ಅಕ್ಟೋಬರ್ 1ರಂದು ಸುಗೂರ ಎನ್ ಗ್ರಾಮದ ಶ್ರೀ ಭೋಜಲಿಂಗೇಶ್ವರ ಮಠದಲ್ಲಿ ಕೂರಿಗಿ ಪೂಜೆ
ಕಲಬುರಗಿ: ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮದಲ್ಲಿರುವ ಪವಾಡ ಪುರುಷ ಸಚ್ಚಿದಾನಂದ ನಿತ್ಯ ನಿರಂಜನ ಮೂರ್ತಿ ಸ್ವಯಂ ಸಿದ್ಧ ಶರಣ ಸದ್ಗುರು ಶ್ರೀ ಭೋಜಲಿಂಗೇಶ್ವರ ಮಠದಲ್ಲಿ ರೈತರ ಹಿತಕ್ಕಾಗಿ ಆಚರಿಸಲಾಗುವ ವಿಶಿಷ್ಟ ಕೂರಿಗಿ ಪೂಜೆ (ಕೊರಗಿ ಪೂಜೆ/ಬಿತ್ತನೆ ಪೂಜೆ) ಕಾರ್ಯಕ್ರಮವು ಅಕ್ಟೋಬರ್ 1ರಂದು ಗುರುವಾರ ದಿನದಂದು ಸಂಜೆ 6 ಗಂಟೆಗೆ ನಡೆಯಲಿದೆ. ಉತ್ತರ ಕರ್ನಾಟಕದ (ಕಲ್ಯಾಣ ಕರ್ನಾಟಕ ಭಾಗದಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ವಿಶೇಷ ಮಹತ್ವ ಹೊಂದಿರುವ ಈ ಸಂಪ್ರದಾಯವನ್ನು ಪ್ರತಿ ವರ್ಷ ಭಕ್ತಿಭಾವದಿಂದ ಆಚರಿಸಲಾಗುತ್ತದೆ. ಉತ್ತಮ…
