ಸಿಂಗಲ್ ಸೈಟ್ ಗಳಿಗೆ ಬಿಬಿಎಂಪಿ ಎ ಅಥವಾ ಬಿ ಖಾತೆ ಸ್ಥಗಿತ; ಬಿಡಿಎ ಒಪ್ಪಿಗೆ ಇದ್ರೆ ಮಾತ್ರ ಖಾತಾ!
ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (BDA) ವತಿಯಿಂದ ಅಂಗೀಕಸಲ್ಪಡದೆ ಇರುವ ಬಡಾವಣೆಗಳಲ್ಲಿನ ಸಿಂಗಲ್ ಸೈಟ್ ಗಳಿಗೆ ‘A’ ಅಥವಾ ‘B’ ಖಾತೆ (ಏಕ ನಿವೇಶನ ಸ್ವತ್ತು) ನೀಡುವ ಪದ್ಧತಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ನಿಲ್ಲಿಸಿರುವುದಾಗಿ ಪ್ರಕಟಿಸಿದೆ. ಒಂದು ವೇಳೆ, ಕೃಷಿಯೇತರ ಚಟುವಟಿಕೆಗಳಿಗಾಗಿ ಭೂಪರಿವರ್ತನೆ ಮಾಡಲಾಗಿದ್ದರೂ ಆ ಭೂಮಿಯಲ್ಲಿರುವ ಯಾವುದೇ ಸಿಂಗಲ್ ಸೈಟ್ ಗೆ ಎ ಖಾತೆ ಅಥವಾ ಬಿ ಖಾತೆಯನ್ನು ನೀಡುವುದನ್ನು ನಿಲ್ಲಿಸಿರುವುದಾಗಿ ಬಿಬಿಎಂಪಿ ಸ್ಪಷ್ಟಪಡಿಸಿದೆ. ಇತ್ತೀಚೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬಿಬಿಎಂಪಿಗೆ…
