ರಾಮದುರ್ಗದಲ್ಲಿ ಶಾಂತಿಯಿಂದ ಈದ್ ಮಿಲಾದ್ ಆಚರಿಸಿ : ಸಿಪಿಐ ವಿನಾಯಕ್ ಬಡಿಗೇರ
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಪೊಲೀಸ್ ಠಾಣೆ ಅವರಣದಲ್ಲಿ ಶನಿವಾರ ಈದ್ ಮಿಲಾದ್ ಹಬ್ಬದ ಪ್ರಯುಕ್ತ ವಿವಿಧ ಸಮಾಜದ ಮುಖಂಡರ ಸಮ್ಮುಖದಲ್ಲಿ ಜರುಗಿದ ಶಾಂತಿ ಪಾಲನಾ ಸಭೆಯ ಅಧ್ಯಕ್ಷತೆಯನ್ನು ಸಿಪಿಐ ವಿನಾಯಕ್ ಬಡಿಗೇರ್ ವಹಿಸಿ ಅವರು ಮಾತನಾಡಿದರು. ಪ್ರವಾದಿ ಮಹಮ್ಮದ ಅವರ ಸಂದೇಶ ಸಾರಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗುವ ಧಾರ್ಮಿಕ ಮೆರವಣಿಗೆಯನ್ನು ಅರ್ಥಪೂರ್ಣವಾಗಿ ನೆರವೇರಿಸಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವನ್ನು ಕಲ್ಪಿಸದೇ ಈದ್ ಮಿಲಾದ್ ಹಬ್ಬವನ್ನು ಪ್ರತಿಯೊಬ್ಬರೂ ಶಾಂತ ರೀತಿಯಿಂದ ಸೌಹಾರ್ದಯುತವಾಗಿ ಆಚರಣೆ ಮಾಡಬೇಕು.ಹಬ್ಬಗಳನ್ನು ಶಾಂತಿಯಿಂದ…
