ಶಿರಸಂಗಿ : ಇನಾಂಗೋವನಕೊಪ್ಪ ಗ್ರಾಮದ ಶ್ರೀ ಗ್ರಾಮದೇವಿ ನೂತನ ದೇವಸ್ಥಾನದ ವಾಸ್ತುಶಾಂತಿ, ಉದ್ಘಾಟನೆ, ನೂತನ ರಾಜ ಗೋಪೂರದ ಕಳಸಾರೋಹಣ ಹಾಗೂ ಜಾತ್ರಾ ಮಹೋತ್ಸವ ಏಪ್ರಿಲ್ 20ರಿಂದ ಏಪ್ರಿಲ್ 29 ರವರೆಗೆ ಜರಗುವುದು.
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಇನಾಂಗೋವನಕೊಪ್ಪ ಗ್ರಾಮದ ಶ್ರೀ ಗ್ರಾಮದೇವಿ ನೂತನ ದೇವಸ್ಥಾನದ ವಾಸ್ತುಶಾಂತಿ, ಉದ್ಘಾಟನೆ, ನೂತನ ರಾಜ ಗೋಪೂರದ ಕಳಸಾರೋಹಣ ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮವು ಏಪ್ರಿಲ್ 20ರಿಂದ ಏಪ್ರಿಲ್ 29 ರವರೆಗೆ ಜರಗುವುದು. ಸೋಮವಾರ ದಿ: 20-4-2026, ಮುಂಜಾನೆ 10-00 ಗಂಟೆ. ನವಗೃಹ ಹಾಗೂ ಘನ ಹೋಮ & ಹವನ ಶ್ರೀ ದೇವಿಯ ಮೂರ್ತಿಗೆ ರುದ್ರಾಭಿಷೇಕ ಹಾಗೂ ಗೋಮಾತೆಯ ಪೂಜೆಯ ನಂತರ ದೇವಸ್ಥಾನದ ಉದ್ಘಾಟನೆ ನಂತರ ನೂತನ…
