ಸವದತ್ತಿ ತಾಲೂಕಿನ ಕಲ್ಲಾಪೂರ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಕಾ ಹಬ್ಬವನ್ನು ಆಚರಿಸಲಾಯಿತು ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷರಾದ ಶ್ರೀ ಪ್ರಕಾಶ ಅಳಗೋಡಿ ಯವರು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಮಲ್ಲಪ್ಪ ಕಪಲನ್ನವರ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಸದಸ್ಯರಾದ ಶ್ರೀ ಬಸವರಾಜ ಕಡಕೋಳ ಮಹಾಂತೇಶ ಪಂಚೇನವರ ಪ್ರಕಾಶ ಮೊರಬದ ಗಂಗಪ್ಪ ನಾಗನೂರ ಸಂತೋಷ ಕಣವಿ ಶ್ರೀ ನಾಗನಗೌಡ ಸಿದ್ಧನ ಗೌಡ್ರ ಶ್ರೀಮತಿ ವಿಜಯಲಕ್ಷ್ಮಿ ಹಿರೇಮಠ ಶ್ರೀಮತಿ ಪಾರ್ವತಿ ನರಹಟ್ಟಿ ಶೀಮತಿ ಬುಡ್ಡಿಮಾ ಮುನವಳ್ಳಿ ಭಾಗವಹಿಸಿದ್ದರು. ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಎಸ್ ಎಮ್ ಕುಂಬಾರ ಇವರು ಸ್ವಾಗತ ಮಾಡುವದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಕರಿಗಾರ ಇವರು ಕಾರ್ಯಕ್ರಮದ ನಿಯಮ ತಿಳಿಸಿದರು ಎಸ್ ಡಿ ಎಂ ಸಿ ಸದಸ್ಯರಾದ ಶ್ರೀ ಬಸವರಾಜ ಕಡಕೋಳ ಇವರು ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸುವದು ಮುಖ್ಯ ಎಂದು ತಿಳಿಸಿದರು
ಕಲ್ಲಾಪೂರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಕಾ ಹಬ್ಬವನ್ನು ಆಚರಿಸಲಾಯಿತು.

WhatsApp Group
Join Now


