ಭಾಗ್ಯನಗರದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಹಾನಿಗೊಳಿಸಿದ ಕಿಡಿಗೇಡಿಗಳು
ಹೊಸ ಪೈಪ್ ಲೈನ್ ಹಾಕಿದ ಮರುದಿನವೇ ಕಿಡಿಗೇಡಿಗಳು ಪೈಪ್ ಗೆ ಹಾನಿ ಮಾಡಿದ್ದಾರೆ. ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ವಾರ್ಡ್ ನಂಬರ್ 23 ರಲ್ಲಿ ಭಾಗ್ಯನಗರದಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಪೈಪ್ ಒಂದು ದಿನದ ಹಿಂದೆ ಪುರಸಭೆ ವತಿಯಿಂದ ಹೊಸ ಪೈಪ್ ಲೈನ್ ಹಾಕಿದ್ದರು. ಆದರೆ ಅಲ್ಲಿ ಇದ್ದಂತ ಕೆಲವೊಂದು ಕಿಡಿಗೇಡಿಗಳುಕುಡಿಯುವ ನೀರಿನ ಪೈಪ್ ಲೈನ್ ಗಳಿಗೆ ಕಲ್ಲುಗಳನ್ನು ಒಗೆದು ಪೈಪ್ ಲೈನ್ ಅನ್ನು ಹಾನಿಗೊಳಿಸಿದ ಘಟನೆ ನಡೆದಿದೆ.
