ರಾಣಿ ಅಹಲ್ಯಾಬಾಯಿ ಹೋಳ್ಕರ್ ಇವರ 301ನೇ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ
ಬೆಳಗಾವಿ: ಪಾಲಕರ ಹಾಗೂ ಶಿಕ್ಷಕರ ಮಾರ್ಗದರ್ಶನದಲ್ಲಿವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣ ಪಡೆದು ತಮ್ಮ ಹಾಗೂ ಪಾಲಕರ ಕನಸು ನನಸು ಮಾಡಲು ಶ್ರಮವಹಿಸಿ ಅಧ್ಯಯನ ಕೈಗೊಂಡು ಯಶ್ವಸಿಯಾಗ ಬೇಕೆಂದು ಉಪನ್ಯಾಸಕಿ ಶ್ರೀಮತಿ ಮೈತ್ರಾಯಿಣಿ ಗದಿಗೆಪ್ಪಗೌಡರ ಹೇಳಿದರು.ನಗರದ ಕನ್ನಡ ಸಾಹಿತ್ಯ ಭವನದಲ್ಲಿ ರವಿವಾರ ಸಂಜೆಕನಕ ಶ್ರೀ ಮಹಿಳಾ ಬಳಗ ಹಾಗೂ ಬೆಳಗಾವಿ ಸಮಸ್ತಕುರುಬರ ಸಂಘಗಳ ವತಿಯಿಂದರಾಷ್ಟ್ರಮಾತೆ ಅಹಲ್ಯಾಬಾಯಿ ಹೋಳ್ಕರ್ ಇವರ 301ನೇ ಜಯಂತಿ ಹಾಗೂ 10 ನೇ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆಪ್ರತಿಭಾ ಪುರಸ್ಕಾರ ಜರುಗಿತು.ಅಹಲ್ಯಾಬಾಯಿ ಹೊಳ್ಳರ್ ಅವರು ಮಧ್ಯ ಭಾರತದ…
