ಶಿರಸಂಗಿ ವಿವಿದೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿ.,ಶಿರಸಂಗಿ ಇವರ ವತಿಯಿಂದ ಬೆಳೆಸಾಲ ವಿತರಣೆ ಕಾರ್ಯಕ್ರಮ.

WhatsApp Group Join Now

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದ ಪಾಂಡುರಂಗ ದೇವಸ್ಥಾನ ಸಮುದಾಯ ಭವನದಲ್ಲಿ ವಿವಿದೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿ.,ಶಿರಸಂಗಿ ಇವರ ವತಿಯಿಂದ ಬೆಳೆಸಾಲ ವಿತರಣೆ ಕಾರ್ಯಕ್ರಮವನ್ನು ಬೆಳಗಾವಿ ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕರು ವಿರೂಪಾಕ್ಷಣ್ಣ ಕ. ಮಾಮನಿ ಅವರು ಸಸಿಗೆ ನೀರು ಉಣಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು ಒಬ್ಬ ರೈತರಿಗೆ ಒಂದು ಎಕರೆಗೆ ಒಣ ಬೇಸಾಯ 35 ಸಾವಿರ ಹಾಗೂ ನೀರಾವರಿ ಕಬ್ಬು 40 ಸಾವಿರ ಬೆಳೆಸಾಲ ವಿತರಣೆ ಮಾಡಬಹುದು ಅದನ್ನು ಹೆಚ್ಚು ಮಾಡಲು ಬ್ಯಾಂಕಿನಲ್ಲಿ ಯಾವುದೇ ಸೌಲಭ್ಯ ಇಲ್ಲ ಡಿಸಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲೆ ಕಮಿಟಿಯವರು ಹೆಚ್ಚು ಮಾಡಬಹುದು ಹಾಗೂ 11 ಕೋಟಿ ಇದ್ದಿದ್ದು ಇವಾಗ 21ವರಿಕೋಟಿ ಆಗಿದೆ. ಸವದತ್ತಿ ತಾಲೂಕಿಗೆ ಇದ್ದು ಜಾಸ್ತಿ ಇದ್ದು ಈ ಭಾಗದ ಎಲ್ಲಾ ರೈತರು ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಈ ವೇಳೆ ಪೂಜ್ಯ ಮ.ಘ.ಜ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮುಳ್ಳೂರ ಇವರು ದಿವ್ಯ ಸಾನಿಧ್ಯ ವಹಿಸಿದರು

ಈ ಸಂದರ್ಭದಲ್ಲಿ ಅಧ್ಯಕ್ಷತೆ ಮಹಾಂತೇಶ ಶಿದ್ದಪ್ಪ ಪಂಚೇನವರ
ಚಂದ್ರಶೇಖರ ಕೋರೆ ಡಿ.ಸಿ.ಸಿ ಬ್ಯಾಂಕ್ ತಾಲ್ಲೂಕಾ ನಿಯಂತ್ರಣಾಧಿಕಾರಿಗಳು ಸವದತ್ತಿ, ಶಿವಾನಂದ ಎಸ್.ಶಿದ್ದನ್ನವರ ಬ್ಯಾಂಕ್ ನಿರೀಕ್ಷಕರು ಡಿ.ಸಿ.ಸಿ ಬ್ಯಾಂಕ್ಸ್ ಮುನವಳ್ಳಿ , ಜಗದೀಶ ಕೌಜಗೇಕರಿ ಪಿಕೆಪಿಎಸ್ ಅಧ್ಯಕ್ಷರು ಹರಳಕಟ್ಟೆ, ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸರು ಪಾಲ್ಗೊಂಡಿದ್ದರು.

About The Author