ದೇಶದ 12 ಜ್ಯೋತಿರ್ ಲಿಂಗಗಳಿಗೆ ಬೈಕ್ ಮೂಲಕ ಸಾಹಸಮಯವಾಗಿ ಧಾರ್ಮಿಕ ಯಾತ್ರೆ ಕೈಗೊಂಡ ಮೈಕ್ರೋಲ್ಯಾಬ್ಸ್ ನ ಪ್ರವೀಣ್ ಸಿಂಗ್
ಬೆಂಗಳೂರು, ದೇಶದ ಪ್ರತಿಷ್ಠಿತ ಔಷಧಿ ಕಂಪೆನಿಯಾದ ಮೈಕ್ರೋ ಲ್ಯಾಬ್ಸ್ ಮಾರುಕಟ್ಟೆ ಮತ್ತು ಮಾರಾಟ ವಿಭಾಗದ ಉಪಾಧ್ಯಕ್ಷ ಪ್ರವೀಣ್ ಸಿಂಗ್ ಅಸಮಾನ್ಯ ಅಭಿಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಭಾರತದಾದ್ಯಂತ ಇರುವ 12 ಜ್ಯೋತಿರ್ಲಿಂಗಗಳನ್ನು ಬೈಕ್ ಮೂಲಕ ಸುತ್ತಾಡಿ ಗಮನ ಸೆಳೆದಿದ್ದಾರೆ. ಧಾರ್ಮಿಕ ಪ್ರವಾಸಕ್ಕೆ ಹೊಸ ಆಯಾಮ ನೀಡಿದ್ದಾರೆ. ಪ್ರವೀಣ್ ಸಿಂಗ್ ಅವರಿಗೆ ಬೈಕ್ ರೈಡಿಂಗ್ ಪ್ರವೃತ್ತಿಯಾಗಿದ್ದು, “ಉದ್ದೇಶದಿಂದ ಬೈಕ್ ಚಾಲನೆ – ರೈಡ್ ವಿತ್ ಪರ್ಪಸ್” ಎಂಬುದು ಅವರ ಧ್ಯೇಯವಾಕ್ಯ. ಇದೇ ಸದಾಶಯದೊಂದಿಗೆ ಅವರು ಸಾಂಸ್ಕೃತಿಕ ಮತ್ತು ಧಾರ್ಮಿಕ ಶ್ರೀಮಂತಿಕೆಯ…
