ರಾಮದುರ್ಗ ತಾಲೂಕಾ ಛಾಯಾಗ್ರಾಹಕರ ಮತ್ತು ವಿಡಿಯೋಗ್ರಾಫರ್ ಅಸೋಶಿಯೇಷನ್ 20ನೇ ವಾರ್ಷಿಕೋತ್ಸವ ಹಾಗೂ 187ನೇ ವಿಶ್ವ ಛಾಯಾಗ್ರಹನ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಅಶೋಕ ಮ. ಪಟ್ಟಣ ಉದ್ಘಾಟಿಸಿದರು.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ತುರನೂರ ಗ್ರಾಮದ ವಿಶ್ವೇಶ್ವರಯ್ಯ ಕಲ್ಯಾಣ ಮಂಟಪದಲ್ಲಿ ರವಿವಾರರಂದು ರಾಮದುರ್ಗ ತಾಲೂಕಾ ಛಾಯಾಗ್ರಾಹಕರ ಮತ್ತು ವಿಡಿಯೋಗ್ರಾಫರ್ ಅಸೋಶಿಯೇಷನ್ 20ನೇ ವಾರ್ಷಿಕೋತ್ಸವ ಹಾಗೂ 187ನೇ ವಿಶ್ವ ಛಾಯಾಗ್ರಹನ ದಿನಾಚರಣೆ ಕಾರ್ಯಕ್ರಮವನ್ನು ಕರ್ನಾಟಕ ಸರಕಾರ ಮುಖ್ಯ ಸಚೇತಕರು, ಶಾಸಕರು ವಿಧಾನಸಭಾ ಕ್ಷೇತ್ರ ರಾಮದುರ್ಗ ಅಶೋಕ ಮ. ಪಟ್ಟಣ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು ಮೊಬೈಲ್ ಕ್ಯಾಮೆರಾ ಮತ್ತು ಎಐ (AI) ತಂತ್ರಜ್ಞಾನದಿಂದ ಫೋಟೋಗ್ರಾಫಿ ಅನ್ನೋದು ಹೋಗಿಬಿಟ್ಟಿದೆ. ಸಣ್ಣಪುಟ್ಟ ಕಾರ್ಯಕ್ರಮಗಳು, ಪಾಸ್‌ಪೋರ್ಟ್ ಸೈಜ್ ಫೋಟೋಗಳು…
