ಸಮೀರವಾಡಿ ಸಕ್ಕರೆ ಕಾರ್ಖಾನೆ ಪ್ರಸಕ್ತ ಸಾಲಿನ ಕಬ್ಬು ನುರಿಸುವಹಂಗಾಮಿಗೆ ವಿದ್ಯುಕ್ತವಾಗಿ ಚಾಲನೆ ಪ್ರತಿ ಟನ್ ಕಬ್ಬಿಗೆ 3800 ಘೋಷಣೆ ಬಿ ಆರ್ ಬಕ್ಷಿ.
ಹಳ್ಳೂರ ಸಮೀಪದ ಸಮೀರವಾಡಿ ಗೋದಾವರಿ ಬಯೋರಿಪೈನರಿಜ್ ಲಿಮಿಟೆಡ್’ ಸಕ್ಕರೆ ಕಾರ್ಖಾನೆ ಪ್ರಸಕ್ತ ಹಂಗಾಮಿನಲ್ಲಿ ಅತೀ ಹೆಚ್ಚು ಕಬ್ಬು ನುರಿಸುವ ಗುರಿ ಇಟ್ಟುಕೊಳ್ಳಲಾಗಿದ್ದು, ಕಬ್ಬು ಬೆಳೆಗಾರರು ಕಳೆದ 54 ವರ್ಷಗಳಿಂದ ಸಹಕಾರ ನೀಡಿದಂತೆ ಪ್ರಸಕ್ತ ಸಾಲಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗುಣ ಮಟ್ಟದ ಕಬ್ಬು ಪೂರೈಕೆ ಮಾಡಿ ಸಹಕರಿಸಬೇಕು ಪ್ರತಿ ಮೆ ಟನ್’ ಕಬ್ಬಿಗೆ 3800 ರೂ ನೀಡಲಾಗುವುದೆಂದುಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ ಆರ್ ಬಕ್ಷಿ ಹೇಳಿದರು. ಅವರು ಸಮೀರವಾಡಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಶುಕ್ರವಾರ ನಡೆದ 2026-27 ನೇ…
