ದೇವಾಂಗ ಸಮಾಜದ ಗಣ್ಯರಿಗೆ ಶ್ರೀ ದಯಾನಂದ ಪುರಿ ಸ್ವಾಮೀಜಿಯವರಿಂದ ಸನ್ಮಾನ
ಬದಾಮಿ ಕರ್ನಾಟಕ ರಾಜ್ಯ ದೇವಾಂಗ ಸಂಘದ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯಿಂದ ಅವಿರೋಧವಾಗಿ ಆಯ್ಕೆಯಾದ ರಾಮದುರ್ಗದ ಶ್ರೀ ಶಂಕರಣ್ಣ ಎಮ್. ಮುರುಡಿ ಹಾಗೂ ಶ್ರೀ ಪ್ರಕಾಶ ಸೂಳಿಭಾವಿ ಅವರನ್ನು ಇಂದು ಬನಶಂಕರಿಯಲ್ಲಿರುವ ದೇವಾಂಗ ಶಾಖಾಮಠದಲ್ಲಿ ಶ್ರೀ ಶ್ರೀ ಶ್ರೀ ದಯಾನಂದ ಪುರಿ ಸ್ವಾಮೀಜಿಯವರು ಆಶೀರ್ವದಿಸಿ, ಗೌರವಪೂರ್ವಕವಾಗಿ ಸನ್ಮಾನಿಸಿದರು. ಅವಿರೋಧವಾಗಿ ಆಯ್ಕೆಯಾಗಿರುವ ಈ ಇಬ್ಬರೂ ನಾಯಕರು ಸಮಾಜದ ಸಂಘಟನೆ ಮತ್ತು ಅಭಿವೃದ್ಧಿಗೆ ಶ್ರಮಿಸಲಿ ಎಂದು ಪೂಜ್ಯ ಶ್ರೀಗಳು ಈ ಸಂದರ್ಭದಲ್ಲಿ ಹಾರೈಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ನಾಯಕರು, “ದೇವಾಂಗ ಸಮಾಜದ ಬಂಧುಗಳು…
