾನ ಸಾವಿತ್ರಿ ಸಣ್ಣಾಟ ಪ್ರದರ್ಶನ ಉದ್ಘಾಟನೆ ನೆರವೇರಿಸಿ ಮಾತನಾಡಿ, ಸ್ಥಳೀಯ ಹಿರಿಯ ಸಾಹಿತಿ, ರಂಗಭೂಮಿ ಕಲಾವಿದ ಈಶ್ವರಚಂದ್ರ ಬೆಟಗೇರಿ…
ಬಾಲ್ ಬ್ಯಾಡ್ಮಿಂಟನ್ ನಲ್ಲಿರಾಮದುರ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕುಮಾರಿ ಉಮ್ಮಿ ಸಾನಿಯಾ ನಾಸಿಪುರ ರಾಚವಿವಿ ದ ಯುನಿವರ್ಸಿಟಿ ಬ್ಲೂ ಆಗಿ ಆಯ್ಕೆ
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಶ್ರೀಮತಿ ಈರಮ್ಮ ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಎಸ್ಸಿ 5ನೇ ಸೆಮಿಸ್ಟರ್ ವಿದ್ಯಾರ್ಥಿನಿ ಕುಮಾರಿ ಉಮ್ಮಿ ಸಾನಿಯಾ ನಾಸಿಪುರ ಈತಳು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಯುನಿವರ್ಸಿಟಿ ಬ್ಲೂ ಆಗಿ ಆಯ್ಕೆಯಾಗಿದ್ದಾಳೆ. ಫೆಬ್ರುವರಿ 11ರಂದು ಚೆನ್ನೈನಲ್ಲಿ ಜರುಗಲಿರುವ ಅಂತರ್ ವಿಶ್ವವಿದ್ಯಾಲಯಗಳ ಬಾಲ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಉಮ್ಮಿ ಸಾನಿಯಾ ನಾಸಿಪುರ ಅವರು ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕ್ರೀಡಾ ಪ್ರತಿನಿಧಿಯಾಗಿ ಭಾಗವಹಿಸಲಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ಡಾಕ್ಟರ್…
ಬೆಟಗೇರಿಗ್ರಾಮದಲ್ಲಿ ಭಕ್ತ ಕನಕದಾಸ ಮತ್ತು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ನೂತನ ಮೂರ್ತಿ ಪ್ರತಿಷ್ಠಾಪನೆ.
ದೇಶಕ್ಕಾಗಿ ತಮ್ಮ ಬದುಕನ್ನೇ ತ್ಯಾಗಮಾಡಿದ ಮಹಾನ ಪುರುಷರನ್ನು ಪ್ರತಿಯೊಬ್ಬರೂ ಸ್ಮರಣೆ ಮಾಡಬೇಕು: ಸುಣಧೋಳಿ ಶ್ರೀಗಳುಬೆಟಗೇರಿ: ದೇಶಕ್ಕಾಗಿ ತಮ್ಮ ಬದುಕನ್ನೇ ತ್ಯಾಗಮಾಡಿದ ಮಹಾನ ಪುರುಷರನ್ನು ಪ್ರತಿಯೊಬ್ಬರೂ ಸ್ಮರಣೆ ಮಾಡಬೇಕು. ಭಕ್ತ ಕನಕದಾಸ ಮತ್ತು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರ ಬದುಕಿನ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಸುಣಧೋಳಿ ಅಭಿನವ ಶಿವಾನಂದ ಮಹಾಸ್ವಾಮೀಜಿ ಹೇಳಿದರು.ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಭಕ್ತ ಕನಕದಾಸ ಮತ್ತು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಅಭಿಮಾನಿ ಬಳಗದ ಸಹಯೋಗದಲ್ಲಿ ಫೆ.೧ ರಂದು ನಡೆದ ನೂತನ ಭಕ್ತ…
ಅಭಿಮತ ಶರಣರ ವಚನಗಳು ನಮ್ಮ ಬಾಳನ್ನು ತಿದ್ದುವ ದಾರಿದೀಪಗಳಾಗಿವೆ : ಡಾ. ಗುರುದೇವಿ ಹುಲೆಪ್ಪನವರಮಠ
ಲಿಂಗಾಯತ ಸಂಘಟನೆ ವತಿಯಿಂದ ಗ್ರಂಥ ಲೋಕಾರ್ಪಣೆ ವಚನಗಳು ನಮ್ಮ ಜೀವನದ ದಾರಿದೀಪಗಳು ಡಾ. ಗುರುದೇವಿ ಹುಲೆಪ್ಪನವರಮಠ ಅಭಿಮತಶರಣರ ವಚನಗಳು ನಮ್ಮ ಬಾಳನ್ನು ತಿದ್ದುವ ದಾರಿದೀಪಗಳಾಗಿವೆ. ಪ್ರತಿಶರಣರ ಪ್ರತಿಯೊಂದು ವಚನದ ವಿಚಾರಗಳು ನೈಜತೆ ಬಿಂಬಿಸುವುದರ ಜೊತೆಗೆ ಸದಾಕಾಲ ಮಾರ್ಗದರ್ಶಿಯಾಗಿವೆ ಎಂದು ನಿವೃತ್ತ ಪ್ರಾಧ್ಯಾಪಕಿ ಮತ್ತು ಸಾಹಿತಿ ಡಾ.ಗುರುದೇವಿ ಹುಲೆಪ್ಪನವರಮಠ ರವಿವಾರ ದಿ 1 ರಂದು ಬೆಳಗಾವಿಯ ಹಳಕಟ್ಟಿ ಭವನದಲ್ಲಿ ಪ್ರಾರoಭದಲ್ಲಿ ಮಹಾದೇವಿ ಅರಳಿ ಪ್ರಾಥ೯ನೆ ನಡಿಸಿಕೂಟ್ಟರು ಲಿಂಗಾಯತ ಸಂಘಟನೆಯ ವತಿಯಿಂದ ಅಕ್ಕಮಹಾದೇವಿ ತೆಗ್ಗಿ ರಚಿಸಿದ ‘ವಚನ ಬುತ್ತಿ ‘…
