ರಾಮದುರ್ಗಪಟ್ಟಣದ ತಾ.ಪಂ ಸಂಭಾಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಮಾತನಾಡಿದರು.
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದಿ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಾ ವೈದ್ಯಾಧಿಕಾರಿ ನವೀನ ನಿಜಗುಲಿ ಅವರು ಸಭೆಗೆ ತಮ್ಮ ಇಲಾಖೆ ಪ್ರಗತಿ ಕುರಿತು ಸಭೆಗೆ ಮಾಹಿತಿ ನೀಡುತ್ತಿದ್ದಂತೆ ಶಾಸಕ ಅಶೋಕ ಪಟ್ಟಣ ಅವರು ಅಲ್ಲಿನ ಸಮಸ್ಯೆ ಕುರಿತು ಚರ್ಚಿಸುವ ಮೂಲಕ ಎಚ್ಚರಿಕೆ ನೀಡಿದರು.ಸರಕಾರಿ ಆಸ್ಪತ್ರೆ ಎಂದರೆ ಬಡವರ ಆರೋಗ್ಯ ರಕ್ಷಿಸುವ ಕೇಂದ್ರವಾಗಬೇಕು. ಅದು ಹಣ ಸುಲಿಗೆ ಮಾಡುವ ಕೇಂದ್ರವಾಗಬಾರದು ಎಂದು ಕಡಕ್ಕಾಗಿ ಎಚ್ಚರಿಕೆ ನೀಡಿದರು.ಜಿಲ್ಲಾ ಪಂಚಾಯತ್ ಉಪ…
