ಹಾಲಿನ ಟ್ರಕ್ ಹಲವು ಕಾರುಗಳಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ ಮೂವರು ಸಾವು, 20 ಮಂದಿಗೆ ಗಾಯ
ಸಿಕ್ಕಿಂನಲ್ಲಿ ಹಲವು ಕಾರುಗಳಿಗೆ ಹಾಲಿನ ಟ್ಯಾಂಕರ್ ನ ಬ್ರೇಕ್ ಫೇಲ್ ಆಗಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿ, 20 ಮಂದಿ ಗಾಯಗೊಂಡಿದ್ದಾರೆ. ಸಿಕ್ಕಿಂನ ಗ್ಯಾಂಗ್ಟಾಕ್ ನಲ್ಲಿ ಈ ಘಟನೆ ನಡೆದಿದೆ.ಸಿಕ್ಕಿಂನ ರಾಣಿಪೂಲ್ ನಲ್ಲಿ ಶನಿವಾರ ನಡೆದ ಜಾತ್ರೆಯಲ್ಲಿ ನಿಂತಿದ್ದ ಮೂರು ಕಾರುಗಳಿಗೆ ಹಾಲಿನ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟು 20 ಮಂದಿ ಗಾಯಗೊಂಡಿದ್ದಾರೆ. ಡಿಕ್ಕಿಯ ರಭಸಕ್ಕೆ ಆ ಪ್ರದೇಶದಲ್ಲಿ ನೆರೆದಿದ್ದ ಅನೇಕರು ನಜ್ಜುಗುಜ್ಜಾದರು.ಹಾಲಿನ ಟ್ಯಾಂಕರ್ ನ ಬ್ರೇಕ್ ಫೇಲ್ ಆಗಿರೋದೇ ಅಪಘಾತಕ್ಕೆ ಕಾರಣ…
