
WhatsApp Group
Join Now
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಜಾಲಿಹಾಳ ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2,90,000 ಎರಡು ಲಕ್ಷ ತೊಂಬತ್ತು ಸಾವಿರ ರೂಪಾಯಿ ಹಣವನ್ನು ಬಾದಾಮಿ ಪೊಲೀಸ್ ಠಾಣೆಯ ಪಿ. ಎಸ್. ಐ. ವಿಠಲ್ ನಾಯಕ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ
ಮಹಂತೇಶ್ ಖಾನಾಪೂರ, ಕೆರೂಟಗಿ ಸೇರಿ ಕಾರ್ಯಚರಣೆ ನಡೆಸಿ ಪರಿಶೀಲಿಸಿ ಅಕ್ರಮ ಹಣ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆ ಕಟ್ಟು ನಿಟ್ಟಿನ ಕರ್ತವ್ಯದಲ್ಲಿರುವ ಪೋಲಿಸ್ ಸಿಬ್ಬಂದಿ.
ಲೋಕಸಭೆ ಚುನಾವಣೆ ಘೋಷಣೆಯಾದ ಹಿನ್ನೆಲೆ ಪೋಲಿಸರು ಸಿಸಿ ಕ್ಯಾಮರಗಳಂತೆ ಎಲ್ಲಾಕಡೆ ಕಣ್ಣಾಯಿಸುತ್ತಿದ್ದಾರೆ. ದಾಖಲೆಯಿಲ್ಲದೆ ಅಧಿಕ ಮೊತ್ತದ ಹಣ ಸಾಗಿಸುವುದು ಹೆಚ್ಚಿನ ಪ್ರಮಾಣದಲ್ಲಿ ಸೀರೆ ಕುಕ್ಕರ್ ಮತ್ತಿತರೆ ವಸ್ತುಗಳನ್ನು ಕಂಡು ಬಂದ ಮಾಹಿತಿ ಮೇರೆಗೆ ಪೋಲಿಸ್ ಇಲಾಖೆಗೆ ದಾಳಿ ಮಾಡಿ ಬಂಧಿಸುತ್ತಿದ್ದಾರೆ.


