Prashanth Angadi

ಶಿವಮೊಗ್ಗದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಈಶ್ವರಪ್ಪ ಇವರ ಆಸ್ತಿ ಎಷ್ಟಿದೆ ಗೊತ್ತಾ?

ಶಿವಮೊಗ್ಗ: ಪುತ್ರನಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌  ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಇದೀಗ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ತಮ್ಮ ಅಪಾರ ಬೆಂಬಲಿರೊಂದಿಗೆ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ವರೆಗೆ ರೋಡ್ ಶೋ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರು. ಇನ್ನು ಈಶ್ವರಪ್ಪ ಅವರು ಒಟ್ಟು ಆಸ್ತಿ ಮೌಲ್ಯ 98 ಕೋಟಿ 92 ಲಕ್ಷದ 20 ಸಾವಿರ ಇದೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಅಲ್ಲದೇ ತಮ್ಮ ಪತ್ನಿ ಜಯಲಕ್ಷ್ಮಿ ಹೆಸರಿನಲ್ಲಿ…

Read More

ದಾಖಲೆಗಳಿಲ್ಲದೆ ಸಾಗುಸುತ್ತಿದ್ದ 5,26,500 ರೂಪಾಯಿ ನಗದು ವಶ

ಕಣಬರ್ಗಿ ಚಕಪೋಸ್ಟ್ ಬಳಿ ದಾಖಲೆಗಳಿಲ್ಲದೆ ಸಾಗುಸುತ್ತಿದ್ದ 5,26,500 ರೂಪಾಯಿ ನಗದು ವಶಲೋಕಸಭಾ ಚುನಾವಣೆ ಪ್ರಯುಕ್ತ ಉತ್ತರ ಮತಕ್ಷೇತ್ರದ ಚಕಪೋಸ್ಟ ಬಳಿ ಗೋಕಾಕನಿಂದ ಬೆಳಗಾವಿಗೆ ಪ್ರಯಾಣಿಸುತ್ತಿರುವ ಕಾರಿನಲ್ಲಿ ದಾಖಲೆಗಳಿಲ್ಲದೆ ಸಾಗುಸುತ್ತಿದ್ದ 5,26,500 ನಗದು ಹಣವನ್ನು ಚಕಪೋಸ್ಟ ತನಿಖಾ ತಂಡದ ಮುಖ್ಯಸ್ಥರಾದ ಹರ್ಷವರ್ಧನ ಅಗಸರ್ ಮತ್ತು ಮಾಳಮಾರುತಿ ಪೋಲೀಸ್ ಠಾಣೆಯ ಸಿಬ್ಬಂದಿ ಅವರು ವಶಕ್ಕೆ ಪಡೆದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.ಸೂಕ್ತ ದಾಖಲೆಗಳನ್ನು ನೀಡಿ ಹಣವನ್ನು ಪಡೆದುಕೊಳ್ಳಬಹುದು. ಇಲ್ಲವಾದರೆ ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Read More

ಸರ್ಕಾರಿ ನೌಕರ ಬಿಜೆಪಿ ಪರ ಪ್ರಚಾರ ಮಾಡಿದ ಆರೋಪ ಮಂಜುನಾಥ್ ಅವರನ್ನು ಅಮಾನತು ಮಾಡಲಾಗಿದೆ

ಹಾಸನ:- ಸಂದೇಶದಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ ಆರೋಪದ ಮೇಲೆ ಹಾಸನದ ಡಿಡಿಪಿಐ ಕಛೇರಿಯ ಎಫ್.ಡಿ.ಎ ಬಿ.ಎಚ್. ಮಂಜುನಾಥ್ ಅವರನ್ನ ಸಸ್ಪೆಂಡ್ ಮಾಡಲಾಗಿದೆ.ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಅಧಿಕಾರಿಯನ್ನು ಅಮಾನತು ಮಾಡಿದ್ದು, 24 ಗಂಟೆಗಳೊಳಗಾಗಿ ಮಾಹಿತಿ ಒದಗಿಸಿ ಎಂದು ಎ.ಡಿ.ಸಿ ಶಾಂತಲಾ ಅವರು ನೋಟಿಸ್ ಜಾರಿ ಮಾಡಿದ್ದರಂತೆ.ಬಿಜೆಪಿ ಪಕ್ಷದ ಪರ ವಾಟ್ಸಾಪ್ ಗ್ರೂಪ್​​ನಲ್ಲಿ ಸಂದೇಶ ಕಳಿಸಿ ಪ್ರಚಾರ ನಡೆಸಿರುವ ಬಗ್ಗೆ ನಾಗೇಂದ್ರ ಎಂಬುವರು ದೂರು ನೀಡಿದ್ದರಂತೆ. ಪ್ರಕರಣದ ಬಗ್ಗೆ ಮಂಜುನಾಥ ಅವರ ವಿವರಣೆ ಹಾಗೂ ಡಿಸಿಪಿಐ…

Read More

ಬೆಳಗಾವಿಯಲ್ಲಿ ಕುಮಾರಸ್ವಾಮಿ ಲೇಔಟ್‌ನಲ್ಲಿ ಬಾಡಿಗೆ ಮನೆ ಮಾಡಿದ ಜಗದೀಶ್ ಶೆಟ್ಟರ್ 

ಬಿಜೆಪಿ ಅಭ್ಯರ್ಥಿ ಜಗದೀಶ್‌ ಶೆಟ್ಟರ್‌ ಅವರು ಚುನಾವಣಾ ಹಿನ್ನೆಲೆಯಲ್ಲಿ ಬೆಳಗಾವಿಯ ಕುಮಾರಸ್ವಾಮಿ ಲೇಔಟ್‌ನಲ್ಲಿ ಬಾಡಿಗೆ ಮನೆ ಮಾಡಿರುವ ಅವರು, ಇಂದು ಗೃಹ ಪ್ರವೇಶ ನೆರವೇರಿಸಿದ್ದಾರೆ. ಯುಗಾದಿ ಹಿನ್ನೆಲೆ ಬೆಳಗಾವಿಯಲ್ಲಿ ಗೃಹ ಪ್ರವೇಶ ಮಾಡಿದ್ದೇನೆ. ಬೆಳಗಾವಿಯಲ್ಲಿ ನಾನು ಕಚೇರಿಯನ್ನೂ ತೆರೆಯುತ್ತೇನೆ. ವಿಪಕ್ಷದವರಿಗೆ ಉತ್ತರ ಕೊಡುವುದಕ್ಕೆ ಮನೆ ಮಾಡಿಲ್ಲ. ನಾನು ಮನೆ ಮಾಡುವುದಾಗಿ ಹೇಳಿದ್ದೆ, ಮಾಡಿದ್ದೇನೆ ಎಂದು ಹೇಳಿದರು.ನಾನು ಕಾಂಗ್ರೆಸ್ ಪಕ್ಷಕ್ಕೆ ಹೋದಾಗ ಬಿಜೆಪಿಗೆ ಬೈದಿಲ್ಲ. ಪ್ರಧಾನಿ ಮೋದಿ, ಬಿಎಸ್​ ಯಡಿಯೂರಪ್ಪ, ಬಿಜೆಪಿ ಪಕ್ಷ ಟೀಕಿಸಿಲ್ಲ. ಸುಮ್ಮನೆ ಸುಳ್ಳು ಹೇಳಿಕೆ…

Read More

ಮಡಿಕೇರಿಯ ಆಂಜನೇಯ ದೇವಾಲಯದಲ್ಲಿ ಮಳೆಗಾಗಿ ಪ್ರಾರ್ಥನೆ

ಮಡಿಕೇರಿ  ಹರೇ ರಾಮ, ಕ್ರೋಧೀ ನಾಮ ಸಂವತ್ಸರದ ಕೊಡಗು ಹವ್ಯಕ ವಲಯ, ಬ್ರಾಹ್ಮಣರ ವಿದ್ಯಾಭಿವೃದ್ಧಿ ನಿಧಿ ಹಾಗೂ ವೈಭವ ತಂಡದ ಸಹಯೋಗದೊಂದಿಗೆ ಮಡಿಕೇರಿಯ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ರುದ್ರ ಸಹಿತ ವರುಣ ಸೂಕ್ತ ಪಠಣ ಮಾಡಲಾಯಿತು. ಲೋಕಕ್ಕೆ ಕಾಲಕಾಲಕ್ಕೆ ಮಳೆಯ‌ ಮೂಲಕ ಸುಭೀಕ್ಷೆ ಒದಗಿಸಿ, ಕ್ಷೇಮವಾಗಲಿ ಎಂದು ಶ್ರೀ ಆಂಜನೇಯ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

Read More

ಕಾರ್ಮಿಕ ಇಲಾಖೆ ಇನ್‌ ಸ್ಪೆಕ್ಟರ್ ಲೋಕಾಯುಕ್ತ ಬಲೆಗೆ

ಬೆಂಗಳೂರು: ಹೋಟೆಲ್‌ ವೊಂದರ ಪರವಾನಗಿ ಕೊಡಲು ಕಾರ್ಮಿಕ ಇಲಾಖೆ ಇನ್‌ ಸ್ಪೆಕ್ಟರ್ 9 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟದ್ದ. ಈ ಬಗ್ಗೆ ಮಂಗಳೂರು ಮೂಲದ ಹೋಟೆಲ್ ಮಾಲೀಕ ದೀಕ್ಷಿತ್ ಅವರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು.9 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಕಾರ್ಮಿಕ ಇಲಾಖೆ ಇನ್‌ ಸ್ಪೆಕ್ಟರ್ ರೆಡ್‌ ಹ್ಯಾಂಡಾಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಲಂಚ ಪಡೆಯುತ್ತಿದ್ದಾಗಲೇ ಕಾರ್ಮಿಕ ಭವನದಲ್ಲೇ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ

Read More

10/04/2024 ರಂದು 2023-24 ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟ

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಬುಧವಾರ ಪ್ರಕಟವಾಗಲಿದೆ. ದಿನಾಂಕ 10/04/2024 ರಂದು ಬೆಳಗ್ಗೆ 11 ಗಂಟೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳಿಂದ ಸುದ್ದಿಗೋಷ್ಠಿ ನಡೆಸಿದ ಬಳಿಕ ವೆಬ್‌ಸೈಟ್‌ನಲ್ಲಿ ಫಲಿತಾಂಶ  ಪ್ರಕಟವಾಗಲಿದೆರಾಜ್ಯಾದ್ಯಂತ ಈ ಬಾರಿ 1,124 ಕೇಂದ್ರಗಳಲ್ಲಿ 6.98 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.  2023-24 ಸಾಲಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ 80-20 ಮಾದರಿಯಲ್ಲಿ ಇರುತ್ತದೆ. ವಿದ್ಯಾರ್ಥಿಗಳು ಲಿಖಿತ ರೂಪದಲ್ಲಿ 80 ಅಂಕಗಳಿಗೆ ಪರೀಕ್ಷೆ ಬರೆಯುತ್ತಾರೆ. ಇನ್ನು ಉಳಿದ 20 ಅಂಕಗಳು ಆಂತರಿಕ ಮೌಲ್ಯಮಾಪನದ ಮೂಲಕ ನೀಡಲಾಗುತ್ತದೆವಿದ್ಯಾರ್ಥಿಗಳು ಮತ್ತು…

Read More

ಯುಗಾದಿ ಹಬ್ಬದ ಪ್ರಯುಕ್ತ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಿರಸಂಗಿಯ ಕಾಳಿಕಾ ದೇವಿಯ ದರ್ಶನ ಪಡೆದರು

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿಯ ಸುಪ್ರಸಿದ್ಧ ಶಕ್ತಿದೇವತೆ ಶ್ರೀ ಕಾಳಿಕಾದೇವಿಯ ದೇವಸ್ಥಾನಕ್ಕೆಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಭೇಟಿ ನೀಡಿ ದರ್ಶನ ಪಡೆದರು. ಈ ವೇಳೆ ಮಾತನಾಡಿದ ಸಚಿವರು, ವಿಶ್ವಕರ್ಮ ಸಮಾಜ ವಿಶ್ವವನ್ನೇ ಸೃಷ್ಟಿ ಮಾಡಿದ ಸಮಾಜ. ದೇಶದ ಯಾವುದೇ ಭಾಗಕ್ಕೆ ಹೋದರೂ ಸಮಾಜದ ಬಾಂಧವರು ಮೂಲ ಕಸುಬನ್ನು ಬಿಟ್ಟಿಲ್ಲ ಎಂದು ಹೇಳಿದರು.ಸಾಫ್ಟ್‌ವೇರ್ ಯುಗದಲ್ಲೂ‌ ವಿಶ್ವಕರ್ಮರ ಕಲೆಯನ್ನು ಯಾರೂ ಹಿಂದಿಕ್ಕಲು ಸಾಧ್ಯವಿಲ್ಲ ಎಂದರು. ಸಾಮಾಜಿಕ ಬದ್ಧತೆ ಸಾಮಾಜಿಕ ಕಳಕಳಿ ಹೊಂದುವುದು…

Read More

ಬರ ಪರಿಹಾರ ವರದಿ ಸಲ್ಲಿಸಲು ಸುಪ್ರೀಂ ಕೋರ್ಟ್ ಗಡುವು

ನವದೆಹಲಿ: ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಡಿ ಕರ್ನಾಟಕಕ್ಕೆಬಿಡುಗಡೆ ಮಾಡಿರುವ ಅನುದಾನ ಕುರಿತು ಎರಡು ವಾರಗಳಲ್ಲಿ ವರದಿ ನೀಡುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಬರ ಪರಿಹಾರ ಬಿಡುಗಡೆ ಮಾಡಲು ಕೇಂದ್ರ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯ ಮೂರ್ತಿ ಬಿ.ಆರ್.ಗವಾಯಿ ಅವರಿದ್ದ ಏಕಸದಸ್ಯ ಪೀಠ, ಪರಿಹಾರ ಬಿಡುಗಡೆ ಮಾಡಿರುವ ಕುರಿತು ಎರಡು ವಾರದಲ್ಲಿ ವರದಿ ನೀಡಬೇಕೆಂದು ಸೂಚಿಸಿದೆ.ಇದೇ ವೇಳೆ ನ್ಯಾಯಪೀಠ ಬರ ಪರಿಹಾರ ಬಿಡುಗಡೆ ವಿಚಾರದಲ್ಲಿ…

Read More

ಚುನಾವಣಾ ಕಾರ್ಯ ಹಾಗೂ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಳ್ಳುವುದನ್ನು ನಿಷೇಧಿಸಿದೆ.

ದಾವಣಗೆರೆ: ಪ್ರಸಕ್ತ ಸಾರ್ವತ್ರಿಕ ಲೋಕಸಭಾ ಚುನಾವಣಾ ಕಾರ್ಯ ಹಾಗೂ ಪ್ರಚಾರದಲ್ಲಿ18 ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ಬಳಸಿಕೊಳ್ಳುವುದನ್ನು ನಿಷೇಧಿಸಿದೆ. ಭಾರತ ಸರ್ಕಾರ ಹಾಗೂ ವಿಶ್ವಸಂಸ್ಥೆಯು ಮಕ್ಕಳ ಹಕ್ಕುಗಳಒಡಂಬಡಿಕೆ, 1992ರ ಡಿಸೆಂಬರ್ 11ರನ್ವಯ ಒಪ್ಪಿ ಅನುಮೋದಿಸಿದೆ.ಮಕ್ಕಳ ಹಕ್ಕುಗಳ ಒಡಂಬಡಿಕೆ ಹಾಗೂ ಮಕ್ಕಳ ನ್ಯಾಯ ,ಮಕ್ಕಳ ಪೋಷಣೆ ಮತ್ತು ರಕ್ಷಣೆ ಕಾಯ್ದೆ2015ರ ಅನ್ವಯ 18 ವರ್ಷದೊಳಗಿನ ಎಲ್ಲರೂಮಕ್ಕಳು ಎಂದು ಪರಿಗಣಿತವಾಗಿದೆ. ಮಕ್ಕಳ ಹಕ್ಕುಗಳ ಒಡಂಬಡಿಕೆಯ ಕಲಂ 32 ಮತ್ತು 36 ರಲ್ಲಿ ಮಕ್ಕಳಆರೋಗ್ಯ ಮತ್ತು ಶಿಕ್ಷಣಕ್ಕೆ ಅಪಾಯಕಾರಿಯಾದ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸದಂತೆ…

Read More