ನಂದವಾಡಗಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

WhatsApp Group Join Now

ಬಾಗಲಕೋಟ್ ಜಿಲ್ಲೆ ಇಲಕಲ್ ತಾಲೂಕಿನ ನಂದವಾಡಗಿ ಗ್ರಾಮದ ಕುಡಿಯುವ ನೀರಿಗಾಗಿ ಜನರು ಗೋಳಾಡುತ್ತಿದ್ದಾರೆ. ನೀರು ಪೂರೈಸದ ಅಧಿಕಾರಿಗಳ ವಿರುದ್ಧ ಖಾಲಿ ಕೊಡ ಹಿಡಿದುಕೊಂಡು ಗ್ರಾಮ ಪಂಚಾಯಿತಿ ಬಳಿ ಪ್ರತಿಭಟನೆ ನಡೆಸಿದರು.

ನೀರು ಪೂರೈಕೆ ಆಗುತ್ತಿಲ್ಲ, ನೀವೇನು ಕೆಲಸ ಮಾಡುತ್ತಿದ್ದೀರಿ? ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು

ಅಧಿಕಾರಿಗಳ ನಿರ್ಲಕ್ಷ ಕೂಡಿಯುವ ನೀರಿಗಾಗಿ ನಂದವಾಡಗಿ ಗ್ರಾಮದ ಜನರ ನೀರಿಗಾಗಿ ಪರದಾಡುವಂತಾಗಿದೆ ಕುಡಿಯುವ ನೀರಿಗಾಗಿ ಸುಮಾರು ವರ್ಷಗಳಿಂದ ಜನರು ತುಂಬಾ ಸಂಕಷ್ಟದಿಂದ ಪರದಾಟವನ್ನು ಅನುಭವಿಸುತ್ತಾ ಇದ್ದಾರೆ. ಹಾಗೆ ಎಷ್ಟು ಸಾರಿ ಗ್ರಾಮ ಪಂಚಾಯತಿ ಸದಸ್ಯರಿಗೂ ಅಧ್ಯಕ್ಷರಗೂ ಹಾಗೂ ಪಿಡಿಒ ಗಮನಕ್ಕೆ ತಂದರು ಸಹ “ದಿವ್ಯ ನಿರ್ಲಕ್ಷ್ಯವಹಿಸಿದ್ದಾರೆ”. ಇಲ್ಲಿಯ ಜನರು ಸುಮಾರು ವರ್ಷಗಳಿಂದ ಪರಿಸ್ಥಿತಿ ಹೀಗೆ ಉಂಟಾಗಿದೆ. ನಲ್ಲಿ ನೀರು ಇಲ್ಲವೆಂದರೆ ಉಪ್ಪು ನೀರು ಕುಡಿಯುವ ಪರಿಸ್ಥಿತಿ ಬಂದಿದೆ ಅದಕ್ಕೆ ಎಲ್ಲಾ ಜನರು ಗ್ರಾಮ ಪಂಚಾಯಿತಿಗೆ ಬಂದು ನಮಗೆ ಕುಡಿಯೋಕೆ ನೀರು ಕೊಡಿ ಇಲ್ಲವಾದರೆ ನಂದವಾಡಗಿ ಏತು ನೀರಾವರಿ ಸಂಪೂರ್ಣ ನೀರು ಹರಿಸಿ ಎಂದು ಗ್ರಾಮದ ಜನರು ಬೇಡಿಕೊಂಡರು ಗ್ರಾಮ ಪಂಚಾಯಿತಿಯ ಮುಂದೆ ಪಂಚಾಯಿತಿಗೆ ಬೀಗ ಜಡಿದು ಉಗ್ರ ಹೋರಾಟ ಮಾಡ ಬೇಕಾಗುತ್ತದೆ ಎಂದು ಜನರು ಎಚ್ಚರಿಕೆಯನ್ನು ನೀಡಿದರು.

 ಈ ಪ್ರತಿಭಟನೆಯಲ್ಲಿ ಕುಡಿಯುವ ನೀರು ಸಿಗದೇ ಗ್ರಾಮಸ್ಥರು ಪರದಾಡುತ್ತಿದ್ದಾರೆ ಯಾವುದೇ ಮೂಲದಿಂದಾರೂ ಕುಡಿಯುವ ನೀರು ಪೂರೈಕೆ ಮಾಡಿ ಎಂದು ಮಹಿಳೆಯರು ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು. ಜಿಲ್ಲಾಡಳಿತ ಯಾವುದೇ ಭಾಗದಲ್ಲಿ ಕುಡಿಯುವ ನೀರು ಸಿಗದೇ ಜನ ಜಾನವಾರು ಇರದಂತೆ ನೋಡಿ ಕೊಳ್ಳಿ ಎಂದು ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದರೂ ಪಂಚಾಯತಿ ಅಧಿಕಾರಿಗಳು ಕಣ್ಣು ಕಿವಿ ಮುಚ್ಚಿಕೊಂಡು ಕುಳಿತಿದ್ದಾರೆ ಎಂದು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದರು ಇನ್ನು ಮುಂದೆ ಆದರೂ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡುತ್ತಾರೆ ಎಂದು ಕಾದು ನೋಡಬೇಕಾಗಿದೆ

About The Author