ಯಡ್ರಾವಿ ಶಾಲೆಯ ವೇಳೆಗೆ ಬೆಳಿಗ್ಗೆ ತಲುಪಲು ಸಮರ್ಪಕ ಬಸ್ಸುಗಳ ವ್ಯವಸ್ಥೆ ಇಲ್ಲದೆ ಶಾಲಾ ಮಕ್ಕಳು ಪರದಾಡುವಂತಾಗಿದೆ
ಸವದತ್ತಿಯ ತಾಲೂಕಿನ ಸರ್ಕಾರಿ ಆದರ್ಶ ವಿದ್ಯಾಲಯ ಯಡ್ರಾವಿ ಶಾಲೆಗೆ ತಾಲೂಕಿನ ಸುಮಾರು 30 ಹಳ್ಳಿಗಳಿಂದ ಆಯ್ಕೆಯಾಗಿರುವ 500ಕ್ಕೂ ಹೆಚ್ಚು ಪ್ರತಿಭಾವಂತ ಮಕ್ಕಳು ಜ್ಞಾನಾರ್ಜನೆ ಮಾಡುತ್ತಿದ್ದಾರೆ. ಆದರೆ ಈ ಮಕ್ಕಳಿಗೆ ಸುರಕ್ಷಿತ ಮತ್ತು ಸಮಯಕ್ಕೆ ಸರಿಯಾಗಿ ಶಾಲೆಯ ವೇಳೆಗೆ ಬೆಳಿಗ್ಗೆ ತಲುಪಲು ಸಮರ್ಪಕ ಬಸ್ಸುಗಳ ವ್ಯವಸ್ಥೆ ಇರುವುದಿಲ್ಲ ಮತ್ತು ಶಾಲೆ ಬಿಟ್ಟ ನಂತರ ಇವರಿಗೆ ವಾಪಸ್ ಮನೆಗೆ ಹೋಗಲು ಸೂಕ್ತ ಬಸ್ಸುಗಳ ಸೌಲಭ್ಯ ಮತ್ತು ಬಸ್ಸು ತಂಗುದಾಣ ಇಲ್ಲದೆ ರಸ್ತೆಯ ಅರ್ಧ ಭಾಗದಲ್ಲಿ ನಿಂತು ಪ್ರತಿದಿನವೂ ಬಸ್ಸುಗಳಿಗಾಗಿ ಮಳೆಗಾಲದಲ್ಲಿ…
